Indian Premier League 2025: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದ್ದು, ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಕನ್ನಡಿಗನ ಎಂಟ್ರಿ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್​​​ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್​ಗಳ ಗೆಲುವು ಸಾಧಿಸಿತ್ತು.


COMMERCIAL BREAK
SCROLL TO CONTINUE READING

ಮೈಸೂರು ತಂಡದ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ ಕರುಣ್​ ನಾಯರ್​​ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್​ ಬಾರಿಸಿದರು. ಭರ್ಜರಿ ಶತಕ ಸಿಡಿಸಿ ಮಿಂಚಿದ ಕರುಣ್‌ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು. 


ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಸ್ಟಾರ್‌ ಬೌಲರ್‌!


2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಮೆಗಾ ಆಕ್ಷನ್​​ ನಡೆಯಲಿರುವ ಹೊತ್ತಿನಲ್ಲೇ ಕನ್ನಡಿಗ ಕರುಣ್​​ ನಾಯರ್​ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಕರುಣ್​ ನಾಯರ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ.


ಅಂದಹಾಗೆ ಕರುಣ್​ ನಾಯರ್​​ ಹೋಮ್​ ಗ್ರೌಂಡ್​​​ ಚಿನ್ನಸ್ವಾಮಿ ಸ್ಟೇಡಿಯಂ. ಬೆಂಗಳೂರು ಸ್ಥಳೀಯರು ಆಗಿರುವ ಕರುಣ್ ಟಾಪ್​ ಆರ್ಡರ್​ ಬ್ಯಾಟ್ಸಮನ್‌ ಆಗಿದ್ದಾರೆ. ತಾವು ಬಿಗ್​ ಹಿಟ್ಟರ್​ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರುವ ಹುಲಿಯಾಗಿರೋ ಕರುಣ್​ ಅವರನ್ನು ಆರ್​​ಸಿಬಿ ಕರೆ ತಂದರೆ ಘರ್ಜಿಸೋದು ೧೦೦% ಗ್ಯಾರಂಟಿ. ಫಾಫ್ ಡು ಪ್ಲೆಸ್ಸಿಸ್ ಸ್ಥಾನಕ್ಕೆ ಕರುಣ್ ಒಳ್ಳೆಯ ಆಯ್ಕೆ ಅನ್ನುವುದು ಆರ್​​ಸಿಬಿ ಪ್ಲಾನ್​​.


ಇದನ್ನೂ ಓದಿ: IPL 2025: ಐಪಿಎಲ್‌ ನಲ್ಲಿ ಭಾರಿ ಬದಲಾಣೆ.. ಶೀಘ್ರವೇ ಪ್ರಮುಖ ನಿರ್ಧಾರ ಕೈಗೊಳ್ಳಲು ಮುಂದಾದ ಬಿಸಿಸಿಐ


ಈ ಹಿಂದೆ ನನಗೆ 30 ವರ್ಷ, ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ-20 ನಂತರ ನಾನು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರ ರಣಜಿ ಟ್ರೋಫಿ ಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್​ನಲ್ಲೂ ಅತೀಹೆಚ್ಚು ರನ್​​ ಗಳಿಸಿದ್ದೆ. ಆದರೂ ನನಗೆ ಐಪಿಎಲ್​​ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್​​ ಕಣ್ಣೀರಿಟ್ಟಿದ್ದರು. ಇದೀಗ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಯಾವ ನಿರ್ಧಾರ ಕೈಗೊಳ್ಳುತ್ತೆ? ಕರುಣ್‌ ಅವರಿಗೆ ಅವಕಾಶ ನೀಡುತ್ತಾ ಅನ್ನೋ ಪ್ರಶ್ನೆ ಮೂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.