ನವದೆಹಲಿ: ವಿಶ್ವದ ಶ್ರೀಮಂತ ಟಿ-20 ಲೀಗ್ ಐಪಿಎಲ್‍ನ 16ನೇ ಸೀಸನ್ ಶುಕ್ರವಾರ ಅಂದರೆ ಮಾರ್ಚ್ 31ರಿಂದ ಆರಂಭವಾಗಲಿದೆ. ಈ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು 4 ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ಬಿಗ್ ನ್ಯೂಸ್ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಗುಜರಾತ್ ಮತ್ತು ಚೆನ್ನೈ ಮುಖಾಮುಖಿ 


ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್‍ನ 16ನೇ ಸೀಸನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಈ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭರ್ಜರಿ ಪೈಪೋಟಿ ನಿರೀಕ್ಷೆಯಿದೆ. ಗುಜರಾತ್ ತಂಡದ ನಾಯಕತ್ವವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಹಿಸಿದ್ದರೆ, ಚೆನ್ನೈ ತಂಡವನ್ನು ಅನುಭವಿ ವಿಕೆಟ್‌ಕೀಪರ್ ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದಾರೆ. ಇದೇ ವೇಳೆ ಮತ್ತೊಂದು ತಂಡದ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.


ಇದನ್ನೂ ಓದಿ: Team India: ಒಂದು ಪಂದ್ಯ ಆಡಿದ ಬಳಿಕ ಅಂತ್ಯವಾಯಿತು ಈ ಆಟಗಾರ ವೃತ್ತಿಜೀವನ! ನಿವೃತ್ತಿ ದಾರಿ ತೋರಿಸಿದ BCCI!


ಈ ತಂಡದ ನಾಯಕನ ಹಠಾತ್ ಬದಲಾವಣೆ!


ಸೀಸನ್ ಆರಂಭಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ಬಿಗ್ ನ್ಯೂಸ್ ಹೊರಬಿದ್ದಿದೆ. ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಬದಲಾಗಿದ್ದಾರೆ. ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈಗ ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಹೈದರಾಬಾದ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಇನ್ನೂ ಸಹ ಭಾರತಕ್ಕೆ ಆಗಮಿಸಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ತಂಡ ಭಾನುವಾರ ತಮ್ಮ ತವರು ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.


ದಕ್ಷಿಣ ಆಫ್ರಿಕಾದಲ್ಲಿರುವ ಮಾರ್ಕ್ರಾಮ್


ಏಡೆನ್ ಮಾರ್ಕ್ರಾಮ್ ಪ್ರಸ್ತುತ ನೆದರ್ಲ್ಯಾಂಡ್ಸ್ ವಿರುದ್ಧದ 2 ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಅವರು ಏಪ್ರಿಲ್ 3ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲು ದಕ್ಷಿಣ ಆಫ್ರಿಕಾಕ್ಕೆ ಈ ಸರಣಿಯು ಬಹಳ ಮುಖ್ಯವಾಗಿದೆ. ದಕ್ಷಿಣ ಆಫ್ರಿಕಾದ ಏಕದಿನ ಪಂದ್ಯಗಳು ಮಾರ್ಚ್ 31 ಮತ್ತು ಏಪ್ರಿಲ್ 2ರಂದು ನಡೆಯಲಿವೆ.


ಇದನ್ನೂ ಓದಿ: IND vs AUS: ಬಿಸಿಸಿಐಗೆ ಸ್ಪಷ್ಟವಾಯಿತು ಪಾಕ್’ನ ಈ ಕುತಂತ್ರ! ಅದೊಂದು ಪ್ಲಾನ್ ಮಾಡಿದ್ರೂ ಸಿಕ್ಕಿಬಿತ್ತು ವೈರಿರಾಷ್ಟ್ರ


ಭುವನೇಶ್ವರ್ ಕುಮಾರ್‍ಗೆ ತಂಡದ ಜವಾಬ್ದಾರಿ!


33ರ ಹರೆಯದ ಭುವನೇಶ್ವರ್ ಕುಮಾರ್ 2013ರಿಂದಲೇ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಅವರು 2019ರಲ್ಲಿ 6 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರೆ. ಈ ವೇಳೆ ತಂಡ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಋತುವಿನ 2ನೇ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಪ್ರಿಲ್ 7ರಂದು ಆಡಲಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.