IPL 2024: MI vs RCB ಪಂದ್ಯದ ಟಾಸ್ ವೇಳೆ ಕನ್ನಡಿಗ ರೇಫರೀಯೇ ಬೆಂಗಳೂರು ತಂಡದ ಸೋಲಿಗೆ ಕಾರಣರಾದ್ರಾ?

IPL 2024 MI vs RCB: ಐಪಿಎಲ್ ನಲ್ಲಿ ನಿನ್ನೆ ನಡೆದ ಮುಂಬೈ ವಿರುದ್ಧ ಬೆಂಗಳೂರು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ.   

Written by - Nitin Tabib | Last Updated : Apr 12, 2024, 02:34 PM IST
  • ಈ ಐಪಿಎಲ್ ಋತುವಿನಲ್ಲಿ ಆಡಿದ 6 ಪಂದ್ಯಗಳಲ್ಲಿ ಇದು RCB ಯ 5 ನೇ ಸೋಲು ಇದಾಗಿದೆ.
  • ಈ ಸೋಲಿನ ಬಳಿಕ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
  • ಆದರೆ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಮುಂಬೈ ಮತ್ತೆ ಗೆಲುವಿನ ಹಾದಿಗೆ ಮರಳಿದೆ.
IPL 2024: MI vs RCB ಪಂದ್ಯದ ಟಾಸ್ ವೇಳೆ ಕನ್ನಡಿಗ ರೇಫರೀಯೇ ಬೆಂಗಳೂರು ತಂಡದ ಸೋಲಿಗೆ ಕಾರಣರಾದ್ರಾ? title=

Indian Premier League 2024 Rigging During Toss Viral Video: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ನಡುವೆ ನಿನ್ನೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ IPL ಋತುವಿನ 25 ನೇ ಪಂದ್ಯ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ, ಮ್ಯಾಚ್ ರೆಫರಿ ಟಾಸ್ ಸಮಯದಲ್ಲಿ ರಿಗ್ಗಿಂಗ್ ಮಾಡುವುದನ್ನು ಗಮನಿಸಲಾಗಿದೆ. ಅದರ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೇಗವಾಗಿ ವೈರಲ್ ಆಗುತ್ತಿದೆ.

ಮುಂಬೈ vs ಬೆಂಗಳೂರು ಪಂದ್ಯದಲ್ಲಿ ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫರಿ ಪಾತ್ರದಲ್ಲಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಹೀಗಾಗಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ನಾಣ್ಯವನ್ನು ಟಾಸ್ ಮಾಡಿದ ನಂತರ ಅದನ್ನು ತೆಗೆದುಕೊಳ್ಳಲು ರೆಫರಿ ಹೋದಾಗ, ಅವರು ಕಾಯಿನ್ ತಿರುಗಿಸುವುದನ್ನು ವೈರಲ್ ವೀಡಿಯೊದಲ್ಲಿ ನೀವು ನೋಡಬಹುದು.ಈ ವೈರಲ್ ವೀಡಿಯೊಗೆ ಅಭಿಮಾನಿಗಳು ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಂಗತಿ ಏನೇ ಇದ್ದರೂ, ಜೀ ಕನ್ನಡ ನ್ಯೂಸ್, ಈ ರಿಗ್ಗಿಂಗ್ ಅನ್ನು ಖಚಿತಪಡಿಸುವುದಿಲ್ಲ. 

ಮುಂಬೈ ತಂಡದ ಬಿರುಗಾಳಿಯ ಬ್ಯಾಟಿಂಗ್ ಗೆ ಆರ್ಸಿಬಿ ತತ್ತರ
ಪಂದ್ಯದ ಕುರಿತು ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಫಾಫ್ ಡು ಪ್ಲೆಸಿಸ್ (61), ರಜತ್ ಪಾಟಿದಾರ್ (50) ಮತ್ತು ದಿನೇಶ್ ಕಾರ್ತಿಕ್ (53 ರನ್, 23 ಎಸೆತ) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ.

ಇದನ್ನೂ ಓದಿ-MI vs RCB: ಇವಳೇ ನೋಡಿ IPL 2024ರ ಮೊಟ್ಟಮೊದಲ Mystery Girl, ಕ್ಯೂಟ್ ನೆಸ್ ಗೆ ಅಭಿಮಾನಿಗಳು ಫಿದಾ!

ಆರ್‌ಸಿಬಿ ನೀಡಿದ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ, ತಂಡದ ಆಟಗಾರರು ಬಿರುಗಾಳಿಯ ಬ್ಯಾಟಿಂಗ್ ಮಾಡುತ್ತಾ ಕೇವಲ 15.3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿದೆ. ಮುಂಬೈ ಪರ ಆರಂಭಿಕ ಇಶಾನ್ ಕಿಶನ್ 69 ರನ್ ಹಾಗೂ ರೋಹಿತ್ ಶರ್ಮಾ 38 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದ್ದಾರೆ. ಇದಲ್ಲದೇ ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 52 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ನಂತರ ಬಂದ ಹಾರ್ದಿಕ್ ಪಾಂಡ್ಯ 21 ಮತ್ತು ತಿಲಕ್ ವರ್ಮಾ 16 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಇದನ್ನೂ ಓದಿ-IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು'

ಈ ಐಪಿಎಲ್ ಋತುವಿನಲ್ಲಿ ಆಡಿದ 6 ಪಂದ್ಯಗಳಲ್ಲಿ ಇದು RCB ಯ 5 ನೇ ಸೋಲು ಇದಾಗಿದೆ.  ಈ ಸೋಲಿನ ಬಳಿಕ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಮುಂಬೈ ಮತ್ತೆ ಗೆಲುವಿನ ಹಾದಿಗೆ ಮರಳಿದೆ. MI ಸತತ ಎರಡನೇ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಐದು ಪಂದ್ಯಗಳಲ್ಲಿ 2 ಗೆಲುವು ಹಾಗೂ 3 ಸೋಲಿನೊಂದಿಗೆ 4 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತಲುಪಿದೆ.

ಇಲ್ಲಿ ನೋಡಿ ಆ ವೈರಲ್ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News