ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು..

Karnataka Road Accident: ಇಂದು ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಕೂಡ ಸಾವನ್ನಪ್ಪಿದ್ದಾರೆ. 

Written by - Yashaswini V | Last Updated : Jun 28, 2024, 12:59 PM IST
  • ಹಾವೇರಿ ರಸ್ತೆ ಅಪಘಾತದಲ್ಲಿ 13 ಜನರ ಧಾರುಣ ಸಾವು
  • ಸಾವನ್ನಪ್ಪಿದ 13 ಜನರಲ್ಲಿ ಅಂಧರ ಫುಟ್ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಕೂಡ ಒಬ್ಬರು
  • ಐಎಎಸ್ ಕನಸು ಕಂಡಿದ್ದ ಮಾನಸ
ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು.. title=

Karnataka Road Accident: ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ (Blind Football Indian Captain Manasa) ಮೃತಪಟ್ಟಿದ್ದಾರೆ. ಐಎಎಸ್ ಕನಸು ಕಂಡವಳ ಪರಿಶ್ರಮದ ಸಾಧನೆ ಹೇಗಿತ್ತು ಎಂದು ತಿಳಿದರೆ ನಿಜಕ್ಕೂ ಕಣ್ಣು ತುಂಬದೇ ಇರದು. 

ಹಾವೇರಿಯ ದೇವರ ದರ್ಶನಕ್ಕೆಂದು ತೆರಳಿ ಮರಳುವ ವೇಳೆ ಒಂದೇ ಕುಟುಂಬದ 13 ಸದಸ್ಯರು ಸಾವನ್ನಪ್ಪಿದ್ದಾರೆ. ಕಳೆದುಕೊಂಡ ಬಂಧುಗಳ ನೋವು ಹೇಳತೀರದಾಗಿದೆ.  ಹಾವೇರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಅಪ್ಪಳಿಸಿದ ಪರಿಣಾಮ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಧಾರುಣ ಸಾವು ಕಂಡಿದ್ದಾರೆ. ಈ ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. 

ಇದನ್ನೂ ಓದಿ- Road Accident: ಹಿಂಬದಿಯಿಂದ ಲಾರಿಗೆ ಟಿಟಿ ವಾಹನ ಡಿಕ್ಕಿ 13 ಜನರು ದುರ್ಮರಣ

ಸತ್ತ 13 ಮಂದಿ ಬಡ ಕುಟುಂಬದವರೇ ಆಗಿದ್ದು, ಒಬ್ಬೊಬ್ಬರದ್ದು ಕೂಡ ಒಂದೊಂದು ಬೆವರಿನ ಕಥೆ ಇದೆ. ಆದರೆ ಎಲ್ಲಕ್ಕಿಂತಲೂ ಮನ ಕಲುಕುವುದು ಮಾನಸ (24) ಎಂಬ ಅಂಧೆ ಸಾವು. ಮಾನಸ ಅಂಧೆಯಾದ್ರೂ, ಭದ್ರಾವತಿ ತಾಲೂಕಿಗೆ ಹೆಮ್ಮೆಯ ಪುತ್ರಿಯಾಗಿದ್ದಳು. ಯಾಕೆಂದರೆ ಅಂಧೆಯಾದ್ರೂ, ಎಎಸ್ಸಿ ಪದವಿಯನ್ನು ಮಾಡಿದ್ದ ಮಾನಸ ಅಂಧರ ಪುಟ್ ಬಾಲ್ ನಲ್ಲಿ ಭಾರತ ಕ್ಯಾಪ್ಟನ್ ಆಗಿದ್ದರು. ಹಲವು ಪಂದ್ಯಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾಳೆ. 

ಇದನ್ನೂ ಓದಿ- ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ ಮೂವರು ಸಾವು, ಮರದಲ್ಲಿ ನೇತಾಡಿದ ಚಾಲಕ

ಬ್ರೆನ್ ಲಿಪಿ (Brain Script) ಮೂಲಕ ಎಎಸ್ಪಿ ಮಾಡಿದ ಭದ್ರಾವತಿಯ ಮೊದಲ ಯುವತಿ ಮಾನಸ  ಐಎಎಸ್ ಕನಸು ಕಂಡಿದ್ದರು. ಮಾನಸ ಅದಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಐಎಎಸ್ ತನ್ನ ಪರಮ ಗುರಿ ಎಂದುಕೊಂಡಿದ್ದ ಮಾನಸ ದೇವರ ಬಳಿ ಆಶಿರ್ವಾದ ಪಡೆಯಲೆಂದು ಕುಟುಂಬಸ್ಥರೊಂದಿಗೆ ಹೋಗಿದ್ದಳು. ಆದರೆ ಅಲ್ಲಿ ವಿಧಿಯಾಟವೇ ಬೇರೆಯಾಗಿತ್ತು ಅಂತಾ ಕಾಣುತ್ತೆ. ಹಿಂದಿನ ದಿನ ತನ್ನ ಗ್ರಾಮದ ಜನರಿಗೆ ಸಂಬಂಧಿಕರಿಗೆ ಫೋನ್ ಮಾಡಿ ನಾಳೆ ಬೆಳಿಗ್ಗೆ ಎಮ್ಮೆಹಟ್ಟಿಗೆ ಬರುವುದಾಗಿ ಹೇಳಿದ್ದ ಮಾನಸ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾಳೆ. ಆಕೆಯ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News