ನವದೆಹಲಿ: ಜುಲೈ 22 ಮತ್ತು ಆಗಸ್ಟ್ 7ರ ನಡುವೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಮತ್ತು 5 ಟಿ-20 ಪಂದ್ಯಗಳನ್ನು ಆಡಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಮತ್ತು BCCI ಜಂಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿವೆ. ಭಾರತವು ಜುಲೈ 17ರಂದು ಇಂಗ್ಲೆಂಡ್ ಪ್ರವಾಸ ಪೂರ್ಣಗೊಳಿಸಲಿದ್ದು, ಆಯ್ಕೆಯಾದವರು ನೇರವಾಗಿ ಇಂಗ್ಲೆಂಡ್‌ನಿಂದ ವೆಸ್ಟ್ ಇಂಡೀಸ್‌ಗೆ ತೆರಳಲಿದ್ದಾರೆ.


COMMERCIAL BREAK
SCROLL TO CONTINUE READING

ಏಕದಿನ ಸರಣಿ ಮತ್ತು 3 ಟಿ-20 ಪಂದ್ಯಗಳನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ಕಿಟ್ಸ್ & ನೆವಿಸ್‌ನಲ್ಲಿ ಆಯೋಜಿಸಲಾಗುವುದು. ಅಂತಿಮ ಎಡರು ಟಿ-20 ಪಂದ್ಯಗಳು ಅಮೆರಿಕದ ಫ್ಲೋರಿಡಾದ ಫೋರ್ಟ್ ಲಾಡರ್‌ಹಿಲ್‌ನಲ್ಲಿ ನಡೆಯಲಿದೆ. 3 ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22, 24 ಮತ್ತು 27ರಂದು ಪೋರ್ಟ್ ಆಫ್ ಸ್ಪೇನ್‌ನ (ಟ್ರಿನಿಡಾಡ್ ಮತ್ತು ಟೊಬಾಗೊ) ಐಕಾನಿಕ್ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿವೆ. ನಂತರ 5 ಟಿ-20 ಪಂದ್ಯ ಗಳು ನಡೆಯಲಿವೆ.


ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!


ಮೊದಲ T20 ಜುಲೈ 29ರಂದು ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ (ಪೋರ್ಟ್ ಆಫ್ ಸ್ಪೇನ್) ನಡೆಯಲಿದೆ. ನಂತರ ಕ್ರಮವಾಗಿ ಆಗಸ್ಟ್ 1 ಮತ್ತು 2ರಂದು ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್‌ನಲ್ಲಿ 2 ಪಂದ್ಯಗಳು ನಡೆಯಲಿವೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಆಸೆಯನ್ನು ಪೂರೈಸುವ ಸಲುವಾಗಿ ಅಂತಿಮ 2 ಪಂದ್ಯಗಳು ಆಗಸ್ಟ್ 6 ಮತ್ತು 7ರಂದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.


ಸಂಪೂರ್ಣ ಸರಣಿಯನ್ನು ಫ್ಯಾನ್‌ಕೋಡ್‌ನಲ್ಲಿ ಪ್ರತ್ಯೇಕವಾಗಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಮುಂಬರುವ ಸರಣಿಯ ಬಗ್ಗೆ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಮಾತನಾಡಿದ್ದು, ‘ವೆಸ್ಟ್ ಇಂಡೀಸ್ ತಂಡವು ಕ್ರಿಕೆಟ್ ಬ್ರ್ಯಾಂಡ್ ಅನ್ನು ಪುನಃಸ್ಥಾಪಿಸಲು ಉತ್ಸುಕವಾಗಿದೆ. ಈ ಬಾರಿ ನಾವು ಯುವ ತಂಡವನ್ನು ಹೊಂದಿದ್ದೇವೆ. ಟೀಂ ಇಂಡಿಯಾ ವಿರುದ್ಧ ಕಠಿಣ ಪೈಪೋಟಿ ನೀಡುವ ನಿಟ್ಟಿನಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.


‘ನಾನು ಈ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಂತೆ, ನಮ್ಮ ಮಹತ್ವಾಕಾಂಕ್ಷೆಯು ಯಾವಾಗಲೂ ಸ್ಪರ್ಧಾತ್ಮಕವಾಗಿರಬೇಕು. ಮುಂಬರುವ T20 ಮತ್ತು 50 ಓವರ್‌ಗಳ ವಿಶ್ವಕಪ್‌ಗಾಗಿ ನಮ್ಮ ಸಿದ್ಧತೆಗಳನ್ನು ಉತ್ತಮಗೊಳಿಸಲು ಈ ಸರಣಿ ನಮಗೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.   


ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!


ಭಾರತ  vs ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ


ಏಕದಿನ ಪಂದ್ಯಗಳು:-


1ನೇ ಏಕದಿನ ಪಂದ್ಯ: ಜುಲೈ 22 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)


2ನೇ ಏಕದಿನ ಪಂದ್ಯ: ಜುಲೈ 24 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)


3ನೇ ಏಕದಿನ ಪಂದ್ಯ: ಜುಲೈ 27 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)


ಟಿ-20 ಪಂದ್ಯಗಳು:-


1ನೇ ಟಿ-20: ಜುಲೈ 29: (ಬ್ರಿಯಾನ್ ಲಾರಾ ಸ್ಟೇಡಿಯಂ, ಪೋರ್ಟ್ ಆಫ್ ಸ್ಪೇನ್)


2ನೇ ಟಿ-20: ಆಗಸ್ಟ್ 1 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)


3ನೇ ಟಿ-20: ಆಗಸ್ಟ್ 2 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)


4ನೇ ಟಿ-20: ಆಗಸ್ಟ್ 6 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)


5ನೇ ಟಿ-20: ಆಗಸ್ಟ್ 7 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.