'ನಾವು ಇಲ್ಲಿ ಇರುವುದು ಸಾಬೀತುಪಡಿಸುವುದಕ್ಕೆ ಅಲ್ಲ, ಉತ್ತಮ ಕ್ರಿಕೆಟ್ ಆಡಲಿಕ್ಕೆ'

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Written by - Zee Kannada News Desk | Last Updated : Mar 18, 2022, 11:20 PM IST
  • ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
'ನಾವು ಇಲ್ಲಿ ಇರುವುದು ಸಾಬೀತುಪಡಿಸುವುದಕ್ಕೆ ಅಲ್ಲ, ಉತ್ತಮ ಕ್ರಿಕೆಟ್ ಆಡಲಿಕ್ಕೆ' title=

ನವದೆಹಲಿ: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.ಐಪಿಎಲ್ ಫ್ರಾಂಚೈಸಿಯ ನಾಯಕನಾಗಿ ಹಾರ್ದಿಕ್ ಅವರ ಮೊದಲ ನಿಯೋಜನೆ ಇದಾಗಿದ್ದು, ಅವರು ನಿರೀಕ್ಷೆಗಳಿಗೆ ತಕ್ಕಂತೆ ಅವರು ತಂಡವನ್ನು ಮುನ್ನಡೆಸಬಹುದೇ ಎನ್ನುವ ವಿಚಾರವಾಗಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ.

ಇದನ್ನೂ ಓದಿ:  ಒಂದೇ ದಿನ ‘ಜೇಮ್ಸ್​’ ಗಳಿಸಿದ್ದು ಬರೋಬ್ಬರಿ 30 ಕೋಟಿ ರೂಪಾಯಿ..!

ಇದೇ ಮಾರ್ಚ್ 28 ರಂದು ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದೆ.ಈ ಹಿನ್ನಲೆಯಲ್ಲಿ ಈಗ ಈ ಋತುವಿನಲ್ಲಿ ತಮ್ಮ ತಂಡವು ಹೇಗೆಲ್ಲಾ ಸಿದ್ಧತೆಯನ್ನು ನಡೆಸಿದೆ ಎನ್ನುವ ವಿಚಾರವಾಗಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಐಪಿಎಲ್‌ನ (IPL 2022) ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: IPL 2022 ಗೆ ದಿಡೀರ್ ಎಂಟ್ರಿ ನೀಡಿದ ಅಪಾಯಕಾರಿ ಬೌಲರ್‌!

"ತಂಡದೊಂದಿಗೆ ನನಗೆ ಸಾಕಷ್ಟು ಸಂತೋಷವಾಗಿದೆ, ಇದು ಹೊಸ ತಂಡವಾಗಿದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಲ್ಲಿ ನಾವು ಏನನ್ನೂ ಸಾಬೀತುಪಡಿಸಲು ಇಲ್ಲ, ನಾವು ಉತ್ತಮ ಕ್ರಿಕೆಟ್ ಆಡಲು ಇಲ್ಲಿಗೆ ಬಂದಿದ್ದೇವೆ. ಸುತ್ತಲಿನ ಪರಿಸರ ಸರಿಯಾಗಿದೆ ಮತ್ತು ಆಟಗಾರರು ಅಭಿವೃದ್ಧಿ ಹೊಂದುತ್ತಾರೆ ಎನ್ನುವುದಕ್ಕೆ ನಾವು ಇಲ್ಲಿದ್ದೇವೆ.ಅಂತಹ ಯಾವುದೇ ನಿರೀಕ್ಷೆಯಿಲ್ಲ, ಆದರೆ ನಾವು ತಂಡವಾಗಿ ಆಡುವುದರ ಮೂಲಕ ಸುಧಾರಿಸುವುದಕ್ಕೆ ಬಯಸುತ್ತೇವೆ" ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಸ್ವಲ್ಪ ಸಮಯವನ್ನು ವಿಶ್ರಾಂತಿಗಾಗಿ ಕಳೆದರು, ಇದಾದ ನಂತರ ಅವರು ತರಬೇತಿಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಿದ್ದರು."ನಾನು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೆ, ಎಂದಿನಂತೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ.ಆ ಮೂಲಕ ನಾನು ಚೆನ್ನಾಗಿ ತಯಾರಿ ನಡೆಸುತ್ತಿದ್ದೇನೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇನೆ" ಎಂದು ಹಾರ್ದಿಕ್ ಹೇಳಿದರು.

ಇದನ್ನೂ ಓದಿ :ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ ಹಾಗೂ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಗುಜರಾತ್ ಟೈಟಾನ್ಸ್ ತಂಡವು ಬಿ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಜೊತೆಗೆ ಸ್ಥಾನ ಪಡೆದಿದೆ. ಫ್ರಾಂಚೈಸಿಯು ಮಾರ್ಚ್ 28 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯಾವಳಿಯ ಮೊದಲ ಪಂದ್ಯವನ್ನು ಆಡಲಿದೆ.

ಗುಜರಾತ್ ಟೈಟಾನ್ಸ್ ತಂಡ: ರಶೀದ್ ಖಾನ್, ಹಾರ್ದಿಕ್ ಪಾಂಡ್ಯ (ಸಿ), ಲಾಕಿ ಫರ್ಗುಸನ್, ರಾಹುಲ್ ತೆವಾಟಿಯಾ, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಯಶ್ ದಯಾಳ್, ಡೇವಿಡ್ ಮಿಲ್ಲರ್, ಸಾಯಿ ಕಿಶೋರ್, ಅಭಿನವ್ ಸದಾರಂಗನಿ, ಮ್ಯಾಥ್ಯೂ ವೇಡ್, ಅಲ್ಜಾರಿ ಜೋಸೆಫ್, ರಹಮಾನುಲ್ಲಾ ಗುರ್ಬಾಜ್, ವ್ಹರಿ ಜೋಸೆಫ್, ರಹಮಾನುಲ್ಲಾ ಗುರ್ಬಾಜ್ ಯಾದವ್, ವಿಜಯ್ ಶಂಕರ್, ಡೊಮಿನಿಕ್ ಡ್ರೇಕ್ಸ್, ವರುಣ್ ಆರೋನ್, ಗುರುಕೀರತ್ ಸಿಂಗ್, ನೂರ್ ಅಹ್ಮದ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News