ನವದೆಹಲಿ: ಕಳೆದ ವರ್ಷ ಮೊದಲ ಬಾರಿಗೆ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಫೈನಲ್‌ವರೆಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ದುರದೃಷ್ಟವಶಾತ್ ಈ ವರ್ಷ ಐಪಿಎಲ್ನಲ್ಲಿ ಕಾಣಿಸುವುದಿಲ್ಲ. ಈ ವರ್ಷದ ಐಪಿಎಲ್ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದುಇದಕ್ಕೂ ಮೊದಲು ದೆಹಲಿ ಕ್ಯಾಪಿಟಲ್ಸ್  (Delhi Capitals)  ತಂಡ ತನ್ನ ನಾಯಕನನ್ನು ನೇಮಿಸಿದೆ. ಶ್ರೇಯಸ್ ಅಯ್ಯರ್ (Shreyas Iyer)  ಅನುಪಸ್ಥಿತಿಯಲ್ಲಿ, ಈ ವರ್ಷ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ದೆಹಲಿ ಕ್ಯಾಪಿಟಲ್ಸ್ ತಂಡವನ್ನು  ಮುನ್ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿರುವ ಶ್ರೇಯಸ್ :
ವಾಸ್ತವವಾಗಿ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಗಾಯಗೊಂಡಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಚೆಂಡನ್ನು ಹಿಡಿಯುವ ರಭಸದಲ್ಲಿ ಶ್ರೇಯಸ್ ಧುಮುಕಿದರು, ನಂತರ ಅವರ ಭುಜಕ್ಕೆ ಗಾಯವಾಯಿತು. ಈ ಗಾಯದಿಂದಾಗಿ ಶ್ರೇಯಸ್ ಅಯ್ಯರ್ ಇಡೀ ಸರಣಿಯಿಂದಲೇ ಹೊರಗುಳಿಯಬೇಕಾಯಿತು. ಅಲ್ಲದೆ ವೈದ್ಯರು ಅವರಿಗೆ ಕೆಲವು ವಾರಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದರಿಂದ ಐಪಿಎಲ್ 2021 ರಿಂದಲೂ ಹೊರಬಿದ್ದಿದ್ದಾರೆ. 


ಇದನ್ನೂ ಓದಿ - ಈ ಆಟಗಾರನನ್ನು Definition Of Heroism ಎಂದು ಕರೆದ ಉದ್ಯಮಿ ಆನಂದ್ ಮಹೇಂದ್ರಾ


ದೆಹಲಿ ತಂಡಕ್ಕೆ ನಾಯಕನಾದ ಪಂತ್ :
ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಕೆಲವು ಅನುಭವಿಗಳು ಸ್ಟೀವ್ ಸ್ಮಿತ್ ಅಥವಾ ರವಿಚಂದ್ರನ್ ಅಶ್ವಿನ್ ಅವರನ್ನು ನಾಯಕನನ್ನಾಗಿ ಮಾಡಬಹುದು ಎಂದು ನಂಬಿದ್ದರು. ಅಜಿಂಕ್ಯ ರಹಾನೆ ಕೂಡ ದೆಹಲಿ ಕ್ಯಾಪಿಟಲ್ಸ್ ಸಾರಥ್ಯ ವಹಿಸಬಹುದು ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿದ್ದವು. ಇವೆಲ್ಲದಕ್ಕೂ ತೆರೆ ಎಳೆದಿರುವ ದೆಹಲಿ ಕ್ಯಾಪಿಟಲ್ಸ್ ರಿಷಭ್ ಪಂತ್ (Rishabh Pant) ಅವರನ್ನು ತಂಡದ ನಾಯಕರನ್ನಾಗಿ ಘೋಷಿಸಿದೆ. ರಿಷಭ್ ಪಂತ್ ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ ಮತ್ತು ಮುಂಬರುವ ಕಾಲದಲ್ಲಿ ಅವರು ಭಾರತದ ಭವಿಷ್ಯದ ಉತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಪಂತ್ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿವೆ.


Harmanpreet Kaur: ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿಗೆ ಕೊರೊನಾ ಪಾಸಿಟಿವ್


 


 


ಮುಂಬೈ-ಆರ್‌ಸಿಬಿ ವಿರುದ್ಧ ಮೊದಲ ಪಂದ್ಯ - 
ಐಪಿಎಲ್ 2021 (IPL 2021) ರ ಮೊದಲ ಪಂದ್ಯ ಏಪ್ರಿಲ್ 9 ರಂದು ಕೊನೆಯ ಬಾರಿಗೆ ವಿಜೇತರಾದ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೆಣಸಲಿದ್ದಾರೆ. ಇದರ ನಂತರ ಸಿಎಸ್‌ಕೆ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಏಪ್ರಿಲ್ 10 ರಂದು ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕಳೆದ ವರ್ಷ ಯುಎಇಯಲ್ಲಿ ಐಪಿಎಲ್ ಆಯೋಜಿಸಲಾಗಿತ್ತು. ಆದರೆ ಈ ವರ್ಷ ಭಾರತದಲ್ಲಿ ಮತ್ತೊಮ್ಮೆ ಐಪಿಎಲ್ ನಡೆಯುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.