IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!

Rashid Khan Record In IPL:  ಐಪಿಎಲ್ ನಲ್ಲಿ ನಿನ್ನೆ ನಡೆದ ಗುಜರಾತ್ ವಿರುದ್ಧ ರಾಜಸ್ಥಾನ ಪಂದ್ಯದಲ್ಲಿ ಗುಜರಾತ್ ತಂಡ ರಾಜಸ್ಥಾನ ತಂಡದ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಇದು ಈ ಋತುವಿನಲ್ಲಿ ರಾಜಸ್ಥಾನ ತಂಡದ ಮೊದಲ ಸೋಲು ಆಗಿದೆ.   

Written by - Nitin Tabib | Last Updated : Apr 11, 2024, 03:13 PM IST
  • ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ
  • 3 ವಿಕೆಟ್‌ ನಷ್ಟಕ್ಕೆ 196 ರನ್ ಗಳಿಸಿತ್ತು, ಈ ಗುರಿ ಬೆನ್ನಟ್ಟಿದ ಗುಜರಾತ್
  • ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿದೆ.
IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...! title=

Rashid Khan Record In IPL: ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ನಿನ್ನೆ ನಡೆದ RR vs GT ಪಂಧ್ಯದಲ್ಲಿ ಲೇಜೆಂಡ್ ಕ್ರಿಕೆಟ್ ಆಟಗಾರ ತಮ್ಮ ಬ್ಯಾಟ್ ಹಾಗೂ ಬೌಲಿಂಗ್ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ರಶೀದ್ ಬೌಲಿಂಗ್ ಮಾಡುವ ಮೂಲಕ ಒಂದು ವಿಕೆಟ್ ಪಡೆದರೆ, ಬ್ಯಾಟಿಂಗ್ ಮಾಡುವಾಗ ಅವರು 11 ಎಸೆತದಲ್ಲಿ 24 ರನ್ ಗಳಿಸಿದ್ದಾರೆ. ಈ 11 ಎಸೆತಗಳು ಗುಜರಾತ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ರಶೀದ್ ಅವರ ಆಲ್ ರೌಂಡ್ ಪ್ರದರ್ಶನವು ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿದೆ. ರಶೀದ್ ಐಪಿಎಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ರಶೀದ್ ಖಾನ್ ಐಪಿಎಲ್ ಇತಿಹಾಸದಲ್ಲಿ 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಗರಿಷ್ಠ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. 

ರಶೀದ್ 12ನೇ ಬಾರಿಗೆ ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಶೀದ್ ಹಲವು ದಿಗ್ಗಜರ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇದುವರೆಗೆ ಗಿಲ್ ಐಪಿಎಲ್‌ನಲ್ಲಿ 9 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ, ಆದರೆ ರಿತುರಾಜ್ ಗಾಯಕ್ವಾಡ್ 8 ಬಾರಿ ಗೆದ್ದಿದ್ದಾರೆ, ರೋಹಿತ್ ಶರ್ಮಾ 7 ಬಾರಿ ಗೆದ್ದಿದ್ದಾರೆ ಮತ್ತು ರಹಾನೆ 7 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರ ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ 7 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ರಶೀದ್ ವಯಸ್ಸು 25 ವರ್ಷ ಮತ್ತು ಗಿಲ್ ವಯಸ್ಸು 24 ವರ್ಷ. ಹೀಗಿರುವಾಗ ರಶೀದ್ ಅವರ ಈ ದಾಖಲೆಯನ್ನು ಮುರಿಯುವ ಅವಕಾಶ ಗಿಲ್ ಪಾಲಾಗುವ ಸಾಧ್ಯತೆ ಇದೆ.

ಐಪಿಎಲ್‌ನಲ್ಲಿ 25 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ, 
12- ರಶೀದ್ ಖಾನ್
9-ಶುಬ್ಮನ್ ಗಿಲ್
8- ರಿತುರಾಜ್ ಗಾಯಕ್ವಾಡ್
7 - ರೋಹಿತ್ ಶರ್ಮಾ
7- ಅಜಿಂಕ್ಯ ರಹಾನೆ
7- ಸಂಜು ಸ್ಯಾಮ್ಸನ್

ಇದನ್ನೂ ಓದಿ-IPL 2024: 'ಮ್ಯಾಚ್ ಪ್ರೇಷರ್ ನಲ್ಲಿರುವಾಗ ನೀವು...' ಯಜುವೇಂದ್ರ ಚಾಹಲ್ 150ನೇ ಪಂದ್ಯದ ಕುರಿತು ಪತ್ನಿ ಧನಶ್ರೀ ಹೇಳಿದ್ದೇನು? Watch Video

ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 196 ರನ್ ಗಳಿಸಿತ್ತು, ಈ ಗುರಿ ಬೆನ್ನಟ್ಟಿದ ಗುಜರಾತ್ ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಇದು ಈ  ಋತುವಿನಲ್ಲಿ ರಾಜಸ್ಥಾನ ತಂಡದ ಮೊದಲ ಸೋಲಾಗಿದೆ. ಇದೇ ವೇಳೆ, ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಕೊನೆಯ ಎಸೆತದಲ್ಲಿ ಗುರಿ ಸಾಧಿಸಿದ ದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2022ರಲ್ಲಿ ಹೈದರಾಬಾದ್ ವಿರುದ್ಧ ಗುಜರಾತ್ 196 ರನ್ ಗಳಿಸಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ-Free IPL 2024 ತೋರಿಸಿಯೂ ಎಷ್ಟು ಕೋಟಿ ಹಣ ಸಂಪಾದಿಸಿದ್ದಾರೆ ಮುಕೇಶ್ ಅಂಬಾನಿ ಗೊತ್ತಾ? ಇಲ್ಲಿದೆ ಅದರ ಲೆಕ್ಕಾಚಾರ!

ಕೊನೆಯ ಎಸೆತದಲ್ಲಿ GT ತಂಡದ ಅತ್ಯಂತ ಯಶಸ್ವಿ ರನ್ ಚೇಸ್
ರಾಜಸ್ಥಾನ ರಾಯಲ್ಸ್ ವಿರುದ್ಧ 2024 ರಲ್ಲಿ 197 ರನ್ ಚೆಸ್ (ಜೈಪುರ್)
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 2022 ರಲ್ಲಿ 196 ರನ್ ಚೆಸ್ (ವಾಂಖೇಡೆ, ಮುಂಬೈ)
ಪಂಜಾಬ್ ವಿರುದ್ಧ 2022 ರಲ್ಲಿ 190 ರನ್ ಚೆಸ್ (ಬ್ರಬೋರ್ನ್)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News