India vs South Africa Final Barbados Weather Report: T20 ವಿಶ್ವಕಪ್ 2024ರ ಸೆಮಿಫೈನಲ್‌’ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮತ್ತು ಭಾರತವು ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಫೈನಲ್‌’ಗೆ ಟಿಕೆಟ್ ಪಡೆದಿದೆ. ಜೂನ್ 29 ರಂದು ನಡೆಯಲಿರುವ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಈ ಪಂದ್ಯ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು..


ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಂತೆ ಅಂತಿಮ ಪಂದ್ಯದಲ್ಲೂ ಮಳೆಯ ಛಾಯೆ ಆವರಿಸಿದೆ. ಅದೇನೇ ಇರಲಿ, ಒಂದು ಒಳ್ಳೆಯ ಸಂಗತಿ ಏನೆಂದರೆ, ಟೈಟಲ್ ಮ್ಯಾಚ್‌’ಗಾಗಿ ಮೀಸಲು ದಿನವನ್ನು ಇಡಲಾಗಿದೆ, ಆದರೆ ಮೀಸಲು ದಿನವೂ ಮಳೆಗೆ ಆಹುತಿಯಾದರೆ ಏನಾಗುತ್ತದೆ? ಭಾರತ ಅಥವಾ ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಯಾರು ವಿಜೇತರಾಗುತ್ತಾರೆ? ಎಂಬ ಅನುಮಾನ ನಿಮ್ಮಲ್ಲಿರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.


ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಭಾರತ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ದಕ್ಷಿಣ ಆಫ್ರಿಕಾ ಆಡಿದ ಎಲ್ಲಾ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟ್ರೋಫಿ ಕದನ ರೋಚಕವಾಗುವ ಸಾಧ್ಯತೆ ಇದೆ. ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್‌’ನ ಫೈನಲ್‌ ಪ್ರವೇಶಿಸಿದ್ದು, ಭಾರತವನ್ನು ಎದುರಿಸಲಿದೆ.


ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಅಕ್ಯುವೆದರ್ ವರದಿ ಪ್ರಕಾರ, ಶನಿವಾರ (ಜೂನ್ 29) ಮೋಡ ಕವಿದ ವಾತಾವರಣ ಇರುತ್ತದೆ. ಅಷ್ಟೇ ಅಲ್ಲ, ಗಾಳಿ ಬೀಸಲಿದ್ದು, ತೇವಾಂಶದಿಂದ ಕೂಡಿರುತ್ತದೆ. ಮಳೆ, ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ದಿನದ ಆರಂಭದಲ್ಲಿ ಶೇ.99 ರಷ್ಟು ಮೋಡ ಕವಿದಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.47 ಇದೆ. ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಲಿದೆ.


ಪಂದ್ಯದ ದಿನ ಮಳೆ ಬಂದರೆ…?


ಭಾರತ-ದಕ್ಷಿಣ ಆಫ್ರಿಕಾ ಫೈನಲ್‌’ನ ದಿನ ಅಂದರೆ ಜೂನ್ 29 ರಂದು ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, ಐಸಿಸಿ ಅದಕ್ಕೆ ಮೀಸಲು ದಿನವನ್ನು ಘೋಷಿಸಿದೆ. ಅಂದರೆ ಜೂನ್ 30 ರಂದು ಪಂದ್ಯ ನಡೆಯಲಿದೆ.


ಇದನ್ನೂ ಓದಿ: ಸೇಡಿನ ಸಮರದಲ್ಲಿ ಆಂಗ್ಲರ ಬಗ್ಗುಬಡಿದ ಭಾರತ ತಂಡ ಫೈನಲ್‌ಗೆ ಎಂಟ್ರಿ! ಇವರೇ ಪ್ರಮುಖ ರುವಾರಿಗಳು


ಮೀಸಲು ದಿನವೂ ರದ್ದಾದರೆ…?


ಮಳೆಯ ಕಾರಣ ಜೂನ್ 30 ರಂದು ಮೀಸಲು ದಿನದಂದು ಪಂದ್ಯವನ್ನು ಆಡದಿದ್ದರೆ, ಎರಡೂ ತಂಡಗಳನ್ನು 2024 ರ T20 ವಿಶ್ವಕಪ್‌’ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.