ನವದೆಹಲಿ: ಕೊನೆಯ ಓವರ್ ನಲ್ಲಿ ಟಿ.ನಟರಾಜನ್ ತೋರಿದ ಬೌಲಿಂಗ್ ಕೈಚಳಕದಿಂದಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 7 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: "ಕ್ರಿಕೆಟರ್ ಮಿಥಾಲಿ ರಾಜ್ ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲ ಪುರುಷ ಕ್ರಿಕೆಟಿಗರಿಗೂ ಸ್ಫೂರ್ತಿ
India win!
Natarajan gives away just six runs in the final over, giving his team a seven-run victory.
It means India take the ODI series 2-1! 🏆 pic.twitter.com/Au4lyUs2EM
— ICC (@ICC) March 28, 2021
ಪುಣೆದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಇಂಗ್ಲೆಂಡ್ ತಂಡವು ಭಾರತಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಭಾರತದ ಪರವಾಗಿ ಭರ್ಜರಿ ಆರ್ಧಶತಕ ಸಿಡಿಸಿದ ಶಿಖರ್ ಧವನ್ 67, ರಿಶಬ್ ಪಂತ್ 78, ಹಾರ್ದಿಕ್ ಪಾಂಡ್ಯ 64 ರನ್ ಗಳಿಸುವ ಮೂಲಕ ತಂಡದ ಮೊತ್ತ 300 ಗಡಿ ದಾಟಲು ನೆರವಾದರು.48.2 ಓವರ್ ಗಳಲ್ಲಿ ಭಾರತವು ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 329 ರನ್ ಗಳಿಸಿತು.
ಇದನ್ನೂ ಓದಿ: Sachin Tendulkar: ಸಚಿನ್ ತೆಂಡೂಲ್ಕರ್‌ಗೆ ಕರೋನಾ ಪಾಸಿಟಿವ್
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡವು ಆರಂಭದಲ್ಲಿ 95 ರನ್ ಗಳಾಗುವಷ್ಟರಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಸ್ಯಾಮ್ ಕರಣ್ ಅವರು ಅಜೇಯ 95 ರನ್ ಗಳು ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿತು. ಆದರೆ ಕೊನೆಯ ಓವರ್ ನಲ್ಲಿ ನಟರಾಜನ್ ಅವರು ಮಾಡಿದ ಭರ್ಜರಿ ಬೌಲಿಂಗ್ ನಿಂದಾಗಿ ಭಾರತ ತಂಡವು ಗೆಲುವಿನ ನಗೆಯನ್ನು ಬಿರಿತು.ಆ ಮೂಲಕ ಏಕದಿನ ಸರಣಿಯನ್ನು 2-1 ರ ಅಂತರದಿಂದ ಗೆದ್ದಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.