ಸೇಡಿನ ಸಮರದಲ್ಲಿ ಆಂಗ್ಲರ ಬಗ್ಗುಬಡಿದ ಭಾರತ ತಂಡ ಫೈನಲ್‌ಗೆ ಎಂಟ್ರಿ! ಇವರೇ ಪ್ರಮುಖ ರುವಾರಿಗಳು

T20 World Cup 2024: ಗುರುವಾರ (ಜೂನ್ 27)  ನಡೆದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನುಸಿದ ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.  ಈ ಮೂಲಕ ಬರೋಬ್ಬರಿ 10 ವರ್ಷಗಳ ನಂತರ ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯದಲ್ಲಿ ಫೈನಲ್ಸ್ ಪ್ರವೇಶಿಸಿದೆ. 

Written by - Yashaswini V | Last Updated : Jun 28, 2024, 08:51 AM IST
  • ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಇನಿಂಗ್ಸ್ ಆಧಾರದ ಮೇಲೆ ಟೀಂ ಇಂಡಿಯಾ ಇಂಗ್ಲೆಂಡ್‌ಗೆ 172 ರನ್‌ಗಳ ಸವಾಲಿನ ಗುರಿ ನೀಡಿತ್ತು
  • ಗಯಾನಾ ಪಿಚ್‌ನಲ್ಲಿ 172 ರನ್‌ಗಳ ಗುರಿ ಇಂಗ್ಲೆಂಡ್‌ಗೆ ಪರ್ವತದಂತಿತ್ತು.
  • ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು 68 ರನ್‌ಗಳಿಂದ ಗೆದ್ದು ಬೀಗಿರುವ ಭಾರತ ಇದೀಗ ದಶಕದ ಬಳಿಕ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಸೇಡಿನ ಸಮರದಲ್ಲಿ ಆಂಗ್ಲರ ಬಗ್ಗುಬಡಿದ ಭಾರತ ತಂಡ ಫೈನಲ್‌ಗೆ ಎಂಟ್ರಿ! ಇವರೇ ಪ್ರಮುಖ ರುವಾರಿಗಳು  title=

T20 World Cup 2024: ನಿನ್ನೆ (ಜೂನ್ 27, ಗುರುವಾರ) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ  ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ ದಶಕದ ಬಳಿಕ ಟಿ 20 ವಿಶ್ವಕಪ್ 2024 (T20 World Cup 2024) ಫೈನಲ್‌ಗೆ ಲಗ್ಗೆ ಇಟ್ಟಿದೆ. 

ಗುರುವಾರ ಗಯಾನಾದಲ್ಲಿ ನಡೆದ  ಟಿ20 ವಿಶ್ವಕಪ್‌ನ  (T20 World Cup)ಎರಡನೇ ಸೆಮಿಫೈನಲ್ ಪಂದ್ಯದಲ್ಲಿ  ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಈ ಪಂದ್ಯದಲ್ಲಿ  20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ ಟೀಮ್ ಇಂಡಿಯಾ  ರೋಹಿತ್ ಶರ್ಮಾ (Rohit Sharma) ಪಡೆ ಇಂಗ್ಲೆಂಡ್‌ಗೆ 172 ರನ್‌ಗಳ ಗುರಿ ನೀಡಿತು. ಭಾರತ ತಂಡ ನೀಡಿದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ವಾಸ್ತವವಾಗಿ, ಟಿ20 ವಿಶ್ವಕಪ್ ನ ಸೆಮಿಫೈನಲ್ (T20 World Cup semi-final) ನಂತಹ ಪಂದ್ಯದಲ್ಲಿ ಇಂಗ್ಲೆಂಡ್ ನಂತಹ ಬಲಿಷ್ಠ ತಂಡವನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಆದರೆ, 3 ದೊಡ್ಡ ತಿರುವುಗಳು ಟೀಮ್ ಇಂಡಿಯಾ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ಯಿತು. 

ಇದನ್ನೂ ಓದಿ- ಟೂರ್ನಿಯುದ್ದಕ್ಕೂ ಒಂದೇ ಒಂದು ಸೋಲು ಕಾಣದೆ ವಿಶ್ವಕಪ್ ಗೆದ್ದಿರುವುದು ಈ 2 ತಂಡಗಳು ಮಾತ್ರ: ಯಾವುವವು ಗೊತ್ತಾ?

ಟಿ20 ವಿಶ್ವಕಪ್‌ನ ಫೈನಲ್ ತಲುಪುವಲ್ಲಿ ಟೀಮ್ ಇಂಡಿಯಾಗೆ ನೆರವಾದ ಮೂರು ದೊಡ್ಡ ಟರ್ನಿಂಗ್ ಪಾಯಿಂಟ್ ಗಳು ಈ ಕೆಳಕಂಡಂತಿವೆ:- 
* ರೋಹಿತ್ ಶರ್ಮಾ-ಸೂರ್ಯಾಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್: 

ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅದ್ಭುತ  57 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. 47 ರನ್ ಗಳಿಸುವ ಮೂಲಕ ಇವರಿಗೆ ಬೆನ್ನೆಲುಬಾಗಿದ್ದು ಸ್ಫೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ (Surya Kumar Yadav). ಭಾರತದ ಪರ ಈ ಇಬ್ಬರೂ ಬ್ಯಾಟ್ಸ್ ಮನ್ ಗಳ  ಪ್ರಮುಖ ಇನ್ನಿಂಗ್ಸ್ ಟೀಂ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. 

* ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ : 
ಇಂಗ್ಲೆಂಡ್ ( England) ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನ ರುವಾರಿಯಾಗಿದ್ದು  ಮಾರಕ ಸ್ಪಿನ್ ಬೌಲರ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್.  ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅಕ್ಷರ್ ಪಟೇಲ್ (Akshar Patel) 4 ಓವರ್ ಬೌಲ್ ಮಾಡಿ 23 ರನ್ ನೀಡಿ 3 ವಿಕೆಟ್ ಪಡೆದರು.  ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ನಾಯಕ ಜೋಸ್ ಬಟ್ಲರ್ (23), ಮೊಯಿನ್ ಅಲಿ (8) ಮತ್ತು ಜಾನಿ ಬೈರ್‌ಸ್ಟೋವ್ (0) ಪೆವಿಲಿಯನ್ ಹಾದಿ ತೋರಿಸಿದ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. 

ಇದನ್ನೂ ಓದಿ- ಟಿ20 ವಿಶ್ವಕಪ್’ನಲ್ಲಿ ಮತ್ತೆ ವಿಫಲರಾದ ವಿರಾಟ್: ಸೆಮೀಸ್’ನಲ್ಲೂ ಮುಗ್ಗರಿಸಿದ ಕೊಹ್ಲಿಯಿಂದ ಕಳಪೆ ದಾಖಲೆ ಸೃಷ್ಟಿ!

* ಕುಲದೀಪ್ ಯಾದವ್ -  ಜಸ್ಪ್ರೀತ್ ಬುಮ್ರಾ ಅಬ್ಬರ: 
ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹೊರತು ಪಡಿಸಿ ಕುಲದೀಪ್ ಯಾದವ್  (Kuldeep Yadav) 3 ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah)  2 ವಿಕೆಟ್ ಪಡೆದರು.  ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಭಾರತದ ವಿರುದ್ಧ 68 ರನ್‌ಗಳ ಸೋಲೊಪ್ಪಿ ಮಂಡಿಯೂರಿತು. ಇದರೊಂದಿಗೆ ಟೀಮ್ ಇಂಡಿಯಾ 10 ವರ್ಷಗಳ ನಂತರ  ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News