ನವದೆಹಲಿ: Ind Vs WI ODI Series - ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 96 ರನ್‌ಗಳಿಂದ ಸೋಲಿಸಿದ ಭಾರತ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 265 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ (Ind Vs WI ODI Series) 37.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಾದಿ ಕೃಷ್ಣ ತಲಾ ಮೂರು ವಿಕೆಟ್ ಪಡೆದರೆ, ದೀಪಕ್ ಚಹಾರ್ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ವಿಂಡೀಸ್ ಪರ ನಿಕೋಲಸ್ ಪೂರನ್ 39 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರೆ, ಓಡಿನ್ ಸ್ಮಿತ್ ಕೇವಲ 18 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು.
ಪೂರಣ್ ಕುಲದೀಪ್ ಯಾದವ್ ಅವರ ಬೌಲ್ ನಲ್ಲಿ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಅವರಿಗೆ ಕ್ಯಾಚ್ ನೀಡಿ ಔಟಾದರೆ, ಸ್ಮಿತ್ ಮೊಹಮ್ಮದ್ ಶಿರಾಜ್ ಬೌಲ್ ನಲ್ಲಿ ಶಿಖರ್ ಧವನ್ ಗೆ ಕ್ಯಾನ್ ನೀಡಿದ್ದಾರೆ. ಅಲ್ಜಾರಿ ಜೋಸೆಫ್ ಕೂಡ 56 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 29 ರನ್ ಗಳಿಸಿ ಔಟಾದರು.
ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ 13 ಎಸೆತಗಳಲ್ಲಿ 14 ರನ್ ಮತ್ತು ಡ್ಯಾರೆನ್ ಬ್ರಾವೋ 30 ಎಸೆತಗಳಲ್ಲಿ 20 ರನ್ ಗಳಿಸಿದರು. 25 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡ ವಿಂಡೀಸ್ ತಂಡ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಸಿಲುಕಿತ್ತು. 82 ರನ್ ಗಳಿಸಿದ್ದಾಗ ವಿಂಡೀಸ್ ತನ್ನ ಏಳನೇ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಸ್ಮಿತ್ ಅವರ ಅಬ್ಬರದ ಇನ್ನಿಂಗ್ಸ್‌ನಿಂದ ವಿಂಡೀಸ್ 100ರ ಗಡಿ ದಾಟಿತು.
ಇದನ್ನೂ ಓದಿ-Indian Open 2022 Golf: ಕೊರೊನಾ ಹಿನ್ನಲೆಯಲ್ಲಿ ಗಾಲ್ಪ್ ಟೂರ್ನಿ ರದ್ದು
ಇದಕ್ಕೂ ಮೊದಲು, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ನಡುವಿನ ಶತಕದ ಜೊತೆಯಾಟದ ಕಾರಣ ಶುಕ್ರವಾರ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಗೌರವಾನ್ವಿತ 265 ರನ್ ಗಳಿಸಿತ್ತು.
ಇದನ್ನೂ ಓದಿ-Ind vs WI : 5 ವರ್ಷಗಳ ಕಾಲ ಕೊಹ್ಲಿ ತಿರಸ್ಕರಿಸಿದ್ದ ಆಟಗಾರನನ್ನು ಕರೆತಂದ ರೋಹಿತ್ ಶರ್ಮಾ!
ಫೇಲಾದ ರೋಹಿತ್, ಧವನ್ ಹಾಗೂ ಕೊಹ್ಲಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) (13) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) (0) ನಾಲ್ಕನೇ ಓವರ್‌ನ ಮೂರು ಎಸೆತಗಳಲ್ಲಿ ಪೆವಿಲಿಯನ್‌ಗೆ ಮರಳಿದರು ಮತ್ತು ಶಿಖರ್ ಧವನ್ (10) ಕೂಡ ಬೇಗನೆ ಔಟಾದ ನಂತರ ಭಾರತ ತಂಡ 3 ವಿಕೆಟ್ ಕಳೆದುಕೊಂಡು 42 ರನ್ ಗಳಿಸಿತ್ತು.
ಇದನ್ನೂ ಓದಿ-IND vs WI : ಟೀಂ ಇಂಡಿಯಾಗೆ ದಿಢೀರ್ ಎಂಟ್ರಿ ನೀಡಿದ ಈ ಸ್ಪೋಟಕ ಬ್ಯಾಟ್ಸಮನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.