RR vs GJ IPL 2024: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಾಲ್ ಅವರ ಮುಂದೆ ನಾ ನಾ ಎಂದು ಹೇಳಿಕೊಳ್ಳುವ ಬ್ಯಾಟ್ಸ್ ಮನ್ ಗಳು ತಲೆಬಾಗಿದ್ದಾರೆ. ಹೌದು, ಚಹಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದು ಪ್ರಸ್ತುತ ಪರ್ಪಲ್ ಕ್ಯಾಪ್ ಅವರ ಬಳಿಯೇ ಇದೆ. ಐಪಿಎಲ್ 2024 ರಲ್ಲಿ, ಅವರು ಗುಜರಾತ್ ವಿರುದ್ಧ ತಮ್ಮ 150 ನೇ ಪಂದ್ಯವನ್ನು ಆಡುತ್ತಿದ್ದಾರೆ. ಇದಕ್ಕೆ ಪತ್ನಿ ಧನಶ್ರೀ ವರ್ಮಾ ವಿಡಿಯೋ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯುಜುವೇಂದ್ರ ಚಹಾಲ್ ಐಪಿಎಲ್‌ನಲ್ಲಿ 200 ವಿಕೆಟ್‌ಗಳ ಸಮೀಪದಲ್ಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಯಜುವೇಂದ್ರ ಬಗ್ಗೆ ಹೆಮ್ಮೆ ಇದೆ ಎಂದ ಪತ್ನಿ ಧನಶ್ರೀ
ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾತನಾಡಿರುವ ಧನಶ್ರೀ, "ಯುಜಿ, ಇಂದು ನಿಮ್ಮ 150ನೇ ಪಂದ್ಯಕ್ಕೆ ನನ್ನ ಅಭಿನಂದನೆಗಳು. ನಾನು ಮೊದಲೇ ಹೇಳಿದ್ದೇನೆ ಮತ್ತು ಮತ್ತೊಮ್ಮೆ ಹೇಳುತ್ತಿದ್ದೇನೆ, ನಿಮಗೆ ಅಭಿನಂದನೆಗಳು, ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಕಳೆದ ಕೆಲ ವರ್ಷಗಳಲ್ಲಿ ನಿಮ್ಮ ಹಳೆಯ ತಂಡಗಳಿಗೆ ಮತ್ತು ಇದೀಗ ರಾಜಸ್ಥಾನ ತಂಡಕ್ಕೆ ನೀವು ನೀಡುತ್ತಿರುವ ಕೊಡುಗೆಯ ರೀತಿ ಅದ್ಭುತವಾಗಿದೆ. ನಿಮ್ಮ ಆಟವನ್ನು ನೀವು ಆಡುವ ರೀತಿ ನಮಗೆ ಹೆಮ್ಮೆ ತಂದಿದೆ. ನೀವು ಯಾವಾಗಲೂ ಸ್ಟೈಲ್ ನಲ್ಲಿ ಹಿಂತಿರುಗುತ್ತೀರಿ, ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ. ಪಂದ್ಯವು ಒತ್ತಡದಲ್ಲಿದ್ದಾಗ, ನೀವು ವಿಕೆಟ್ ಪಡೆಯುವ ಬೌಲರ್. ನಾವೆಲ್ಲರೂ ನಿಮ್ಮನ್ನು ಸದಾ ಬೆಂಬಲಿಸುತ್ತೇವೆ. ನಾನು ನಿಮ್ಮ ದೊಡ್ಡ ಚೀರ್ಲೀಡರ್. ನಾನು ನಿಮಗೆ ಯಾವಾಗಲೂ ಶೇ. 100 ರಷ್ಟು ಬೆಂಬಲ ನೀಡುತ್ತೇನೆ. ಮುಂದುವರಿಯಿರಿ ಮತ್ತು ಇಂದಿನ ಪಂದ್ಯವನ್ನು ಆನಂದಿಸಿ. 150 ನೇ ಐಪಿಎಲ್ ಪಂದ್ಯ, ಇದು ದೊಡ್ಡ ವಿಷಯ, ಆನಂದಿಸಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ-Free IPL 2024 ತೋರಿಸಿಯೂ ಎಷ್ಟು ಕೋಟಿ ಹಣ ಸಂಪಾದಿಸಿದ್ದಾರೆ ಮುಕೇಶ್ ಅಂಬಾನಿ ಗೊತ್ತಾ? ಇಲ್ಲಿದೆ ಅದರ ಲೆಕ್ಕಾಚಾರ!
200 ವಿಕೆಟ್ ಸಮೀಪದಲ್ಲಿ ಚಹಲ್
ಯುಜುವೇಂದ್ರ ಚಹಾಲ್ ಇದುವರೆಗೆ 149 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 195 ವಿಕೆಟ್ ಪಡೆದಿದ್ದಾರೆ. ಒಂದು ವೇಳೆ ಚಹಾಲ್ ಗುಜರಾತ್ ವಿರುದ್ಧ 'ಪಂಜಾ' ಅರ್ಥಾತ್ ಐದು ವಿಕೆಟ್ ಕಬಳಿಸಿದರೆ, ಅವರು ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂದೆನೆಸಿಕೊಳ್ಳಲಿದ್ದಾರೆ. ಚಾಹಲ್ ಈ ಬಾರಿಯ ಐಪಿಎಲ್ ನಲ್ಲಿ ಆಡಿದ ಒಟ್ಟು 4 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಚಹಲ್ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ-IPL 2024: ಮಗನನ್ನು ಕ್ರಿಕೆಟ್ ಆಟಗಾರನನ್ನಾಗಿಸಲು ನೌಕರಿ ತೊರೆದ ತಂದೆ, ವಿರಾಟ್ ಈತನ ಆದರ್ಶ!
ರಾಜಸ್ಥಾನದ ವಿಜಯ ರಥಯಾತ್ರೆ ಮುಂದುವರೆದಿದೆ
ಜೈಪುರದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಗುಜರಾತ್ ಉತ್ತಮ ಆರಂಭವನ್ನು ಪಡೆದುಕೊಂಡಿತು, ಆದರೆ ಸಂಜು ಸ್ಯಾಮ್ಸನ್ ಮತ್ತು ಯುವ ಆಟಗಾರ ರಯಾನ್ ಪರಾಗ್ ತಮ್ಮ ಬ್ಯಾಟಿಂಗ್‌ನಿಂದ ಗುಜರಾತ್ ಬೌಲರ್ ಗಳಿಗೆ ಸಾಕಷ್ಟು ದಂಡಿಸಿದ್ದಾರೆ. ಈಗ ರಾಜಸ್ಥಾನ ತಂಡ ಬೌಲಿಂಗ್ ಮೂಲಕ ಕುಣಿಕೆ ಬಿಗಿಗೊಳಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
To Yuzi on his 150th IPL game, with love from his biggest supporter. 💗 pic.twitter.com/rVyfsD7eYN
— Rajasthan Royals (@rajasthanroyals) April 10, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ