IPL ಹರಾಜಿನ ಮುನ್ನಾ ದಿನವೇ Punjab Kings ಪಾಲಿಗೆ ಆಘಾತ , ಕೊನೆ ಕ್ಷಣದಲ್ಲಿ ಹಿಂದೆ ಸರಿದ ಈ ಆಟಗಾರ

 ಮೆಗಾ ಹರಾಜಿಗೆ ಕೇವಲ ಒಂದು ದಿನ ಬಾಕಿ ಉಳಿದಿರುವಾಗ, ಪಂಜಾಬ್ ತಂಡಕ್ಕೆ ಭಾರೀ ಹಿನ್ನೆಡೆಯಾಗಿದೆ. 

Written by - Ranjitha R K | Last Updated : Feb 11, 2022, 10:08 AM IST
  • ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಯಲಿದೆ
  • ಕೊನೆ ಕ್ಷಣದಲ್ಲಿ ಪಂಜಾಬ್ ತಂಡವನ್ನು ತೊರೆದ ಈ ಕ್ರಿಕೆಟಿಗ
  • ಪಂಜಾಬ್ ತಂಡ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ
IPL ಹರಾಜಿನ ಮುನ್ನಾ ದಿನವೇ Punjab Kings ಪಾಲಿಗೆ ಆಘಾತ , ಕೊನೆ ಕ್ಷಣದಲ್ಲಿ ಹಿಂದೆ ಸರಿದ ಈ ಆಟಗಾರ  title=
ಕೊನೆ ಕ್ಷಣದಲ್ಲಿ ಹಿಂದೆ ಸರಿದ Punjab Kings ಆಟಗಾರ (file photo)

ನವದೆಹಲಿ : ಐಪಿಎಲ್ 2022ರಲ್ಲಿ (IPL 2022) 10 ತಂಡಗಳು ಕಣದಲ್ಲಿರಲಿವೆ. ನಾಳೆ ಮತ್ತು ನಾಡಿದ್ದು (ಫೆಬ್ರವರಿ 12 ಮತ್ತು 13 ರಂದು)  ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ (IPL Mega Auction) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಮೆಗಾ ಹರಾಜಿಗೆ ಕೇವಲ ಒಂದು ದಿನ ಬಾಕಿ ಉಳಿದಿರುವಾಗ, ಪಂಜಾಬ್ ತಂಡಕ್ಕೆ ಭಾರೀ ಹಿನ್ನೆಡೆಯಾಗಿದೆ. 

ದೂರ ಉಳಿದ ಆಟಗಾರ : 
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿಗೆ ಒಂದೇ ದಿನ ಬಾಕಿ ಉಳಿದಿದೆ.  ಆದರೆ ಕೊನೆ ಘಳಿಗೆಯಲ್ಲಿ Punjab Kingsಗೆ ದೊಡ್ಡ ಆಘಾತ ಎದುರಾಗಿದೆ. ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟ್ವಿಟರ್‌ ಮೂಲಕ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ಪಂಜಾಬ್ ಕಿಂಗ್ಸ್ 2019 ರಲ್ಲಿ ವಾಸಿಂ ಜಾಫರ್ (Wasim Jaffer) ಅವರನ್ನು ಕೋಚ್ ಆಗಿ ಸೇರಿಸಿತ್ತು. ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ (Anil Kumble) ಮತ್ತು ಬೌಲಿಂಗ್ ಕೋಚ್ ಆಸ್ಟ್ರೇಲಿಯಾದ ಡೇಮಿಯನ್ ರೈಟ್, ಮತ್ತು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್  ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಇದನ್ನೂ ಓದಿ : Ind vs WI : 5 ವರ್ಷಗಳ ಕಾಲ ಕೊಹ್ಲಿ ತಿರಸ್ಕರಿಸಿದ್ದ ಆಟಗಾರನನ್ನು ಕರೆತಂದ ರೋಹಿತ್ ಶರ್ಮಾ!

ಟ್ವೀಟ್ ಮಾಡುವ ಮೂಲಕ ರಾಜೀನಾಮೆ :
ವಾಸಿಂ ಜಾಫರ್ (Wasim Jaffer) ತಂಡವನ್ನು ತೊರೆಯುವ ಬಗ್ಗೆ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ರಣಬೀರ್ ಕಪೂರ್ (Ranbeer Kapoor) ಅಭಿನಯದ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ 'ಅಚ್ಚಾ ಚಲತಾ ಹೂ' ಹಾಡಿನ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ಕೋಚ್ ಅನಿಲ್ ಕುಂಬ್ಳೆ ಮತ್ತು ತಂಡಕ್ಕೆ ಐಪಿಎಲ್ 2022 (IPL 2022) ಸೀಸನ್‌ಗೆ ಶುಭ ಹಾರೈಸಿದ್ದಾರೆ.  

 

ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು : 
ಐಪಿಎಲ್ ಮೆಗಾ ಹರಾಜು (IPL Mega Auction) ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ.  ಇದರಲ್ಲಿ  590 ಆಟಗಾರರ ಹೆಸರುಗಳು ಸೇರಿವೆ. ಇವರಲ್ಲಿ 228 ಮಂದಿ ಕ್ಯಾಪ್ಡ್ ಆಟಗಾರರಾಗಿದ್ದರೆ, 355 ಆಟಗಾರರು ಅನ್‌ಕ್ಯಾಪ್ ಆಟಗಾರರು. IPL 2022 ರಲ್ಲಿ 10 ತಂಡಗಳು ಕಣಕ್ಕೆ ಇಳಿಯಲಿವೆ.  ಈ ಬಾರಿ  ಲಕ್ನೋ ಮತ್ತು ಅಹಮದಾಬಾದ್ ಹೊಸ ತಂಡಗಳು ಸೇರಿವೆ.  

 ಇದನ್ನೂ ಓದಿ : IND vs WI : ಟೀಂ ಇಂಡಿಯಾಗೆ ದಿಢೀರ್ ಎಂಟ್ರಿ ನೀಡಿದ ಈ ಸ್ಪೋಟಕ ಬ್ಯಾಟ್ಸಮನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News