IPL 2024 Fan Murdered On Rohit Sharma Dismissal: ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಐಪಿಎಲ್ 2024ರ ಕುರಿತು ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ. ಈ ಲೀಗ್ ನ ಪ್ರತಿಯೊಂದು ಪಂದ್ಯವನ್ನು ಅಭಿಮಾನಿಗಳು ಹುಚ್ಚೆದ್ದು ವೇಕ್ಷೀಸುತ್ತಿದ್ದಾರೆ. ಇದರಲ್ಲಿ ನಾವು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳನ್ನು ವೀಕ್ಷಿಸಬಹುದು, ಈ ತಂಡಗಳ ಪಂದ್ಯಗಳಿಗೆ ತುಂಬಾ ಅಭಿಮಾನಿಗಳಿದ್ದಾರೆ. ಆದರೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಹುಚ್ಚು ಅಭಿಮಾನ ಕ್ರಿಕೆಟ್ ಪ್ರೇಮಿಯೊಬ್ಬನ ಸಾವಿಗೆ ಕಾರಣವಾಗುವ ಹಂತಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಔಟಾದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಕ್ಕೆ ಇಬ್ಬರು ಮುಂಬೈ ಅಭಿಮಾನಿಗಳು 65 ವರ್ಷದ ನೆರೆಯ ವ್ಯಕ್ತಿಯನ್ನು ಥಳಿಸಿದ್ದಾರೆ. ಈ ಥಳಿತದಲ್ಲಿ ಆ ವ್ಯಕ್ತಿಯ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆ.


ಸಂಪೂರ್ಣ ವಿಷಯ ಏನು
ಈ ಕುರಿತು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬುಧವಾರ ಬಲ್ವಂತ್ ಝಾಂಜೆ ಮತ್ತು ಸಾಗರ್ ಝಾಂಜೆ ಬೀದಿಯಲ್ಲಿರುವ ಮನೆಯೊಂದರಲ್ಲಿ ಇತರರೊಂದಿಗೆ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎನ್ನಲಾಗಿದೆ. ಅಂದು ಮುಂಬೈ ಇಂಡಿಯನ್ಸ್ ನ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿತ್ತು. ಇಬ್ಬರೂ ಮುಂಬೈ ಇಂಡಿಯನ್ಸ್‌ನ ಕಟ್ಟಾ ಅಭಿಮಾನಿಗಳಾಗಿದ್ದರು, ಆದರೆ ಹೈದರಾಬಾದ್ ಕಲೆ ಹಾಕಿದ ರನ್ ಗಳಿಂದ ಅವರು ತೀವ್ರ ಆಕ್ರೋಶಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ ರನ್ ಚೇಸಿಂಗ್ ವೇಳೆ ರೋಹಿತ್ ಶರ್ಮಾ ಔಟಾದ ತಕ್ಷಣ ಬಂಡೋಪಂತ ಟಿಬಿಲೆ ಕೂಡ ಅಲ್ಲಿದ್ದರು.


ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ 12 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗುವ ಮುನ್ನ ವೇಗದ ಇನ್ನಿಂಗ್ಸ್ ಆಡಿದ್ದರು. ರೋಹಿತ್ ವಿಕೆಟ್ ಪತನದ ನಂತರ ಬಂಡೋಪಂತ ಟಿಬಿಲೆ ಝಾಂಜೆ ಸಹೋದರರನ್ನು ತಮಾಷೆಯ ರೀತಿಯಲ್ಲಿ ಚುಡಾಯಿಸುತ್ತಾ, ಓಹ್, ರೋಹಿತ್ ಔಟಾಗಿದ್ದಾನೆ, ಈಗ ಮುಂಬೈ ಸೋಲುತ್ತದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಬಲವಂತ ಮಹಾದೇವ ಝಾಂಜೆ ಮತ್ತು ಸಾಗರ್ ಸದಾಶಿವ ಝಂಜೆ ಕೋಪಗೊಂಡು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.


ಸಾಗರ್ ಝಾಂಜೆ ಮತ್ತು ಬಲವಂತ ಝಾಂಜೆ ಆಕ್ರೋಶಗೊಂಡು ಬಂಡೋಪಂತ ಬಾಪು ಟಿಬಿಲೆ  ಅವರನ್ನು ಮರದ ಹಲಗೆಗಳು ಮತ್ತು ಕೋಲುಗಳಿಂದ ವಿಪರೀತ ಹೊಡೆದಿದ್ದಾರೆ.  ಈ ವೇಳೆ ಬಂಡೋಪಂತ ಟಿಬಿಲೆ ಅವರ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗತೊಡಗಿದೆ. ತೀವ್ರವಾಗಿ ಗಾಯಗೊಂಡ ಬಂಡೋಪಂತ ಟಿಬಿಲೆ ಅವರನ್ನು ಕೂಡಲೇ ಸಿಪಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಬಿಲ್ ಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಥಳಿಸಿದ ಘಟನೆ ಪೊಲೀಸರಿಗೂ ಅಚ್ಚರಿ ಮೂಡಿಸಿದೆ.


ಇದನ್ನೂ ಓದಿ-IPL 2024: ಪಂದ್ಯದ ಮಧ್ಯೆಯೇ ಇದ್ದಕ್ಕಿದ್ದಂತೆ ಎರಡೂ ಕಿವಿಗಳನ್ನು ಹಿಡಿದುಕೊಂಡ Virat Kohli? ಕಾರಣ ಕೇಳಿ ನೀವು ನಗುವಿರಿ!


ಈ ಕುರಿತು ಪೊಲೀಸರು ಹೇಳಿದ್ದೇನು?
ಝಾಂಜೆ ಮತ್ತು ಅವರ ಸೋದರಳಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಆಘಾತಕಾರಿ ಘಟನೆಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕ್ರಿಕೆಟ್‌ಗೆ ಕೇವಲ ಒಂದು ಆಟವಾಗಿ ಪ್ರಾಮುಖ್ಯತೆ ನೀಡುವ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ-IPL 2024: MI vs RCB ಪಂದ್ಯದ ಟಾಸ್ ವೇಳೆ ಕನ್ನಡಿಗ ರೇಫರೀಯೇ ಬೆಂಗಳೂರು ತಂಡದ ಸೋಲಿಗೆ ಕಾರಣರಾದ್ರಾ?


ಈ ಕುರಿತು ಮಾತನಾಡಿರುವ ಕರವೇರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಿಶೋರ್ ಶಿಂಧೆ, ನಾವು ಯುವಕರ ಬಗ್ಗೆ ಮಾತನಾಡುತ್ತಿಲ್ಲ. ಕ್ರಿಕೆಟ್ ಪಂದ್ಯದ ವಿಚಾರವಾಗಿ ಇಬ್ಬರು ವೃದ್ಧರು ಜಗಳವಾಡಿದ ಕಾರಣ, ಈ ದಾರುಣ ಘಟನೆ ಸಂಭವಿಸಿದೆ ಎಂದಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ