ಟೀ ಇಂಡಿಯಾದ ನೂತನ ನಾಯಕ ರೋಹಿತ್‌ ಶರ್ಮಾ ಮುಂದಾಳತ್ವದಲ್ಲಿ ಸತತ ಮೂರು ಟಿ-20 ಸಿರೀಸ್‌ಗಳಲ್ಲಿ ಜಯ ಸಾಧಿಸಿರುವ ಭಾರತ ತಂಡವು 2021-22ನೇ ಆವೃತ್ತಿಯ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂಬರ್‌ 1 ತಂಡವಾಗಿ ಹೊರಹೊಮ್ಮಿದೆ. ಅಂತೆಯೇ ಟೆಸ್ಟ್‌ ಕ್ರಿಕೆಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನ ಪಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Team India: ಅಂತ್ಯದ ಹಂತಲ್ಲಿದೆ ಈ ಸ್ಟಾರ್ ಆಟಗಾರನ ವೃತ್ತಿಜೀವನ..!


ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಮೂರು ಟಿ20 ಸರಣಿಗಳನ್ನು ಗೆದ್ದು ಬೀಗಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 270 ರೇಟಿಂಗ್ ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನು 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ​265 ಅಂಕ ಮತ್ತು 3ನೇ ಸ್ಥಾನದಲ್ಲಿರುವ ಪಾಕಿಸ್ತಾನ 261 ಅಂಕ ಪಡೆದಿದೆ. ಮೇ 4, 2022ರ ಆವೃತ್ತಿಯ ಅಂತಿಮ ದಿನವಾಗಿದೆ.


ಏಕದಿನ ಕ್ರಿಕೆಟ್​​ ರ್ಯಾಂಕಿಂಗ್‌: 
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವು ನಂಬರ್‌ 1 ಸ್ಥಾನ ಉಳಿಸಿಕೊಂಡಿದೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದೆ. 


ಇದನ್ನು ಓದಿ: RCB ಅಭಿಮಾನಿ, ಆಸ್ಟ್ರೇಲಿಯಾ ಸುಂದರಿ 'ಕೆಜಿಎಫ್‌' ಬಗ್ಗೆ ಹೇಳಿದ್ದನ್ನ ಕೇಳಿದ್ರೆ ಶಾಖ್‌ ಆಗ್ತೀರಾ..!


ಟೆಸ್ಟ್‌ ಶ್ರೇಯಾಂಕ: 
ಸದ್ಯ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ  ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆದಿದೆ. ಕೇವಲ 9 ಅಂಕ ಹಿಂದಿರುವ ಭಾರತ ಎರಡನೇ ಸ್ಥಾನ ಗಳಿಸಿದೆ. ಇನ್ನು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಕ್ರಮವಾಗಿ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡ ಅಲಂಕರಿಸಿದೆ. ಪಾಕಿಸ್ತಾನ ತಂಡ ಇಂಗ್ಲೆಂಡ್​ ತಂಡವನ್ನು ಹಿಂದಿಕ್ಕಿ ಇಂದು ಬಿಡುಗಡೆಯಾದ ವಾರ್ಷಿಕ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.