IND vs SA ODI: ಭಾರತ-ದ.ಆಫ್ರಿಕಾ 1st ODI ಪಂದ್ಯ: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಪಂದ್ಯ 40 ಓವರ್ ಗೆ ಸೀಮಿತ
ರಜತ್ ಪಾಟಿದಾರ್ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಂದು ನಡೆಯುವ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದು ಕಾದುನೋಡಬೇಕಿದೆ. ಸದ್ಯ ಭಾರತದ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.
ಲಕ್ನೋದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಸೌತ್ ಆಫ್ರಿಕಾ ತಂಡದ ನಡುವಿನ ಮೊದಲ ಏಕದಿನ ಪಂದ್ಯವು ಮಳೆಯ ಕಾರಣದಿಂದ ಕೊಂಚ ತಡವಾಗಿ ಪ್ರಾರಂಭವಾಗಿದೆ. ಸದ್ಯ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.
ಇದನ್ನೂ ಓದಿ: ಐಸಿಸಿ 'ಪ್ಲೇಯರ್ ಆಫ್ ದಿ ಮಂತ್'ಗೆ ನಾಮನಿರ್ದೇಶನಗೊಂಡ ಹರ್ಮನ್‌ಪ್ರೀತ್, ಮಂಧಾನ, ಅಕ್ಸರ್
ಮಳೆಯ ಕಾರಣದಿಂದ ತಡವಾಗಿ ಪಂದ್ಯ ಆರಂಭವಾಗಿದೆ. ಸದ್ಯ ಪ್ರತಿ ತಂಡವು ತಲಾ 40 ಓವರ್‌ಗಳನ್ನು ಆಡಬೇಕಾಗಿದ್ದು, ಪ್ರತಿ ಬೌಲರ್‌ಗೆ ಗರಿಷ್ಠ 8 ಓವರ್‌ಗಳನ್ನು ನಿಗದಿಪಡಿಸಲಾಗಿದೆ. ಪವರ್‌ಪ್ಲೇ 1-8 ಓವರ್‌ಗಳು, ಪವರ್‌ಪ್ಲೇ 2 - 24 ಓವರ್‌ಗಳು, ಪವರ್‌ಪ್ಲೇ 3 - 8 ಓವರ್‌ಗಳು ಎಂದು ಫಿಕ್ಸ್ ಮಾಡಿರುವುದಾಗಿ ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ.
ರಜತ್ ಪಾಟಿದಾರ್ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಂದು ನಡೆಯುವ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದು ಕಾದುನೋಡಬೇಕಿದೆ. ಸದ್ಯ ಭಾರತದ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ. ಶಿಖರ್ ಧವನ್ (ಕ್ಯಾ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್ ಮತ್ತು ಮೊಹಮ್ಮದ್ ಸಿರಾಜ್
ಇದನ್ನೂ ಓದಿ: T20 World Cup: ಬುಮ್ರಾ ಬದಲಿಗೆ ಆಡಲಿದ್ದಾರೆ ಈ ಅಪಾಯಕಾರಿ ಸ್ಪೀಡ್ ಬೌಲರ್.!
ಇನ್ನೊಂದೆಡೆ ಮೊಣಕೈ ಗಾಯದ ಕಾರಣ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ODI ಸರಣಿಯನ್ನು ಕಳೆದುಕೊಂಡಿದ್ದ ಟೆಂಬಾ ಬವುಮಾ ಇದೀಗ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬದಲಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲಿದ್ದಾರೆ. ಇಲ್ಲಿದೆ ನೋಡಿ ದ.ಆಫ್ರಿಕಾ ಸಂಭಾವ್ಯ ಆಟಗಾರರ ಪಟ್ಟಿ. ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ಕ್ಯಾ), ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.