Ben Stokes : 2016 ರ ವಿಶ್ವಕಪ್ ವಿಲನ್ ನಿಂದ 2019, 2022 ರ ವಿಶ್ವಕಪ್ ನ ಹೀರೋ ಆಗಿದ್ದು ಹೇಗೆ?

 ಇಂಗ್ಲೆಂಡಿನ ಸ್ಪೋಟಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಈಗ ಆರು ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಟಿ20 ಫೈನಲ್ ನಲ್ಲಿ ತಮ್ಮ ಸಮಯೋಚಿತ ಆಟದಿಂದ ತಂಡಕ್ಕೆ ಆಸರೆಯಾಗುವ ಮೂಲಕ ಇಂಗ್ಲೆಂಡ್ ತಂಡವು ಎರಡನೇ ಬಾರಿ ಟಿ 20 ವಿಶ್ವಕಪ್ ಗೆಲ್ಲುವಲ್ಲಿ ನೆರವಾಗಿದ್ದಾರೆ.ಆ ಮೂಲಕ ಈ ಹಿಂದೆ  2016 ರ ಐಸಿಸಿ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಸೋಲಿಗೆ ಕಾರಣವಾಗಿದ್ದ ತಮ್ಮ ಕಹಿ ನೆನಪನ್ನು ಮರೆತಿದ್ದಾರೆ.

Written by - Zee Kannada News Desk | Last Updated : Nov 13, 2022, 07:29 PM IST
  • ಹೌದು, ನಿಮಗೆ ನೆನಪಿರಬಹುದು 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಅಂತಿಮ ಓವರ್ ನಲ್ಲಿ 19 ರನ್ ಗಳ ಅಗತ್ಯವಿತ್ತು,
  • ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ತಂಡವು ಗೆಲ್ಲುವ ಹಂತದಲ್ಲಿತ್ತು,
  • ಆದರೆ ಸ್ಟೋಕ್ಸ್ ಅವರ ಓವರ್ ನಲ್ಲಿಬ್ರಾಥ್‌ವೈಟ್ ಸತತ ನಾಲ್ಕು ಸಿಕ್ಸರ್‌ಗಳಿಗೆ ಹೊಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಎರಡನೇ ಟಿ20 ವಿಶ್ವಕಪ್ ನ್ನು ಗೆದ್ದುಕೊಟ್ಟಿದ್ದರು.
Ben Stokes : 2016 ರ ವಿಶ್ವಕಪ್ ವಿಲನ್ ನಿಂದ 2019, 2022 ರ ವಿಶ್ವಕಪ್ ನ ಹೀರೋ ಆಗಿದ್ದು ಹೇಗೆ? title=

ಮೆಲ್ಬೋರ್ನ್:  ಇಂಗ್ಲೆಂಡಿನ ಸ್ಪೋಟಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಈಗ ಆರು ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಟಿ20 ಫೈನಲ್ ನಲ್ಲಿ ತಮ್ಮ ಸಮಯೋಚಿತ ಆಟದಿಂದ ತಂಡಕ್ಕೆ ಆಸರೆಯಾಗುವ ಮೂಲಕ ಇಂಗ್ಲೆಂಡ್ ತಂಡವು ಎರಡನೇ ಬಾರಿ ಟಿ 20 ವಿಶ್ವಕಪ್ ಗೆಲ್ಲುವಲ್ಲಿ ನೆರವಾಗಿದ್ದಾರೆ.ಆ ಮೂಲಕ ಈ ಹಿಂದೆ  2016 ರ ಐಸಿಸಿ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಸೋಲಿಗೆ ಕಾರಣವಾಗಿದ್ದ ತಮ್ಮ ಕಹಿ ನೆನಪನ್ನು ಮರೆತಿದ್ದಾರೆ.

ಹೌದು, ನಿಮಗೆ ನೆನಪಿರಬಹುದು 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಅಂತಿಮ ಓವರ್ ನಲ್ಲಿ 19 ರನ್ ಗಳ ಅಗತ್ಯವಿತ್ತು, ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ತಂಡವು ಗೆಲ್ಲುವ ಹಂತದಲ್ಲಿತ್ತು, ಆದರೆ ಸ್ಟೋಕ್ಸ್ ಅವರ ಓವರ್ ನಲ್ಲಿ ವಿಂಡೀಸ್‌ನ ಆಲ್‌ರೌಂಡರ್ ಬ್ರಾಥ್‌ವೈಟ್ ಸತತ ನಾಲ್ಕು ಭರ್ಜರಿ ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಎರಡನೇ ಟಿ20 ವಿಶ್ವಕಪ್ ನ್ನು ಗೆದ್ದುಕೊಟ್ಟಿದ್ದರು.

ಈ ಕಹಿ ಸೋಲಿನ ನಂತರ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ಧದ ಆಸೀಸ್ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧದ 2019 ರ ವಿಶ್ವಕಪ್ ನಲ್ಲಿ ನೀಡಿದ ವಿರೋಚಿತ ಪ್ರದರ್ಶನದಿಂದಾಗಿ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

2020 ರಲ್ಲಿ ಸ್ಟೋಕ್ಸ್ ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಮಾನಸಿಕವಾಗಿ ಕುಸಿದುಹೋಗಿದ್ದರು.ಇದಕ್ಕಾಗಿ ಅವರು ಸುದೀರ್ಘ ವಿರಾಮವನ್ನು ತೆಗೆದುಕೊಂಡಿದ್ದರು, ಮತ್ತೆ ಅವರು ತಂಡಕ್ಕೆ ಮರಳಿದರಾದರು ಕೂಡ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ.ಈಗ ಅವರು ಟಿ20 ವಿಶ್ವಕಪ್ ಫೈನಲ್ ನಲ್ಲ್ಲಿ 49 ಎಸೆತಗಳಲ್ಲಿ ಅಜೇಯ 52 ರನ್ ಗಳಿಸುವ ಮೂಲಕ ತಂಡವು ಮತ್ತೊಮ್ಮೆ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು.ಈಗ ವೆಸ್ಟ್ ಇಂಡೀಸ್ ನಂತರ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ತಂಡವು ಪಾತ್ರವಾಗಿದೆ.

ಆರಂಭದಲ್ಲಿ ಪಾಕ್ ನೀಡಿದ 138 ರನ್ ಗಳ ಗುರಿಯನ್ನು ಬೆನ್ನತ್ತಿದ  ಇಂಗ್ಲೆಂಡ್ ತಂಡವು ತಂಡದ ಮೊತ್ತ 32 ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿ ಸಿಲುಕಿತ್ತು, ಆದರೆ ಈ ಹಂತದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಸ್ಟೋಕ್ಸ್ ಅಜೇಯ 52 ರನ್ ಗಳಿಸುವ ಮೂಲಕ ಈಗ ಇಂಗ್ಲೆಂಡ್ ತಂಡಕ್ಕೆ ಸತತ ಎರಡು ವಿಶ್ವಕಪ್ ಗಳನ್ನು ತಂದುಕೊಟ್ಟ ಹೀರೋ ಎನಿಸಿಕೊಂಡಿದ್ದಾರೆ.

Live TV

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

 

 

 

 

 

 

 

 

 

 

Trending News