IPL 2022 MEGA AUCTION: Suresh Rainaಗೆ ಭಾರಿ ಹಿನ್ನಡೆ, ಯಾವ ತಂಡವೂ ಕೂಡ ಖರೀದಿಗೆ ಮುಂದಾಗಲಿಲ್ಲ
IPL 2022 MEGA AUCTIONನ ಮೊದಲ ಸುತ್ತಿನಲ್ಲಿ ಸ್ಪೋಟಕ ಬ್ಯಾಟ್ಸ್ ಮನ್ ಸುರೇಶ ರೈನಾ ಮಾರಾಟವಾಗದೇ ಉಳಿದಿದ್ದಾರೆ ಮತ್ತು ಯಾವುದೇ ತಂಡ ಅವರನ್ನು ಖರೀದಿಸಿಲ್ಲ (Unsold). ಅವರ ಹಳೆ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿಲ್ಲ.
ಹೊಸದಿಲ್ಲಿ: IPL Mega Auction 2022 - ಭಾರತದ ಸ್ಫೋಟಕ ಟಿ20 ಬ್ಯಾಟ್ಸ್ ಮನ್ ಹಾಗೂ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾಗೆ (Suresh Raina) ಭಾರಿ ಹಿನ್ನಡೆಯಾಗಿದೆ. ಸುರೇಶ್ ರೈನಾ IPL 2022 ರ ಮೆಗಾ ಹರಾಜಿನ ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ ಮತ್ತು ಯಾವುದೇ ತಂಡವು ಅವರನ್ನು ಖರೀದಿಸಲು ಮುಂದಾಗಿಲ್ಲ. ಸುರೇಶ್ ರೈನಾ ಅವರ ಹಳೆಯ ಐಪಿಎಲ್ (Indian Premier League) ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ.
IPL 2022 Auction: 7 ಕೋಟಿಗೆ ಆರ್ಸಿಬಿ ಪಾಲಾದ ಡುಪ್ಲೆಸಿಸ್, 6.25 ಕೋಟಿಗೆ ವಾರ್ನರ್ ಸೇಲ್!
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಹೊಂದಿರುವ ರೈನಾ ಕೇವಲ 2 ಕೋಟಿ ರೂ ಮೂಲ ಬೆಲೆ ಹೊಂದಿದ್ದರು ಮತ್ತು ಅದಕ್ಕೂ ಮೊದಲು ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಐಪಿಎಲ್ 2022 ರಲ್ಲಿ ರೈನಾ ಯಾವುದೇ ಖರೀದಿದಾರರನ್ನು ಪಡೆಯದಿರುವ ಕಾರಣ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಆದರೆ ಅವರನ್ನು ಖರೀದಿಸಲು ತಂಡಗಳಿಗೆ ಮತ್ತೊಂದು ಅವಕಾಶವಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಎರಡನೇ ಸುತ್ತಿನಲ್ಲೂ ಕೂಡ ಒಂದು ವೇಳೆ ರೈನಾಗೆ ಖರೀದಿದಾರರು ಸಿಗದಿದ್ದರೆ ರೈನಾ ಪಾಲಿಗೆ ಇದು ದೊಡ್ಡ ಹಿನ್ನಡೆಯೇ ಎಂದು ಹೇಳಬಹುದು.
ಇದನ್ನೂ ಓದಿ-IPL Mega Auction: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿನಲ್ಲಿ ಇಂದು 106 ಆಟಗಾರರು ಸೇಲ್..!
ಈ ದಿಗ್ಗಜರು ಕೂಡ ಮಾರಾಟವಾಗದೆ ಉಳಿದಿದ್ದಾರೆ
ಸುರೇಶ್ ರೈನಾ ಹೊರತುಪಡಿಸಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಕೂಡ ಮಾರಾಟವಾಗದೆ ಉಳಿದಿದ್ದಾರೆ. ಮತ್ತೊಂದೆಡೆ, ಡ್ವೇನ್ ಬ್ರಾವೋ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಸೇರಿಕೊಂಡಿದ್ದಾರೆ, ಬ್ರಾವೋ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 4.25 ಕೋಟಿ ರೂ.ಗೆ ಖರೀದಿಸಿದೆ.
ಇದನ್ನೂ ಓದಿ-IND vs WI: ಮೂರನೇ ಏಕದಿನ ಪಂದ್ಯವನ್ನು 96 ರನ್ ಗಳಿಂದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದ Team India
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.