ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!

ಬೆನ್ನುನೋವಿನಿಂದಾಗಿ ಐಪಿಎಲ್ 2022 ಆವೃತ್ತಿಯನ್ನು ತಪ್ಪಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ದೀಪಕ್ ಚಹಾರ್ ಜೂನ್ 1 ರಂದು ಆಗ್ರಾದಲ್ಲಿ ಮದುವೆಯಾಗಲಿದ್ದಾರೆ ಮತ್ತು ಜೂನ್ 3 ರಂದು ದೆಹಲಿಯಲ್ಲಿ ಆರತಕ್ಷತೆ ನಡೆಯಲಿದೆ.

Written by - Zee Kannada News Desk | Last Updated : May 31, 2022, 04:20 PM IST
  • ಜೂನ್ 1 ರಂದು ಮದುವೆ ಕಾರ್ಯಕ್ರಮ ಇರುವುದರಿಂದ ಆ ದಿನ ಯಾರೆಲ್ಲಾ ಹಾಜರಾಗಲಿದ್ದಾರೆ ಎನ್ನುವ ಸಂಪೂರ್ಣ ಚಿತ್ರಣ ಸಿಗಲಿದೆ.
ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!  title=

ನವದೆಹಲಿ: ಬೆನ್ನುನೋವಿನಿಂದಾಗಿ ಐಪಿಎಲ್ 2022  ರಆವೃತ್ತಿಯನ್ನು ತಪ್ಪಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ದೀಪಕ್ ಚಹಾರ್ ಅವರು ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರನ್ನು ಜೂನ್ 1 ರಂದು ಆಗ್ರಾದಲ್ಲಿ ಮದುವೆಯಾಗಲಿದ್ದಾರೆ ಮತ್ತು ಜೂನ್ 3 ರಂದು ದೆಹಲಿಯಲ್ಲಿ ಆರತಕ್ಷತೆ ನಡೆಯಲಿದೆ.

ನಿಮಗೆ ನೆನಪಿರಬಹುದು ಐಪಿಎಲ್ 2021 ರ ಸಮಯದಲ್ಲಿ ದೀಪಕ್ ತನ್ನ ಗೆಳತಿ ಜಯ ಭಾರದ್ವಾಜ್‌ಗೆ ಪ್ರಪೋಸ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.ಈಗ ಮದುವೆಗೆ ಮಹೇಂದ್ರ ಸಿಂಗ್ ಧೋನಿ, ಹಾಗೂ ರೋಹಿತ್ ಶರ್ಮಾ, ಹಾಗೂ ವಿರಾಟ್ ಕೊಹ್ಲಿ ಅವರಿಗೆ ಆಹ್ವಾನ ನೀಡಿದ್ದಾರೆ. ವರದಿಯ ಪ್ರಕಾರ, ಈ ಮೂವರು ಕ್ರಿಕೆಟ್ ತಾರೆಯರು ವಿವಾಹ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.Deepak Chahar weds Jaya Bhardwaj: MS Dhoni, Virat Kohli and Rohit Sharma are invited to marriage

ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ'

'ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ, ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಅವರನ್ನು ಆಹ್ವಾನಿಸಲಾಗಿದೆ. ಅವರು ದೀಪಕ್ ಚಹಾರ್ ಅವರ ಮದುವೆಯಲ್ಲಿ ಹಾಜರಿರುತ್ತಾರೆ" ಎಂದು ದೀಪಕ್ ಚಹರ್ ಅವರ ಕುಟುಂಬದ ಸದಸ್ಯರೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ.ಈಗ ಅವರ ಮದುವೆಯ ಕಾರ್ಡ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈಗ ದೀಪಕ್ ಅವರು ಈ ಮೂವರು ಆಟಗಾರರನ್ನು ಹೊರತುಪಡಿಸಿ ಇತರ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಜೂನ್ 1 ರಂದು ಮದುವೆ ಕಾರ್ಯಕ್ರಮ ಇರುವುದರಿಂದ ಆ ದಿನ ಯಾರೆಲ್ಲಾ ಹಾಜರಾಗಲಿದ್ದಾರೆ ಎನ್ನುವ ಸಂಪೂರ್ಣ ಚಿತ್ರಣ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News