Indian Premier League 2024: ಐಪಿಎಲ್ 2024 ರಲ್ಲಿ, ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sun Raisers Hyderabad) ನಡುವೆ ಮಹತ್ವದ ಪಂದ್ಯ ನಡೆಯುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್‌ನ ತವರು ಮೈದಾನವಾದ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ, ಆದರೆ ಕ್ರೀಡಾಂಗಣವು ಹಳದಿ ಆರ್ಮಿ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ (IPL News In Kannada).


COMMERCIAL BREAK
SCROLL TO CONTINUE READING

ಈ ಐಪಿಎಲ್ ನ ಯಾವುದೇ ಒಂದು ಋತುವಿನಲ್ಲಿ ಇದು ಮೊದಲ ಬಾರಿಗೆ ಕಂಡುಬರುತ್ತಿದೆ, ಯಾವುದೆ ಒಂದು ತವರಿನ ತಂಡಕ್ಕಿಂತ ಇತರ ತಂಡಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ ಮತ್ತು ಇದಕ್ಕೆ ದೊಡ್ಡ ಕಾರಣವೆಂದರೆ ಮಹೇಂದ್ರ ಸಿಂಗ್ ಧೋನಿ (MS Dhoni). ಮಹೇಂದ್ರ ಸಿಂಗ್ ಧೋನಿಯನ್ನು ನೋಡಲು ಹೈದರಾಬಾದ್ ಸ್ಟೇಡಿಯಂನ ಹೊರಗೆ ಭಾರೀ ಜನಸಂದಣಿ ಕಂಡುಬಂದಿದ್ದು, ಈ ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ (IPL 2024 Viral Video).


ಹೈದರಾಬಾದ್ ಸ್ಟೇಡಿಯಂನ ಹೊರಗೆ ಭಾರಿ ಜನಜಾತ್ರೆ (Rajeev Gandhi International Stadium)
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದ ಗೇಟ್‌ನ ಹೊರಗೆ ಅಭಿಮಾನಿಗಳ ದಂಡೆ ಹರಿದುಬಂದಿದ್ದು, ಗುಂಪು ನಿಯಂತ್ರಣ ತಪ್ಪಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಂಎಸ್ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ತಮ್ಮ ಕೈಯಲ್ಲಿ ಧೋನಿ ಹೆಸರಿನ ಪೋಸ್ಟರ್ ಮತ್ತು ಕಟೌಟ್‌ಗಳನ್ನು ಹಿಡಿದಿರುವುದನ್ನು ನೀವು ನೋಡಬಹುದು. ಅಭಿಮಾನಿಗಳು ಧೋನಿ-ಧೋನಿ ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದಾರೆ(ms dhoni crazy fans went uncontroled out side stadium in hyderabad watch video).


ಇದನ್ನೂ ಓದಿ-IPL 2024: ಸತತ ಸೋಲಿನ ಬಳಿಕ ಹತಾಶರಾದ Hardik Pandya ತಲುಪಿದ್ದೆಲ್ಲಿ ಗೊತ್ತಾ?


ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಂದ್ಯಕ್ಕೂ ಮುನ್ನ ಎಂಎಸ್ ಧೋನಿಯನ್ನು ನೋಡಲು ಅಭಿಮಾನಿಗಳು ತಮ್ಮ ಕ್ರೇಜ್ ತೋರಿಸುತ್ತಿದ್ದಾರೆ. ಅಭಿಮಾನಿಗಳು ತಮ್ಮ ಕೈಯಲ್ಲಿ ಹಳದಿ ಜೆರ್ಸಿ ಮತ್ತು ಪೋಸ್ಟರ್‌ಗಳೊಂದಿಗೆ ಧೋನಿಗಾಗಿ ಜೈಕಾರ ಹಾಕುತ್ತಿದ್ದಾರೆ.


ಇದನ್ನೂ ಓದಿ-IPL 2024: Shah Rukh Khan ಕಾರಣ KKR ಸತತ ಪಂದ್ಯಗಳನ್ನು ಗೆಲ್ಲುತ್ತಿದೆಯೇ? ಇಲ್ಲಿದೆ ಬಿಗ್ ಅಪ್ಡೇಟ್!


ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ 166 ರನ್‌ಗಳ ಗುರಿ ನೀಡಿದ ಸಿಎಸ್ಕೆ (CSK vs SRH 2024 Match)
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಬ್ಯಾಟಿಂಗ್ ನಲ್ಲಿ ವಿಶೇಷ ಪ್ರದರ್ಶನ ತೋರಲು ವಿಫಲವಾಗಿದೆ. ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಇಬ್ಬರೂ ಬೇಗ ಪೆವಿಲಿಯನ್‌ಗೆ ಮರಳಿದ್ದಾರೆ. ರಚಿನ್ ರವೀಂದ್ರ (Rachin Ravindra) 9 ಎಸೆತಗಳಲ್ಲಿ 12 ರನ್ ಮತ್ತು ರುತುರಾಜ್ ಗಾಯಕ್ವಾಡ್ (Ruturaj Gaikwad) 21 ಎಸೆತಗಳಲ್ಲಿ 26 ರನ್ ಗಳಿದಿದ್ದಾರೆ. ಅಜಿಂಕ್ಯ ರಹಾನೆ 30 ಎಸೆತಗಳಲ್ಲಿ 35 ರನ್ ಗಳಿಸಿದ್ದಾರೆ, ಶಿವಂ ದುಬೆ (Shivam Dube) 24 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 45 ರನ್ ಗಳಿಸಿ ತಂಡದ ಪರ ಗರಿಷ್ಠ ಇನ್ನಿಂಗ್ಸ್ ಆಡಿದ್ದಾರೆ. ಆದರೆ ರವೀಂದ್ರ ಜಡೇಜಾ 23 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಗಿದೆ.


ವೈರಲ್ ಆಗುತ್ತಿರುವ ವಿಡಿಯೋಗಳು ಇಲ್ಲಿವೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ