Team Indiaದಲ್ಲಿ ಈ ಇಬ್ಬರು ಕಿಲಾಡಿಗಳ ದರ್ಬಾರ್! 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವುದು ಖಚಿತ ಅನ್ಸುತ್ತೆ!
World Test Championship final 2023: ಐಪಿಎಲ್ 2023 ರಲ್ಲಿ ತಂಡದ 2 ಆಟಗಾರರು ತಮ್ಮ ಮಾರಕ ಫಾರ್ಮ್ ನೊಂದಿಗೆ ಮ್ಯಾನೇಜ್ ಮೆಂಟ್‌ನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರು WTC ಫೈನಲ್ ನಲ್ಲಿ ಭಾರತ ತಂಡದ ಭಾಗವಾಗಿದ್ದು, ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
World Test Championship final 2023: ಭಾರತ ತಂಡವು ಜೂನ್ 7 ರಿಂದ ಲಂಡನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಅಂತಿಮ (WTC ಫೈನಲ್-2023) ಪಂದ್ಯವನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟಿದೆ. 10 ವರ್ಷಗಳಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್
ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಒಂದು ಗುಡ್ ನ್ಯೂಸ್ ಕೂಡ ಹೊರಬಿದ್ದಿದೆ. ಐಪಿಎಲ್ 2023 ರಲ್ಲಿ ತಂಡದ 2 ಆಟಗಾರರು ತಮ್ಮ ಮಾರಕ ಫಾರ್ಮ್ ನೊಂದಿಗೆ ಮ್ಯಾನೇಜ್ ಮೆಂಟ್‌ನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರು WTC ಫೈನಲ್ ನಲ್ಲಿ ಭಾರತ ತಂಡದ ಭಾಗವಾಗಿದ್ದು, ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಟೀಂ ಇಂಡಿಯಾಗೆ ಸಂತಸದ ಸುದ್ದಿ!
ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ನ 62 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದರು. ಈ ಇಬ್ಬರೂ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗಾಗಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಈ ದೊಡ್ಡ ಪಂದ್ಯಕ್ಕೂ ಮುನ್ನ ಈ ಇಬ್ಬರು ಆಟಗಾರರ ಅಮೋಘ ಫಾರ್ಮ್ ಟೀಂ ಇಂಡಿಯಾ ಪಾಲಿಗೆ ಭರ್ಜರಿ ಸುದ್ದಿಯಾಗಿದೆ.
ಐಪಿಎಲ್ ನಲ್ಲಿ ಮೊದಲ ಶತಕ ದಾಖಲಿಸಿದ ಗಿಲ್!
23ರ ಹರೆಯದ ಯುವ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಈ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಗಿಲ್ 58 ಎಸೆತಗಳಲ್ಲಿ 101 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು. ಅವರ ಇನ್ನಿಂಗ್ಸ್ ನಿಂದಾಗಿ ತಂಡ 188 ರನ್ ಗಳಿಗೆ ತಲುಪಲು ಸಾಧ್ಯವಾಯಿತು. ಶುಭಮನ್ ಗಿಲ್ ಐಪಿಎಲ್ 2023 ರಲ್ಲಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು, 48.00 ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!
ಮೊಹಮ್ಮದ್ ಶಮಿ ಸೂಪರ್ ಬೌಲಿಂಗ್:
ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡುವಾಗ ಮೊಹಮ್ಮದ್ ಶಮಿ 5.25 ಎಕಾನಮಿಯೊಂದಿಗೆ 21 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2023 ರಲ್ಲಿ, ಶಮಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು 23 ವಿಕೆಟ್ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸ್ ನಲ್ಲೂ ಮುಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ