ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ರೂ ವಿರಾಟ್‌ʼಗೆ ತಪ್ಪುತ್ತಿಲ್ಲ ಕಾಟ: ಕೊಹ್ಲಿ ಹಿಂದೆ ʼಇವರುʼ ಬಿದ್ದಿರೋದ್ಯಾಕೆ? ಯಾರವರು?

Virat Kohli: ಲಂಡನ್‌ʼನಲ್ಲಿ ವಿರಾಟ್​ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ.

Edited by - Bhavishya Shetty | Last Updated : Aug 31, 2024, 08:11 PM IST
    • ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ ಲೋಕದ ಅಧಿಪತಿ
    • ಲಂಡನ್‌ʼನಲ್ಲಿ ತಮ್ಮ ಕುಟಂಬದ ಜೊತೆ ನೆಲೆಸಲು ನಿರ್ಧರಿಸಿದ್ದಾರೆ
    • ಈ ಮಾತುಗಳಿಗೆ ತಕ್ಕಂತೆ ಸದ್ಯದ ಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ
ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ರೂ ವಿರಾಟ್‌ʼಗೆ ತಪ್ಪುತ್ತಿಲ್ಲ ಕಾಟ: ಕೊಹ್ಲಿ ಹಿಂದೆ ʼಇವರುʼ ಬಿದ್ದಿರೋದ್ಯಾಕೆ? ಯಾರವರು? title=
File Photo

Virat Kohli: ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ ಲೋಕದ ಅಧಿಪತಿ ಎಂದೇ ಹೆಸರಿಸಲ್ಪಟ್ಟವರು. ಆ ಹೆಸರಿಗೆ ತಕ್ಕಂತೆ ಮೈದಾನದಲ್ಲಿ ಆಡಿದವರು. ಆದರೆ ಈ ವರ್ಷದ ಆರಂಭದಲ್ಲಿ ಭಾರತ ತೊರೆದು ಲಂಡನ್‌ʼನಲ್ಲಿ ತಮ್ಮ ಕುಟಂಬದ ಜೊತೆ ನೆಲೆಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರಲು ಪ್ರಾರಂಭಿಸಿದವು.

ಇದನ್ನೂ ಓದಿ:  ರೋಹಿತ್‌-ಹಾರ್ದಿಕ್‌ ನಡುವಿನ ಮುನಿಸು-ಮನಸ್ತಾಪ ದೂರವಾಗಲು ಕಾರಣ ಟೀಂ ಇಂಡಿಯಾದ ಈ ಇಬ್ಬರು

ಈ ಮಾತುಗಳಿಗೆ ತಕ್ಕಂತೆ ಸದ್ಯದ ಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ. ಕ್ರಿಕೆಟ್​ ಇದ್ದಾಗ ಮಾತ್ರ ಭಾರತಕ್ಕೆ ಬರುತ್ತಿರುವ ವಿರಾಟ್‌, ಉಳಿದೆಲ್ಲಾ ದಿನ ಲಂಡನ್ʼನಲ್ಲಿಯೇ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್​ ಗೆದ್ದ ಬಳಿಕ ಭಾರತಕ್ಕೆ ಬಂದಾಗಲೂ ಸಂಭ್ರಮಾಚಾರಣೆ ಮುಗಿದ ಮರುದಿನವೇ  ಮುಂಬೈನಿಂದ ಲಂಡನ್​ʼಗೆ ವಿರಾಟ್‌ ಪ್ರಯಾಣ ಬೆಳೆಸಿದ್ದರು.

ಇನ್ನು ಲಂಡನ್‌ʼನಲ್ಲಿ ವಿರಾಟ್​ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಆದರೆ ನೆಮ್ಮದಿ ಹುಡುಕಿ ಲಂಡನ್‌ʼಗೆ ತೆರಳಿದರೂ, ಅವರೊಬ್ಬರ ಕಾಟ ತಪ್ಪುತ್ತಿಲ್ಲವಂತೆ. ಅಷ್ಟಕ್ಕೂ ಅವರು ಯಾರು ಎಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: ಮೂಲೆಗುಂಪಾಗಿದ್ದ ಈ ಆಟಗಾರನಿಗೆ RCB ಕ್ಯಾಪ್ಟನ್ಸಿ: ʼನನ್ನ ಸಹೋದರʼ ಎಂದೇ ಕೊಹ್ಲಿ ಕರೆಯುತ್ತಿದ್ದ ಈತನಿಗೆ ಕೊನೆಗೂ ಖುಲಾಯಿಸಿದ ಅದೃಷ್ಟ!

ಅಭಿಮಾನಿಗಳಾಗಲಿ, ಮಾಧ್ಯಮವಾಗಲಿ ಕೊಹ್ಲಿಗೆ ಕಾಟ ಕೊಡುತ್ತಿಲ್ಲ. ಬದಲಾಗಿ ಕೊಹ್ಲಿ ಹಿಂದೆ ಬಿದ್ದಿರುವವರು ಜಾಹೀರಾತುದಾರರು. ನೆಮ್ಮದಿ ಜೀವನ ಬೇಕೆಂದು ಲಂಡನ್‌ʼಗೆ ತೆರಳಿದ್ದರೆ ಅಲ್ಲಿಯೂ ಕೊಹ್ಲಿಯನ್ನು ಸಂಪರ್ಕಿಸುತ್ತಿದ್ದಾರೆ. ಕೆಲ ದಿನಗಳಿಂದ ಸಾಲು ಸಾಲು ಬ್ರ್ಯಾಂಡ್ʼ​ಗಳ ಶೂಟ್ʼ​​ಗಳಲ್ಲಿ ವಿರಾಟ್​ ಫುಲ್​ ಬ್ಯುಸಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News