INDW vs AUSW: ಮಹಿಳಾ ಏಕದಿನ ವಿಶ್ವಕಪ್ 2022 ರ ಲೀಗ್ ಪಂದ್ಯದಲ್ಲಿ, ಇಂದು ಭಾರತ ತಂಡವು ಆಸ್ಟ್ರೇಲಿಯಾ ತಂಡದೊಂದಿಗೆ ಪಂದ್ಯವನ್ನಾಡುತ್ತಿದೆ . ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ ತಂಡ ಆಸ್ಟ್ರೇಲಿಯಕ್ಕೆ 278 ರನ್‌ಗಳ ಗುರಿ ನೀಡಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಎರಡೂ ತಂಡಗಳ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತ 4 ಪಂದ್ಯಗಳನ್ನು ಆಡಿದೆ. ಅವುಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದ್ದು, 2ರಲ್ಲಿ ಸೋಲನ್ನು ಅನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವನ್ನು ಗೆಲ್ಲುವ ಮೂಲಕ, ಭಾರತ ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಯತ್ನಿಸುತ್ತಿದೆ, ಆದರೆ ಆಸ್ಟ್ರೇಲಿಯಾ ತಂಡವು ಈ ಪಂದ್ಯವನ್ನು ಗೆದ್ದರೆ, ಅದು ಸೆಮಿಫೈನಲ್ ತಲುಪಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-'ನಾವು ಇಲ್ಲಿ ಇರುವುದು ಸಾಬೀತುಪಡಿಸುವುದಕ್ಕೆ ಅಲ್ಲ, ಉತ್ತಮ ಕ್ರಿಕೆಟ್ ಆಡಲಿಕ್ಕೆ'

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ 
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾ ತಂಡ ಒಂದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ತಂಡದಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಬದಲಿಗೆ ಡಾರ್ಸಿ ಬ್ರೌನ್ ಆಡುತ್ತಿದ್ದಾರೆ. ಅದೇ ವೇಳೆ ಭಾರತ ತಂಡ ಕೂಡ ಬದಲಾವಣೆಯೊಂದಿಗೆ ಇಳಿದಿದೆ. ದೀಪ್ತಿ ಶರ್ಮಾ ಬದಲಿಗೆ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.


ಇದನ್ನೂ ಓದಿ-IPL 2022: ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ಕೊಲ್ಕತ್ತಾ ನೈಟ್ ರೈಡರ್ಸ್

ಉತ್ತಮ ಆರಂಭವಲ್ಲ (Cricket News)
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತದ ಆರಂಭ ಅಷ್ಟೊಂದು ಸರಿಯಾಗಿರಲಿಲ್ಲ. ನಾಲ್ಕನೇ ಓವರ್‌ನಲ್ಲಿ 11 ರನ್‌ಗಳಿಗೆ ಸ್ಮೃತಿ ಮಂಧಾನ ರೂಪದಲ್ಲಿ ತಂಡಕ್ಕೆ ಮೊದಲ ಹೊಡೆತ ಬಿದ್ದಿದೆ. 10 ರನ್ ಗಳಿಸಿ ಅವರು ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಆರನೇ ಓವರ್‌ನಲ್ಲಿ ಭಾರತಕ್ಕೆ ಎರಡನೇ ಶಾಕ್ ನೀಡಿತು. ಶೆಫಾಲಿ ವರ್ಮಾ 12 ರನ್ ಗಳಿಸಿ ಔಟಾದರು. ಆಗ ಭಾರತದ ಸ್ಕೋರ್ 28 ರನ್ ಆಗಿತ್ತು. ಇದಾದ ಬಳಿಕ ಯಾಸ್ತಿಕಾ ಭಾಟಿಯಾ ಹಾಗೂ ನಾಯಕಿ ಮಿಥಾಲಿ ರಾಜ್ ತಂಡವನ್ನು ನಿಭಾಯಿಸಲು ಆರಂಭಿಸಿದರು. ಭಾರತ 32ನೇ ಓವರ್‌ನಲ್ಲಿ 158 ರನ್‌ಗಳಿಗೆ ಯಾಸ್ತಿಕಾ ಭಾಟಿಯಾ ರೂಪದಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ಯಾಸ್ತಿಕಾ 59 ರನ್ ಗಳಿಸಿ ಔಟಾದರು. ಮಿಥಾಲಿ ಮತ್ತು ಯಾಸ್ತಿಕಾ ನಡುವೆ 130 ರನ್‌ಗಳ ಜೊತೆಯಾಟವಿತ್ತು. ಮಿಥಾಲಿ ರಾಜ್ ಕೂಡ 38ನೇ ಓವರ್‌ನಲ್ಲಿ 68 ರನ್ ಗಳಿಸಿ ಔಟಾದರು. ನಂತರ ಕ್ರೀಸ್ ಗೆ ಬಂದ ಹರ್ಮನ್‌ಪ್ರೀತ್ ಕೌರ್, ಪೂಜಾ ವಸ್ತ್ರಾಕರ್ ಜೊತೆಗೆ ಏಳನೇ ವಿಕೆಟ್ ಪಾರ್ಟ್ನರ್ ಶಿಪ್ ನಲ್ಲಿ ಕೇವಲ 46 ಎಸೆತಗಳಲ್ಲಿ 64 ರನ್ ಗಳನ್ನು ಸ್ಕೋರ್ ಕಾರ್ಡ್ ಗೆ ಸೇರಿಸಿದರು. ಪ್ರಸ್ತುತ ಭಾರತ ನೀಡಿರುವ 278 ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡ ಮೂರನೇ ಓವರ್ ಮುಕ್ತಾಯದ ಬಳಿಕ ಯಾವುದೇ ವಿಕೆಟ್ ನಷ್ಟವಿಲ್ಲದೆ 20 ರನ್ ಗಳನ್ನು ಗಳಿಸಿದೆ.IPL 2022: ಲಕ್ನೋ ತಂಡಕ್ಕೆ ಬಿಗ್ ಶಾಕ್, ಐಪಿಎಲ್ ನಿಂದ ಹೊರಕ್ಕೆ ಬಿದ್ದ ಈ ಆಟಗಾರ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.