ನವದೆಹಲಿ: ಪುಣೆಯಲ್ಲಿ ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲುವಿನ ತಡಕ್ಕೆ ತಂದಿದ್ದ ಸ್ಯಾಮ್ ಕರನ್ ಬಗ್ಗೆ ಎಲ್ಲಿಲ್ಲದ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
ಈಗ ಅವರು ಭಾರತದ ಕ್ರಿಕೆಟ್ ಪ್ರವಾಸ ಕುರಿತಾಗಿ ಪೋಸ್ಟ್ ಹಾಕಿ ಬಹಳಷ್ಟು ಪಾಠಗಳನ್ನು ಕಲಿಯಲಾಗಿದೆ ಉತ್ತಮ ಸರಣಿ, ಭಾರತಕ್ಕೆ ಅಭಿನಂದನೆಗಳು ಎಂದು ಕರನ್ ಅವರು ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಭಾರತದ ಉದ್ಯಮಿ ಆನಂದ್ ಮಹಿಂದ್ರಾ (Anand Mahindra) ನೀವು ವೀರತೆ , ನಮ್ರತೆ ವ್ಯಾಖ್ಯಾನದ ಪ್ರತೀಕ"ಎಂದು ಅವರು ಕರನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: WATCH: ಪಂದ್ಯದ ಚಿತ್ರಣವನ್ನೇ ಬದಲಿಸಿದ ವಿರಾಟ್ ಕೊಹ್ಲಿ ಹಿಡಿದ ಆ ಕ್ಯಾಚ್..!
If you’re looking for the definition of heroism, humility & grace... https://t.co/0xgsv72NGF
— anand mahindra (@anandmahindra) March 30, 2021
ಕುರ್ರನ್ ಆದಿಲ್ ರಶೀದ್ ಅವರೊಂದಿಗೆ 57 ರನ್‌ಗಳ ಜೊತೆಯಾಟವನ್ನು ಮತ್ತು ಮಾರ್ಕ್ ವುಡ್ ಅವರೊಂದಿಗೆ 60 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಪಂದ್ಯವನ್ನು ಇಂಗ್ಲೆಂಡ್ ಪರವಾಗಿ ವಾಲುವಂತೆ ಮಾಡಿದ್ದರು.ಈಗ ಎಂಟನೇ ಕ್ರಮಾಂಕದಲ್ಲಿ 95 ರನ್ ಗಳ ಅಧಿಕ ಮೊತ್ತ ಗಳಿಸಿದ ಸಾಧನೆಗೆ ಅವರು ಪಾತ್ರರಾಗಿದ್ದಾರೆ.
ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಗೆಲುವು ತಂದಿಟ್ಟ ನಟರಾಜನ್, ಭಾರತಕ್ಕೆ 2-1 ರಿಂದ ಸರಣಿ ಕೈವಶ
ಈಗ ಭಾರತ-ಇಂಗ್ಲೆಂಡ್ ಸರಣಿ ಮುಗಿಯುವದರೊಂದಿಗೆ, ಈಗ ಎಲ್ಲರ ಗಮನವು ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಇದೆ. ಇದು ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.