Royal Challengers Bengaluru ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. RCB ವಿರುದ್ಧದ ಪಂದ್ಯಕ್ಕೂ ಮುನ್ನ ಮಾಜಿ ನಾಯಕ Rohit Sharma ಮತ್ತು ತಂಡದ ಮಾಲೀಕ Akash Ambani ಮುಂಬೈನ ಬೀದಿಗಳಲ್ಲಿ ಒಂದೇ ಕಾರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬುದು ಈ ವಿಡಿಯೋದಲ್ಲಿ ನೀವು ನೋಡಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ ಮನದಲ್ಲಿ ಮತ್ತೆ ಊಹಾಪೋಹಗಳು ಮನೆಮಾಡಿವೆ.


COMMERCIAL BREAK
SCROLL TO CONTINUE READING

ಒಟ್ಟಿಗೆ ವಾಂಖೆಡೆ ಸ್ಟೇಡಿಯಂ ತಲುಪಿದ ಆಕಾಶ್-ರೋಹಿತ್
Mumbai Indians ಮಾಲೀಕ ಆಕಾಶ್ ಅಂಬಾನಿ ಅವರ ಪಕ್ಕದಲ್ಲಿ ರೋಹಿತ್ ಶರ್ಮಾ ಕಾರಿನಲ್ಲಿ ಕುಳಿತಿರುವುದನ್ನು ನೀವು ನೋಡಬಹುದು. ಮಾಜಿ ಎಂಐ ಕ್ಯಾಪ್ಟನ್ ರೋಹಿತ್ ಮುಂದಿನ ಸೀಟಿನಲ್ಲಿದ್ದರೆ, ಆಕಾಶ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಕಾರಿನಲ್ಲಿ Wankhede Stadium ತಲುಪಿದ್ದಾರೆ ಎನ್ನಲಾಗುತ್ತಿದೆ. ಆದ್ರೂ ಕಾರು ಓಡಿಸುವವರ ಮುಖ ಸ್ಪಷ್ಟವಾಗಿ ಕಾಣಿಸದಿದ್ದರೂ ಅಭಿಮಾನಿಗಳ ಪ್ರತಿಕ್ರಿಯೆಯಿಂದ ಕಾರು ಚಲಾಯಿಸುತ್ತಿರುವವರು ಆಕಾಶ್ ಅಂಬಾನಿಯೇ ಎಂದು ಅನಿಸುತ್ತಿದೆ.


ಇದನ್ನೂ ಓದಿ-IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!


ರೋಹಿತ್ ಮತ್ತು ಆಕಾಶ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮುನ್ನ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಐ ಸೋಲಿನ ನಂತರ, ಇಬ್ಬರೂ ಡಗೌಟ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದರು. ಹೀಗಿರುವಾಗ ಆಕಾಶ್ ಮತ್ತು ರೋಹಿತ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಾಗ ಮತ್ತೆ ಮುಂಬೈ ಪಾಳಯದಲ್ಲಿ ಏನೋ ಮಹತ್ವದ ಘಟನೆ ನಡೆಯುತ್ತಿದೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ-IPL 2024: 'ಮ್ಯಾಚ್ ಪ್ರೇಷರ್ ನಲ್ಲಿರುವಾಗ ನೀವು...' ಯಜುವೇಂದ್ರ ಚಾಹಲ್ 150ನೇ ಪಂದ್ಯದ ಕುರಿತು ಪತ್ನಿ ಧನಶ್ರೀ ಹೇಳಿದ್ದೇನು? Watch Video


ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಐಪಿಎಲ್ 2024 ರ ಆರಂಭ ಅಷ್ಟೊಂದು ಸರಿಯಾಗಿಲ್ಲ ಎಂದು ಹೇಳಬಹುದು ಮೊದಲ ಮೂರು ಪಂದ್ಯಗಳಲ್ಲಿ ತಂಡ ಸೋಲನ್ನು ಅನುಭವಿಸಿದೆ. ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ತಂಡ ಮೊದಲ ಗೆಲುವು ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಗೆಲುವಿನ ಈ ನಾಗಾಲೋಟವನ್ನು ಮುಂದುವರಿಸುವುದೇ ತಂಡದ ಪ್ರಯತ್ನವಾಗಿರಲಿದೆ.


ವೈರಲ್ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ