ICC Most Valuable Team of T20 World Cup 2022: T20 ವಿಶ್ವಕಪ್ 2022 ಭಾನುವಾರ (ನವೆಂಬರ್ 13) ರಂದು ಕೊನೆಗೊಂಡಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಪ್ರಶಸ್ತಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 137 ರನ್ ಗಳಿಸಿತು. ಶಾನ್ ಮಸೂದ್ (38) ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರೆ, ಆಂಗ್ಲ ವೇಗಿ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 138 ರನ್ ಗಳಿಸಿ ವಿಶ್ವಕಪ್ ಎತ್ತಿಹಿಡಿಯಿತು. ಬೆನ್ ಸ್ಟೋಕ್ಸ್ (ಔಟಾಗದೆ 52; 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್) ಸೂಪರ್ ಇನಿಂಗ್ಸ್ ಆಡಿದರು. ಪಾಕ್ ಬೌಲರ್ ಗಳ ಪೈಕಿ ರೌಫ್ 2 ವಿಕೆಟ್ ಪಡೆದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ICC Mens T20 World Cup 2022 : ಎರಡನೇ ಬಾರಿ ಟಿ 20 ವಿಶ್ವಕಪ್ ಎತ್ತಿ ಹಿಡಿದ ಇಂಗ್ಲೆಂಡ್


T20 ವಿಶ್ವಕಪ್ 2022 ಮುಗಿದ ಮರುದಿನ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಅತ್ಯಮೂಲ್ಯ ಆಟಗಾರರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆರು ದೇಶಗಳ ಆಟಗಾರರಿಗೆ ಅವಕಾಶ ಸಿಕ್ಕಿದೆ. ಭಾರತದಿಂದ ಇಬ್ಬರಿಗೆ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಸಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನು ಅತ್ಯುತ್ತಮ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ.


ಐಸಿಸಿ ಆರಂಭಿಕರಾಗಿ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) ಅವರನ್ನು ಆಯ್ಕೆ ಮಾಡಿದೆ. ಮೂರನೇ ಸ್ಥಾನವನ್ನು ವಿರಾಟ್ ಕೊಹ್ಲಿಗೆ, ನಾಲ್ಕನೇ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಮತ್ತು ಐದನೇ ಸ್ಥಾನವನ್ನು ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) ಅವರಿಗೆ ನೀಡಲಾಗಿದೆ.


ಆಲ್ ರೌಂಡರ್ ಕೋಟಾದಲ್ಲಿ ಸಿಕಂದರ್ ರಜಾ (ಜಿಂಬಾಬ್ವೆ) ಮತ್ತು ಶಾದಾಬ್ ಖಾನ್ (ಪಾಕಿಸ್ತಾನ) ಅವರಿಗೆ ಅವಕಾಶ ನೀಡಲಾಗಿದೆ. ಬೌಲರ್‌ಗಳಾಗಿ ಸ್ಯಾಮ್ ಕರನ್, ಎನ್ರಿಚ್ ನಾರ್ಜ್ (ದಕ್ಷಿಣ ಆಫ್ರಿಕಾ), ಮಾರ್ಕ್ ವುಡ್ (ಇಂಗ್ಲೆಂಡ್), ಶಾಹೀನ್ ಅಫ್ರಿದಿ (ಪಾಕಿಸ್ತಾನ) ಅವರಿಗೆ ಐಸಿಸಿ ಅವಕಾಶ ನೀಡಿದೆ. ಹಾರ್ದಿಕ್ ಪಾಂಡ್ಯ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.


2022 ರ ಟಿ 20 ವಿಶ್ವಕಪ್‌ನಲ್ಲಿ 98.66 ರ ಸರಾಸರಿಯಲ್ಲಿ 296 ರನ್ ಗಳಿಸಿದ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಏಕಾಂಗಿಯಾಗಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದಿದ್ದರು (ಅಜೇಯ 82). ಅಷ್ಟೇ ಅಲ್ಲದೆ ಬಾಂಗ್ಲಾದೇಶ ವಿರುದ್ಧ 64, ನೆದರ್ಲೆಂಡ್ಸ್ ವಿರುದ್ಧ 62 ಮತ್ತು ಇಂಗ್ಲೆಂಡ್ ವಿರುದ್ಧ 50 ರನ್ ಗಳಿಸಿದರು.


ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಭಜ್ಜಿ..!


ಸೂರ್ಯಕುಮಾರ್ ಯಾದವ್ 2022 ರ ವಿಶ್ವಕಪ್‌ನಲ್ಲಿ 239 ರನ್‌ಗಳೊಂದಿಗೆ ಪ್ರಭಾವಿತರಾಗಿದ್ದರು. ಅವರು ನೆದರ್ಲೆಂಡ್ಸ್ ವಿರುದ್ಧ 51, ದಕ್ಷಿಣ ಆಫ್ರಿಕಾ ವಿರುದ್ಧ 68 ಮತ್ತು ಜಿಂಬಾಬ್ವೆ ವಿರುದ್ಧ 61 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.