ಪರ್ತ್ ಕ್ರೀಡಾಂಗಣದಲ್ಲಿ ಪಾಕ್ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 1 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team Indiaದ ‘ತ್ರಿಮೂರ್ತಿ’ಗಳ ಅಬ್ಬರ: ರೋಹಿತ್, ಕೊಹ್ಲಿ, ಯಾದವ್ ಆಟಕ್ಕೆ ನಲುಗಿತು ನೆದರ್ಲ್ಯಾಂಡ್


ಟಾಸ್ ಗೆದ್ದ ಜಿಂಬಾಬ್ವೆ ತಂಡವು ಸೀನ್ ವಿಲಿಯಮ್ಸ್ 31, ಬ್ರಾಡ್ ಇವನ್ಸ್ ಅವರ 19 ರನ್ ಗಳ ನೆರವಿನಿಂದ  20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 130 ರನ್ ಗಳನ್ನು ಗಳಿಸಿತು. ಪಾಕ್ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ವಾಸಿಂ ಜೂನಿಯರ್ ನಾಲ್ಕು ಹಾಗೂ ಶದಾಬ್ ಖಾನ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಜಿಂಬಾಬ್ವೆ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.


Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ


ಇದೇ ವೇಳೆ ಜಿಂಬಾಬ್ವೆ ನೀಡಿದ 131 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ತಂಡದ ಮೊತ್ತ 36 ಆಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಪಾಕ್ ಪರವಾಗಿ ಶಾನ್ ಮಸೂದ್ 44 ರನ್ ಹಾಗೂ ಮೊಹಮ್ಮದ್ ನವಾಜ್ 22 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು. ಆದರೆ ಅಂತಿಮವಾಗಿ ಜಿಂಬಾಬ್ವೆ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.ಇದರಿಂದಾಗಿ ಪಾಕ್ ತಂಡವು ಕೇವಲ ಒಂದು ರನ್ ಗಳಿಂದ ಪಂದ್ಯವನ್ನು ಕೈಚಲ್ಲಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ