Virat Kohli: ರೋಹಿತ್ ಶರ್ಮಾ ಕ್ಯಾಪ್ಟನ್ ಆದ ತಕ್ಷಣ ಕೊಹ್ಲಿಗೆ ಶುರುವಾಯಿತು ಸಂಕಷ್ಟ!

ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ನಿರಂತರ ವಿವಾದಗಳಿವೆ. ರೋಹಿತ್ ಶರ್ಮಾ ನಾಯಕರಾದ ತಕ್ಷಣ ವಿರಾಟ್ ಕೊಹ್ಲಿಗೆ ಸಂಕಷ್ಟ ಶುರುವಾಗಿದೆ. ಅದು ಏನು ಅಂತೀರಾ..? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ. 

Written by - Puttaraj K Alur | Last Updated : Feb 20, 2022, 07:30 AM IST
  • ರೋಹಿತ್ ಶರ್ಮಾ ಕ್ಯಾಪ್ಟನ್ ಆಗುತ್ತಿದ್ದಂತೆಯೇ ಕೊಹ್ಲಿಗೆ ಶುರುವಾಯಿತು ಹೊಸ ಸಂಕಷ್ಟ
  • ರೋಹಿತ್ ಶರ್ಮಾ ನಂ.1 ಆಟಗಾರನೆಂದ ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ
  • ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಆಟಗಾರನೆಂದು ಪರಿಗಣಿಸದ ಬಿಸಿಸಿಐ
Virat Kohli: ರೋಹಿತ್ ಶರ್ಮಾ ಕ್ಯಾಪ್ಟನ್ ಆದ ತಕ್ಷಣ ಕೊಹ್ಲಿಗೆ ಶುರುವಾಯಿತು ಸಂಕಷ್ಟ! title=
ವಿರಾಟ್ ಕೊಹ್ಲಿಗೆ ಸಂಕಷ್ಟ ಶುರುವಾಗಿದೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ(Virat Kohli)ಯ ಟೈಮ್ ಸರಿಯಿಲ್ಲ. ಕೆಲವೇ ತಿಂಗಳುಗಳ ಅಂತರದಲ್ಲಿ ವಿರಾಟ್ ಎಲ್ಲಾ 3 ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದರು. ಇದಲ್ಲದೇ ಬಿಸಿಸಿಐ(BCCI) ಜೊತೆ ನಿರಂತರ ವಿವಾದಗಳು ನಡೆಯುತ್ತಲೇ ಇವೆ. ಇದೀಗ ರೋಹಿತ್ ಶರ್ಮಾ ಅವರನ್ನು ಎಲ್ಲಾ 3 ಮಾದರಿಗಳ ನಾಯಕರನ್ನಾಗಿ ಮಾಡಲಾಗಿದೆ. ರೋಹಿತ್ ನಾಯಕರಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿಗೆ ಹೊಸ ಸಂಕಷ್ಟ ಶುರುವಾಗಿದೆ.

ವಿರಾಟ್ ಉತ್ತಮನೆಂದು ಪರಿಗಣಿಸದ ಆಯ್ಕೆಗಾರರು

ರೋಹಿತ್ ಶರ್ಮಾ ನಾಯಕರಾದ ತಕ್ಷಣ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ(Chetan Sharma) ಅವರ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಭಾರತದ ನಂ.1 ಕ್ರಿಕೆಟಿಗ(Best Indian Player) ಎಂದು ಚೇತನ್ ಶರ್ಮಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಭಾರತ ಮಾತ್ರವಲ್ಲ, ಎಲ್ಲಾ 3 ಸ್ವರೂಪಗಳಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಹೀಗಿರುವಾಗ ಚೇತನ್ ಅವರ ಈ ಹೇಳಿಕೆ ಅಭಿಮಾನಿಗಳ ಮನ ತಲ್ಲಣಗೊಳಿಸಿದೆ.

ಇದನ್ನೂ ಓದಿ: Virat Kohli : ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ : ಟೀಂನಿಂದ ಕೊಹ್ಲಿ ಔಟ್!

ಚೇತನ್ ಶರ್ಮಾ ಮಾತನಾಡಿ, ‘ರೋಹಿತ್ ಶರ್ಮಾ(Rohit Sharma) ಮಟ್ಟಿಗೆ ಅವರು ನಮ್ಮ ದೇಶದ ನಂ.1 ಕ್ರಿಕೆಟಿಗ. ಪ್ರಮುಖವಾಗಿ ಅವರು ಎಲ್ಲಾ 3 ಸ್ವರೂಪಗಳಲ್ಲಿಯೂ ಆಡುತ್ತಿದ್ದಾರೆ. ನಾವು ರೋಹಿತ್ ಅವರನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ನಮಗೆ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ವೃತ್ತಿಪರರಾಗಿದ್ದಾರೆ, ಎಲ್ಲಾ 3 ಸ್ವರೂಪಗಳಲ್ಲಿಯೂ ಉತ್ತಮವಾಗಿ ಆಡುತ್ತಾರೆ ಮತ್ತು ತಮ್ಮ ದೇಹವನ್ನು ಹೇಗೆ ಉತ್ತಮವಾಗಿ ನಿರ್ವಹಿಸಬೇಕೆಂದು ತಿಳಿದುಕೊಂಡಿದ್ದಾರೆ’ ಅಂತಾ ಹೇಳಿದ್ದಾರೆ.

ರೋಹಿತ್ ಜೊತೆ ಯಾವುದೇ ಸಮಸ್ಯೆ ಇಲ್ಲ

ಮುಂದುವರೆದು ಮಾತನಾಡಿರುವ ಚೇತನ್ ಶರ್ಮಾ(Chetan Sharma On Rohit Sharma), ‘ರೋಹಿತ್‌ನೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ನಾವು ಕಾಲಕಾಲಕ್ಕೆ ಅವರೊಂದಿಗೆ ಮಾತನಾಡುತ್ತೇವೆ. ಅವರು ಸಂಪೂರ್ಣವಾಗಿ ಫಿಟ್ ಅಂಡ್ ಫೈನ್ ಆಗಿದ್ದಾರೆ. ಇಂತಹ ದೊಡ್ಡ ಆಟಗಾರ ಸಾಕಷ್ಟು ಅನುಭವದೊಂದಿಗೆ ನಾಯಕರಾದಾಗ, ಆಯ್ಕೆ ಸಮಿತಿಯು ರೋಹಿತ್ ನಾಯಕತ್ವದಲ್ಲಿ ಭವಿಷ್ಯದ ನಾಯಕರನ್ನು ಸಿದ್ಧಪಡಿಸುವ ಬಗ್ಗೆ ಮಾತನಾಡಬಹುದು. ಇದು ನಮಗೆ ಅದ್ಭುತ ಅನುಭವವನ್ನು ನೀಡಲಿದೆ. ರೋಹಿತ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ. ನಾವು ಪ್ರತಿಯೊಬ್ಬ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡುತ್ತೇವೆ, ಏಕೆಂದರೆ ನಾವು ಕ್ರಿಕೆಟಿಗರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವು ವಿರಾಟ್ ಮತ್ತು ರಿಷಭ್ ಅವರಿಗೆ ವಿಶ್ರಾಂತಿ ನೀಡಿದ್ದೇವೆ ಮತ್ತು ಎಲ್ಲಾ ಕ್ರಿಕೆಟಿಗರಿಗೆ ಕ್ರಮೇಣ ವಿಶ್ರಾಂತಿ ನೀಡುತ್ತೇವೆ, ಏಕೆಂದರೆ ಪ್ರತಿಯೊಬ್ಬರ ದೇಹವು ವಿಶ್ರಾಂತಿಯನ್ನು ಬಯಸುತ್ತದೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: IND vs SL: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕ

3 ಮಾದರಿಗೂ ಹಿಟ್ ಮ್ಯಾನ್ ಕ್ಯಾಪ್ಟನ್

ವಿರಾಟ್ ಕೊಹ್ಲಿ ನಾಯಕತ್ವ ತೊರೆದ ನಂತರ ಟೀಂ ಇಂಡಿಯಾ(Team India)ಗೆ ಹೊಸ ಟೆಸ್ಟ್ ನಾಯಕ ಸಿಕ್ಕಿದ್ದಾರೆ. ವಿರಾಟ್ ನಂತರ ಏಕದಿನ ಮತ್ತು ಟಿ-20 ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ಟೆಸ್ಟ್ ತಂಡದ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಟೀಂ ಇಂಡಿಯಾ ಎಲ್ಲಾ 3 ಮಾದರಿಗಳಲ್ಲಿ ಒಬ್ಬನೇ ನಾಯಕನನ್ನು ಹೊಂದಲಿದೆ. ಅದೇ ರೀತಿ ತಂಡದ ಉಪನಾಯಕನಾಗಿ ಜಸ್ಪ್ರೀತ್ ಬುಮ್ರಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧವೂ ಬುಮ್ರಾ ಈ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಅದೇ ವೇಳೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಲವು ಆಟಗಾರರು ಭಾರತ ತಂಡದಿಂದ ಹೊರಬರುವ ಹಾದಿಯನ್ನು ತೋರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News