Virat Kohli vs Sourav Ganguly: ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್’ನ ಕ್ರಿಕೆಟ್ ನಿರ್ದೇಶಕರಾಗಿದ್ದಾರೆ. ಭಾರತ ಮತ್ತು RCB ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಬೆಂಗಳೂರು ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ.
ಪಂದ್ಯದ ನಂತರ ಇಬ್ಬರೂ ಪರಸ್ಪರ ಭೇಟಿಯಾಗುವುದು ಖಚಿತವಾಗಿತ್ತು. ಆಟ ಮುಗಿದ ತಕ್ಷಣ ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸಾಂಪ್ರದಾಯಿಕವಾಗಿ ಹ್ಯಾಂಡ್ ಶೇಕ್ ಮಾಡಲು ಬಂದರು. ಆದರೆ ಆ ಸಂದರ್ಭದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಇದ್ದ ಕೊಹ್ಲಿ, ಡೆಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಜೊತೆ ಇದ್ದ ಗಂಗೂಲಿಯವರನ್ನು ಗುರಾಯಿಸಿ ನೋಡಿ, ಹ್ಯಾಂಡ್ ಶೇಕ್ ಕೊಡದೆ ಮುಂದೆ ನಡೆದರು.
ಇದನ್ನೂ ಓದಿ: IPL 2023 ಮಧ್ಯೆ ಮತ್ತೆ ಕೇಳಿಬಂತು ಬೆಟ್ಟಿಂಗ್ ದಂಧೆ! ಈ ದಿಗ್ಗಜ ಕ್ರಿಕೆಟಿಗ ಶಾಮೀಲು!
ಗಂಗೂಲಿ ಡು ಪ್ಲೆಸಿಸ್ ಜೊತೆ ಹ್ಯಾಂಡ್ ಶೇಕ್ ಮಾಡಿದ ಬಳಿಕ, ಕೊಹ್ಲಿಗೆ ಕೈ ನೀಡಿದರು, ಆದರೆ ಅವರು ನಿರಾಕರಿಸಿದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಪಾಂಟಿಂಗ್ ಅವರು ಗಂಗೂಲಿ ಜೊತೆ ಹಸ್ತಲಾಘವ ಮಾಡಲು ಕೊಹ್ಲಿಗೆ ಹೇಳುತ್ತಿರುವುದು ಕಂಡುಬಂದಿದೆ. ಆದರೆ ಅವರು ನಿರಾಕರಿಸಿದ್ದಾರೆ.
ಸೌರವ್ ಗಂಗೂಲಿ vs ವಿರಾಟ್ ಕೊಹ್ಲಿ:
ಇದಕ್ಕೂ ಮೊದಲು ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್’ನ 18 ನೇ ಓವರ್‌ನಲ್ಲಿ ಮಾಜಿ ಆಟಗಾರ ಅಮನ್ ಖಾನ್ ಅವರ ಕ್ಯಾಚ್ ಹಿಡಿದ ಬಳಿಕ, ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್’ನಲ್ಲಿ ಕುಳಿತಿದ್ದ ಗಂಗೂಲಿಯನ್ನು ದಿಟ್ಟಿಸಿ ನೋಡಿದರು.
Virat Kohli stares towards Sourav Ganguly and Ricky Ponting after takes the catch. 🔥 pic.twitter.com/EmuAzzzzMb
— S. (@Sobuujj) April 15, 2023
2021 ರ ಅಂತ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಬಳಿಕ ಶುರುವಾಗಿದೆ ಕೊಹ್ಲಿ vs ಗಂಗೂಲಿ ಜಟಾಪಟಿ. ಆಗ ಗಂಗೂಲಿ ಬಿಸಿಸಿಐ ಮುಖ್ಯಸ್ಥರಾಗಿದ್ದು, ಕೊಹ್ಲಿ ತಮ್ಮ ಟಿ20 ನಾಯಕತ್ವವನ್ನು ತ್ಯಜಿಸಿದ್ದರು.
ಇದನ್ನೂ ಓದಿ: IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು
ಕೊಹ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಹೇಳಿಕೆ ನೀಡಿದ ಗಂಗೂಲಿ, ವಿರಾಟ್ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಬಿಸಿಸಿಐ ಮನವಿ ಮಾಡಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಕೊಹ್ಲಿ, ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಇದಾದ ನಂತರ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು. 2022 ರ ಜನವರಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋತ ನಂತರ ಅವರು ಅಂತಿಮವಾಗಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.