Team India: ಅಂತ್ಯದ ಹಂತಲ್ಲಿದೆ ಈ ಸ್ಟಾರ್ ಆಟಗಾರನ ವೃತ್ತಿಜೀವನ..!

ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಕಾರಣ ಈ ಸ್ಟಾರ್ ಆಟಗಾರ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು. ಈ ಆಟಗಾರ ಟೀಂ ಇಂಡಿಯಾ ಮತ್ತು ಐಪಿಎಲ್‌ಗೆ ಮರಳುವುದು ಬಹುತೇಕ ಸಾಧ್ಯವಿಲ್ಲದಂತಾಗಿದೆ.

Written by - Puttaraj K Alur | Last Updated : May 2, 2022, 08:11 PM IST
  • ಅಂತ್ಯದ ಹಂತ ತಲುಪಿದ ಟೀಂ ಇಂಡಿಯಾದ ಅನುಭವಿ ಆಟಗಾರನ ವೃತ್ತಿಜೀವನ
  • ದಿಗ್ಗಜ ವೇಗದ ಬೌಲರ್ ಇಶಾಂತ್ ಶರ್ಮಾಗೆ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ
  • ಕಳಪೆ ಫಾರ್ಮ್ & ಫಿಟ್‌ನೆಸ್‌ ಸಮಸ್ಯೆ ಕಾರಣ ಇಶಾಂತ್ ಶರ್ಮಾರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ
Team India: ಅಂತ್ಯದ ಹಂತಲ್ಲಿದೆ ಈ ಸ್ಟಾರ್ ಆಟಗಾರನ ವೃತ್ತಿಜೀವನ..! title=
ಅಂತ್ಯದ ಹಂತದಲ್ಲಿದೆ ಈ ಆಟಗಾರನ ವೃತ್ತಿಜೀವನ!

ನವದೆಹಲಿ: ಟೀಂ ಇಂಡಿಯಾದ ಅನುಭವಿ ಆಟಗಾರರೊಬ್ಬರ ಕ್ರಿಕೆಟ್ ಜೀವನ ಅಂತ್ಯದ ಹಂತ ತಲುಪಿದೆ. ಈ ಸ್ಟಾರ್ ಕ್ರಿಕೆಟಿಗನಿಗೆ ಬಹಳ ದಿನಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ, ಐಪಿಎಲ್‌ನಲ್ಲೂ ಇವರ ಬಗ್ಗೆ ಮಾತಿಲ್ಲ. ಇದೀಗ ಟೀಂ ಇಂಡಿಯಾದಲ್ಲಿ ಈ ಆಟಗಾರನ ಪುನರಾಗಮನ ಪವಾಡದ ಹಂತಕ್ಕೆ ತಲುಪಿದೆ.

ಅಂತ್ಯದ ಹಂತದಲ್ಲಿದೆ ಈ ಆಟಗಾರನ ವೃತ್ತಿಜೀವನ!

ಟೀಂ ಇಂಡಿಯಾದ ದಿಗ್ಗಜ ವೇಗದ ಬೌಲರ್ ಇಶಾಂತ್ ಶರ್ಮಾಗೆ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗುತ್ತಿದೆ. ಇಶಾಂತ್ ಶರ್ಮಾ 2021ರ ನವೆಂಬರ್‌ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇಶಾಂತ್ ಶರ್ಮಾ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಮೇ 2021ರಲ್ಲಿ ಆಡಿದ್ದರು. ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್‌ ಸಮಸ್ಯೆಯಿಂದ ಇಶಾಂತ್ ಶರ್ಮಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ಪ್ರಸಕ್ತ ಅಂದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಸಹ ಯಾವುದೇ ತಂಡವು ಈ ಆಟಗಾರನನ್ನು ಖರೀದಿಸಲು ಮನಸ್ಸು ಮಾಡಲಿಲ್ಲ.

ಇದನ್ನೂ ಓದಿ: RCB ಅಭಿಮಾನಿ, ಆಸ್ಟ್ರೇಲಿಯಾ ಸುಂದರಿ 'ಕೆಜಿಎಫ್‌' ಬಗ್ಗೆ ಹೇಳಿದ್ದನ್ನ ಕೇಳಿದ್ರೆ ಶಾಖ್‌ ಆಗ್ತೀರಾ..!

ಟೀಂ ಇಂಡಿಯಾದ ಬಾಗಿಲು ಬಹುತೇಕ ಕ್ಲೋಸ್!

ಟೀಂ ಇಂಡಿಯಾದ ದಿಗ್ಗಜ ವೇಗಿ ಇಶಾಂತ್ ಶರ್ಮಾಗೆ ಭಾರತ ಕ್ರಿಕೆಟ್ ತಂಡದ ಬಾಗಿಲು ಬಹುತೇಕ ಮುಚ್ಚಿದೆ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾವನ್ನು ಹೊರತುಪಡಿಸಿ ಇಶಾಂತ್ ಶರ್ಮಾಗೆ ಐಪಿಎಲ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ಇಶಾಂತ್ ಐಪಿಎಲ್‍ನಲ್ಲಿ ಇದುವರೆಗೆ 93 ಪಂದ್ಯಗಳನ್ನು ಆಡಿದ್ದು, 72 ವಿಕೆಟ್ ಪಡೆದಿದ್ದಾರೆ. 12 ಕ್ಕೆ 5 ವಿಕೆಟ್‌ಗಳು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು.   

ಮತ್ತೆ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ

ಇದೀಗ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಮೂವರು ವೇಗದ ಬೌಲರ್‌ಗಳು ಟೀಂ ಇಂಡಿಯಾದ ಮುಖ್ಯ ಆಯ್ಕೆಯಾಗಿದ್ದಾರೆ. 4ನೇ ವೇಗದ ಬೌಲರ್ ಆಗಿ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಭಾರತದ ಆಯ್ಕೆಗಾರರ ​​ನೆಚ್ಚಿನ ಆಟಗಾರರಾಗಿದ್ದಾರೆ. ಹೀಗಾಗಿ ಈಗ ಇಶಾಂತ್ ಶರ್ಮಾಗೆ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಗುವ ಸಾಧ್ಯತೆ ಕಾಣುತ್ತಿಲ್ಲ.

ಇದನ್ನೂ ಓದಿ: CSK ನಾಯಕತ್ವ ತೊರೆದ ಜಡೇಜಾ : ಕ್ಯಾಪ್ಟನ್ ಹುದ್ದೆಗೆ ಮರಳಿದ ಧೋನಿ

ನ್ಯೂಜಿಲೆಂಡ್ ವಿರುದ್ಧ ಕೊನೆ ಟೆಸ್ಟ್  

ಇಶಾಂತ್ ಶರ್ಮಾ ಕೊನೆಯ ಬಾರಿಗೆ ನವೆಂಬರ್ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಇಶಾಂತ್ ಶರ್ಮಾ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇಶಾಂತ್ ಶರ್ಮಾ ಅವರ ವೃತ್ತಿಜೀವನದ ಕ್ಷಣಗಣನೆಯು ಆಗಸ್ಟ್ 2021ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿಯೇ ಪ್ರಾರಂಭವಾಗಿತ್ತು. ಅವರು ಆಗ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಪಡೆದಿದ್ದರು. ಟೀಂ ಇಂಡಿಯಾದಲ್ಲಿ ನಿರಂತರವಾಗಿ ಪೈಪೋಟಿ ಹೆಚ್ಚುತ್ತಿದೆ. ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ಶರ್ಮಾ ಟೀಂ ಇಂಡಿಯಾದಿಂದ ಬಹುತೇಕ ಹೊರಬಿದ್ದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News