Rohit Sharma and Hardik Pandya Rift: ಐಪಿಎಲ್ 2024 ರ ಸಮಯದಲ್ಲಿ, ಮುಂಬೈ ಇಂಡಿಯನ್ಸ್'ನೊಳಗಿನ ಪರಸ್ಪರ ಭಿನ್ನಾಭಿಪ್ರಾಯದ ಸುದ್ದಿಯು ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು. ಎಂಐ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡಿದಾಗ ಈ ಊಹಾಪೋಹ ಪ್ರಾರಂಭವಾಯಿತು.
ತಂಡದೊಳಗಿನ ಅನೇಕ ಆಟಗಾರರು ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲದೆ, ಹಾರ್ದಿಕ್ ಹೋದಲ್ಲೆಲ್ಲಾ ತೀವ್ರ ಟ್ರೋಲ್ʼಗೆ ಗುರಿಯಾಗಿದ್ದರು. ಇದೀಗ ಕ್ರೀಡಾ ಪತ್ರಕರ್ತರೊಬ್ಬರು ರೋಹಿತ್ ಮತ್ತು ಹಾರ್ದಿಕ್ ನಡುವಿನ ಸಂಬಂಧವನ್ನು ಸುಧಾರಿಸುವಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಪಾತ್ರವೂ ದೊಡ್ಡದಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ನೆಟ್ʼನಲ್ಲಿ ಅಭ್ಯಾಸದ ಮೊದಲ ದಿನದಂದು ಪರಸ್ಪರ ಮಾತನಾಡದೆ ಇದ್ದರು. ಇದು 2024 ರ T20 ವಿಶ್ವಕಪ್ ಸಂದರ್ಭದಲ್ಲಿ ನಡೆದ ಘಟನೆ. ಆದರೆ ಅಭ್ಯಾಸದ ಎರಡನೇ ದಿನ ರೋಹಿತ್ ಮತ್ತು ಹಾರ್ದಿಕ್ ಒಂದು ಮೂಲೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿತು. ಅವರ ಮಾತುಕತೆ ಬಹಳ ಹೊತ್ತು ಮುಂದುವರೆದಿತ್ತು. ಅದರ ನಂತರ, ಇಬ್ಬರೂ ಒಟ್ಟಿಗೆ ಅಭ್ಯಾಸ ಮಾಡಿದರು ಎಂದು ಆ ಪತ್ರಕರ್ತ ಹೇಳಿಕೆ ನೀಡಿದ್ದಾರೆ.
ರಾಹುಲ್ ದ್ರಾವಿಡ್-ವಿರಾಟ್ ಕೊಹ್ಲಿಯ ವಿಶೇಷ ಕೊಡುಗೆ
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರನ್ನು ಒಟ್ಟಿಗೆ ಸೇರಿಸುವಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆ ಪತ್ರಕರ್ತ ಹೇಳಿದ್ದಾರೆ.
ಇದನ್ನೂ ಓದಿ: ಒಂದೇ ಓವರ್ʼನಲ್ಲಿ 6 ಸಿಕ್ಸರ್! 23 ವರ್ಷದ ದಾಂಡಿಗನ ಅಬ್ಬರಕ್ಕೆ ಕ್ರಿಕೆಟ್ ಲೋಕವೇ ಫಿದಾ
ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಭಿನ್ನಾಭಿಪ್ರಾಯಗಳ ಊಹಾಪೋಹಗಳು ಇದ್ದಿರಬಹುದು. ಆದರೆ ಈಗ ಇಬ್ಬರೂ ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್ʼನಿಂದ ಬಿಡುಗಡೆಯಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.