ಹೊಸದಿಲ್ಲಿ: 14 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿ ನಿಮಿತ್ಯ ಕನ್ನಡದಲ್ಲಿಯೇ ಟ್ವೀಟ್‌ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್‌ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ಚೊಚ್ಚಲ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಳ್ಳುವ ತುಡಿತದಲ್ಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ(RCB) ಏಪ್ರಿಲ್‌ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ 2021ರ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿದೆ. ಉಭಯ ತಂಡಗಳ ಕಾದಾಟಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ.


IPL 2021: ಈ ಆಟಗಾರನ ಹೆಗಲಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ


ಅಂದಹಾಗೆ, ಕಳೆದ ಹಲವು ದಿನಗಳಿಂದ ಚೆನ್ನೈನಲ್ಲಿ ತರಬೇತಿಯಲ್ಲಿ ತೊಡಗಿರುವ ಆರ್‌ಸಿಬಿ ತಂಡಕ್ಕೆ ಸ್ಪಿನ್ನರ್‌ ಯುಜ್ವೇಂದ್ರ ಚಹಲ್(Yuzvendra Chahal) ಇದೀಗ‌ ಸೇರ್ಪಡೆಯಾಗಿದ್ದಾರೆ. ಈ ವಿಷಯವನ್ನು ಅವರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಕನ್ನಡ ಭಾಷೆಯ ಮೂಲಕವೇ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ಆರ್‌ಸಿಬಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ನನಗೆ ತುಂಬಾ ಸಂತೋಷವಾಗಿದೆ! ರೆಡ್‌ ಹಾರ್ಟ್," ಎಂದು ಟ್ವೀಟ್‌ ಮಾಡಿದ್ದಾರೆ. 


ಈ ಆಟಗಾರನನ್ನು Definition Of Heroism ಎಂದು ಕರೆದ ಉದ್ಯಮಿ ಆನಂದ್ ಮಹೇಂದ್ರಾ


ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್‌ ಮಾಡಿರುವ ಅಭ್ಯಾಸದ ಕೆಲ ಫೋಟೊ(Photos)ಗಳಿಗೆ ಕನ್ನಡದಲ್ಲಿ ಈ ರೀತಿ ಶೀರ್ಷಿಕೆ ಬರೆದಿರುವ ಯುಜ್ವೇಂದ್ರ ಚಹಲ್‌ ಅವರನ್ನು ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಾಡಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.


Harmanpreet Kaur: ಭಾರತದ ಮಹಿಳಾ ಟಿ 20 ಕ್ರಿಕೆಟ್ ತಂಡದ ನಾಯಕಿಗೆ ಕೊರೊನಾ ಪಾಸಿಟಿವ್


ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್(Twitter)‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಯುಜ್ವೇಂದ್ರ ಚಹಲ್‌, ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಟೂರ್ನಿಯಲ್ಲಿ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


WATCH: ಪಂದ್ಯದ ಚಿತ್ರಣವನ್ನೇ ಬದಲಿಸಿದ ವಿರಾಟ್ ಕೊಹ್ಲಿ ಹಿಡಿದ ಆ ಕ್ಯಾಚ್..!


"ಈ ಬಾರಿ ತಂಡದಲ್ಲಿ ಹಲವು ಪ್ರತಿಭಾವಂತ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಹಿಂದಿನ ಆವೃತ್ತಿಗಳನ್ನು ಮರೆತು ಹೊಸ ಉತ್ಸಾಹದೊಂದಿಗೆ 2021ರ ಐಪಿಎಲ್‌(IPL 2021) ಟೂರ್ನಿಯನ್ನು ಆರಂಭಿಸಲಿದ್ದೇವೆ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆರ್‌ಸಿಬಿ ಗೆಲುವಿಗಾಗಿ ಅತ್ಯುತ್ತಮ ಪ್ರದರ್ಶನ ತೋರುತ್ತೇವೆ. ಒಟ್ಟಾರೆ ಈ ಆವೃತ್ತಿಯ ಬಗ್ಗೆ ಹೆಚ್ಚಿನ ಉತ್ಸುಕತೆ ಇದೆ," ಎಂದು ಯುಜ್ವೇಂದ್ರ ಚಹಲ್‌ ಆರ್‌ಸಿಬಿ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ.‌


ರೋಚಕ ಘಟ್ಟದಲ್ಲಿ ಗೆಲುವು ತಂದಿಟ್ಟ ನಟರಾಜನ್, ಭಾರತಕ್ಕೆ 2-1 ರಿಂದ ಸರಣಿ ಕೈವಶ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.