Team Indiaದ ‘ತ್ರಿಮೂರ್ತಿ’ಗಳ ಅಬ್ಬರ: ರೋಹಿತ್, ಕೊಹ್ಲಿ, ಯಾದವ್ ಆಟಕ್ಕೆ ನಲುಗಿತು ನೆದರ್ಲ್ಯಾಂಡ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟ್ಸ್ ಮನ್ ಗಳು ಡಚ್ ಬೌಲರ್ ಗಳ ಮುಂದೆ ಹೆಚ್ಚು ಹೊತ್ತು ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಪವರ್ ಪ್ಲೇನ 6 ಓವರ್‌ಗಳ ನಂತರ ಭಾರತ 38 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿತು.

Written by - Bhavishya Shetty | Last Updated : Oct 27, 2022, 04:53 PM IST
    • ಇನ್ನಿಂಗ್ಸ್‌ನಿಂದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ದಾಖಲಿಸಿದೆ
    • ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು
    • ಅರ್ಧ ಶತಕ ಸಿಡಿಸಿದ ರೋಹಿತ್, ಕೊಹ್ಲಿ, ಯಾದವ್
Team Indiaದ ‘ತ್ರಿಮೂರ್ತಿ’ಗಳ ಅಬ್ಬರ: ರೋಹಿತ್, ಕೊಹ್ಲಿ, ಯಾದವ್ ಆಟಕ್ಕೆ ನಲುಗಿತು ನೆದರ್ಲ್ಯಾಂಡ್	 title=
Rohit Sharma

ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲ್ಯಾಂಡ್ ಗೆ 180 ರನ್‌ಗಳ ಗುರಿ ನೀಡಿದೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಅವರ ಉತ್ತಮ ಇನ್ನಿಂಗ್ಸ್‌ನಿಂದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ದಾಖಲಿಸಿದೆ. ವಿರಾಟ್ 44 ಎಸೆತಗಳಲ್ಲಿ 62, ಸೂರ್ಯ 25 ಎಸೆತಗಳಲ್ಲಿ 51 ಮತ್ತು ರೋಹಿತ್ 39 ಎಸೆತಗಳಲ್ಲಿ 53 ರನ್ ಕಲೆ ಹಾಕಿದ್ದಾರೆ. ನೆದರ್ಲ್ಯಾಂಡ್ ಪರ ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವಾನ್ ಮೆಕರ್ನ್ ತಲಾ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ: BCCI Big Announcement: ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಬಿಸಿಸಿಐ

ಕೊನೆಯ 5 ಓವರ್‌ಗಳಲ್ಲಿ 65 ರನ್‌ಗಳು:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟ್ಸ್ ಮನ್ ಗಳು ಡಚ್ ಬೌಲರ್ ಗಳ ಮುಂದೆ ಹೆಚ್ಚು ಹೊತ್ತು ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಪವರ್ ಪ್ಲೇನ 6 ಓವರ್‌ಗಳ ನಂತರ ಭಾರತ 38 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿತು. ಆ ಬಳಿಕ 10 ಓವರ್‌ಗಳ ನಂತರ ಭಾರತ ತಂಡ 67 ರನ್ ಗೆ ಮತ್ತೊಂದು ವಿಕೆಟ್ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂತು. ಇನ್ನು 15 ಓವರ್‌ಗಳ ಅಂತ್ಯಕ್ಕೆ ಟೀಂ ಇಂಡಿಯಾ ಸ್ಕೋರ್ 114 ರನ್ ಗೆ 2 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕೊನೆಯ ಐದು ಓವರ್‌ಗಳಲ್ಲಿ ಭಾರತ 65 ರನ್ ಗಳಿಸಿತು.

ಭುವನೇಶ್ವರ್ ಕುಮಾರ್ ನೆದರ್ಲೆಂಡ್ಸ್‌ಗೆ ಮೊದಲ ಹೊಡೆತ ನೀಡಿದ್ದಾರೆ. ಅವರು 9 ಎಸೆತಗಳಲ್ಲಿ 1 ರನ್ ನೀಡಿ, ಬಳಿಕ ವಿಕ್ರಮಜಿತ್ ಸಿಂಗ್ ಅವರನ್ನು ಬೌಲ್ಡ್ ಮಾಡಿದರು. ಇನ್ನು ಅಕ್ಷರ್ ಪಟೇಲ್ ಟೀಂ ಇಂಡಿಯಾಗೆ ಎರಡನೇ ಯಶಸ್ಸನ್ನು ನೀಡಿದರು. 10 ಎಸೆತಗಳಲ್ಲಿ 16 ರನ್ ನೀಡಿದ ಅವರು, ಮ್ಯಾಕ್ಸ್ ಒಡ್ಡೋಡ್ ಅವರನ್ನು ಔಟ್ ಮಾಡಿದರು.

ಕೆಎಲ್ ರಾಹುಲ್ ಫ್ಲಾಪ್ ಶೋ:

ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಔಟಾದ ಕೆಎಲ್ ರಾಹುಲ್ ನೆದರ್ಲೆಂಡ್ ವಿರುದ್ಧವೂ ರನ್ ಗಳಿಸುವಲ್ಲಿ ವಿಫಲವಾಗಿದ್ದಾರೆ. ಮೂರನೇ ಓವರ್‌ನ ನಾಲ್ಕನೇ ಚೆಂಡು ಮಿಡಲ್ ಲೆಗ್‌ ಗೆ ಬಿದ್ದ ಪರಿಣಾಮ ಪೆವಿಲಿಯನ್ ಸೇರಿದರು.

ಇನ್ನು ರೋಹಿತ್ ಶರ್ಮಾ 39 ಎಸೆತಗಳಲ್ಲಿ 53 ರನ್ ಬಾರಿಸಿದ್ದಾರೆ. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ ರೋಹಿತ್ ಅವರ ಸ್ಟ್ರೈಕ್ ರೇಟ್ 135.89 ಆಗಿತ್ತು. ಈ ಅವಧಿಯಲ್ಲಿ ಯುವರಾಜ್ ಸಿಂಗ್ ಅವರ ದಾಖಲೆಯನ್ನೂ ರೋಹಿತ್ ಮುರಿದಿದ್ದಾರೆ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ 34 ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

5ನೇ ಓವರ್ ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ಬೌಂಡರಿ ದಾಟಿಸಲು ಯತ್ನಿಸಿದ ಬಾಲ್ ಪ್ರಿಂಗಲ್ ಕೈಗೆ ಬಿತ್ತು. ಅದೃಷ್ಟವಶಾತ್ ಪ್ರಿಂಗಲ್ ಆ ಕ್ಯಾಚ್ ನ್ನು ಕೈಚೆಲ್ಲಿದರು. ಆ ಬಳಿಕ ಮತ್ತೊಮ್ಮೆ ರೋಹಿತ್ ಶರ್ಮಾ ಎಲ್‌ಬಿಡಬ್ಲ್ಯೂಗೆ ಔಟ್ ಎಂದು ಅಂಪೈರ್ ಹೇಳಿದರು. ಆದರೆ ರಿವ್ಯೂ ತೆಗೆದುಕೊಂಡ ಶರ್ಮಾ ಸಫಲರಾದರು. ಚೆಂಡು ವಿಕೆಟ್‌ಗೆ ಹೊಡೆಯುತ್ತಿಲ್ಲ ಎಂಬುದು ರೀಪ್ಲೇಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಇದನ್ನೂ ಓದಿ: IND vs NED: ಟೀಂ ಇಂಡಿಯಾಗೆ ಸತತ ಗೆಲುವಿನ ಸಂಭ್ರಮ: ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಒಟ್ಟಾರೆ ಟೀಂ ಇಂಡಿಯಾ ನೆದರ್ಲ್ಯಾಂಡ್ ವಿರುದ್ಧ ಭರ್ಜರಿ ಜಯ ಗಳಿಸಿದೆ. ಭಾರತ ನೀಡಿದ 179 ರನ್ ಗಳ ಗುರಿಯನ್ನು ತಲುಪಲು ಸಾಧ್ಯವಾಗದೆ ನೆದರ್ಲ್ಯಾಂಡ್ ಟೀಂ ಇಂಡಿಯಾದ ಮುಂದೆ ಮಂಡಿಯೂರಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News