CSK vs RCB: ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರೋಚಕತೆಯಿಂದ ನಡೆಯುತ್ತಿದೆ. ಈ ಸೀಸನ್’ನಲ್ಲಿ ಅನೇಕ ದಿಗ್ಗಜ ಆಟಗಾರರು ಕಾಣಿಸಿಕೊಂಡಿಲ್ಲ. ಕೆಲವರು ನಿವೃತ್ತಿ ಹೊಂದಿದ್ದರೆ, ಇನ್ನೂ ಕೆಲವರು ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ನೋವು ಒಂದೆಡೆಯಾದರೆ, ಮತ್ತೊಂದು ನೋವು ಪ್ರತೀ ಕ್ಷಣ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023: ಕೊಹ್ಲಿ ಅಬ್ಬರ, ವೈಶಾಕ್ ಕೈಚಳಕಕ್ಕೆ ಮಣಿದ ಡೆಲ್ಲಿ ಕ್ಯಾಪಿಟಲ್ಸ್


ಹೌದು, ಸದ್ಯ ವರದಿಗಳ ಪ್ರಕಾರ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಸಿ ಎಸ್ ಕೆ ತಂಡದ ನಾಯಕ ಎಂ ಎಸ್ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸಲಿದ್ದಾರೆ. ಮೇ 14ರ ಬಳಿಕ ಈ ವಿಚಾರ ಕನ್ಫರ್ಮ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ನಾಳೆ ಅಂದರೆ ಏಪ್ರಿಲ್ 17ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ.


ಪ್ರತೀ ಬಾರಿ ರೋಚಕತೆಯಿಂದ ಕೂಡಿರುತ್ತಿದ್ದ ಆರ್ ಸಿ ಬಿ vs ಸಿ ಎಸ್ ಕೆ ಪಂದ್ಯ, ಈ ಬಾರಿ ಭಾವನಾತ್ಮಕವಾಗಿ ಕೂಡಿರಲಿದೆ. ಇದಕ್ಕೆ ಕಾರಣ, ಎಂ ಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೊನೆಯ ಬಾರಿ ಒಂದಾಗಿ ಮೈದಾನದಲ್ಲಿ ಆಡಲಿದ್ದಾರೆ. ಎದುರಾಳಿಗಳಾಗಿದ್ದರೂ ಸಹ ಮೈದಾನದಲ್ಲೂ ಇವರಿಬ್ಬರ ಅನ್ಯೋನ್ಯತೆ ಅದೆಷ್ಟೊ ಬಾರಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ನಾಳೆ ನಡೆಯಲಿರುವ RCB vs CSK ಪಂದ್ಯವು ಬಹಳ ಕುತೂಹಲಕಾರಿಯಾಗಲಿದೆ. ಒಂದೆಡೆ ತವರಿನಲ್ಲಿ ಆರ್ ಸಿಬಿ ಆಡುತ್ತಿದ್ದರೆ, ಧೋನಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಖತ್ ಕ್ರೇಜ್ ಇದೆ. ಈ ಪಂದ್ಯದ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಿಕೆಟ್‌’ಗಳು ಒಂದೇ ದಿನದಲ್ಲಿ ಮಾರಾಟವಾಗಿವೆ. ಭಾರತೀಯ ಕ್ರಿಕೆಟ್‌’ನ ಇಬ್ಬರು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಡುವಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.


ನೋ ಟ್ರೋಲ್ ಅಂತಿದ್ದಾರೆ ಫ್ಯಾನ್ಸ್!


ಸಾಮಾನ್ಯವಾಗಿ ಆರ್ ಸಿ ಬಿ vs ಸಿ ಎಸ್ ಕೆ ಪಂದ್ಯ ನಡೆದರೆ ಸಾಕು ಟ್ರೋಲ್ ಮಾಡೋದು ಸಹಜ. ಆದರೆ ಈ ಬಾರಿ ನಡೆಯಲಿರುವ ಪಂದ್ಯ ವಿಶೇಷತೆಯಿಂದ ಕೂಡಿದೆ. ಅಷ್ಟೇ ಅಲ್ಲದೆ, ಆರ್ ಸಿಬಿಯ ನಿಜವಾದ ಅಭಿಮಾನಿಗಳು ಕರುಣಾಮಯಿಗಳು ಅನ್ನೋದನ್ನು ಮತ್ತೆ ಪ್ರೂವ್ ಮಾಡುತ್ತಾ, ‘ನೋ ಟ್ರೋಲ್’ ಎಂಬ ಅಭಿಮಾನವನ್ನು ಟ್ವಿಟ್ಟರ್’ನಲ್ಲಿ ಪ್ರಾರಂಭಿಸಿದ್ದಾರೆ.


Watch: ಪಂದ್ಯ ಗೆಲ್ಲುತ್ತಿದ್ದಂತೆ ಗಂಗೂಲಿಯಲ್ಲಿ ಗುರಾಯಿಸಿ, ಆ ರೀತಿ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ!


ಇನ್ನು ನಾಳೆ ನಡೆಯಲಿರುವ ಪಂದ್ಯ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕ ಕಂಡ ಅದ್ಭುತ ಗೆಳಯರು. ಒಂದೊಮ್ಮೆ ತಾನು ಕುಸಿದಿದ್ದಾಗ, ಬೆನ್ನು ತಟ್ಟಿ ಮೇಲೇರುವಂತೆ ಮಾಡಿದ್ದು ಧೋನಿಯೇ ಅಂತಾ ಸಂದರ್ಶನವೊಂದರಲ್ಲಿ ಕೊಹ್ಲಿ ಹೇಳಿದ್ದರು,


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.