RR vs DC: ಆರಂಭಿಕರ ಅಬ್ಬರಕ್ಕೆ ಗೆಲುವು ಸಾಧಿಸಿದ ರಾಜಸ್ಥಾನ: ಡೆಲ್ಲಿ ಮಣಿಸಿ ಅಗ್ರಸ್ಥಾನಕ್ಕೇರಿದ ರಾಯಲ್ಸ್
Rajasthan Royals vs Delhi Capitals: ರಾಜಸ್ಥಾನ ತಂಡದ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅಬ್ಬರದ ಪ್ರದರ್ಶನ ತೋರಿದ್ದಾರೆ. ಜೋಸ್ ಬಟ್ಲರ್ 79 ರನ್, ಯಶಸ್ವಿ ಜೈಸ್ವಾಲ್ 60 ರನ್ ಅದ್ಭುತ ಅರ್ಧ ಶತಕ ಸಿಡಿಸಿದ್ದಾರೆ.
Rajasthan Royals vs Delhi Capitals: ಇಂಡಿಯನ್ ಪ್ರೀಮಿಯರ್ ಲೀಗ್’ನ 11ನೇ ಪಂದ್ಯ ಇಂದು ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!
ಇನ್ನು ಪಂದ್ಯದಲ್ಲಿ ರಾಜಸ್ಥಾನ ತಂಡದ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅಬ್ಬರದ ಪ್ರದರ್ಶನ ತೋರಿದ್ದಾರೆ. ಜೋಸ್ ಬಟ್ಲರ್ 79 ರನ್, ಯಶಸ್ವಿ ಜೈಸ್ವಾಲ್ 60 ರನ್ ಅದ್ಭುತ ಅರ್ಧ ಶತಕ ಸಿಡಿಸಿದ್ದಾರೆ.
ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇನ್ನು ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರಂಭಿಸಿದ ರೀತಿಯನ್ನು ಐಪಿಎಲ್ 2023 ರ ವೇಗದ ಆರಂಭ ಎಂದು ಕರೆಯಬಹುದು. ಖಲೀಲ್ ಅಹ್ಮದ್ ಅವರ ಮೊದಲ ಓವರ್’ನಲ್ಲಿಯೇ ಯಶಸ್ವಿ ಬ್ಯಾಟಿಂಗ್ ಮಾಡುವಾಗ 20 ರನ್ ಗಳಿಸಿದ್ದಾರೆ.
ಖಲೀಲ್ ಅಹ್ಮದ್ ಅವರ ಓವರ್’ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಮಿಡ್-ವಿಕೆಟ್ ಕಡೆಗೆ ಅದ್ಭುತ ಬೌಂಡರಿ ಬಾರಿಸಿದರು. ಜೈಸ್ವಾಲ್ ಐಪಿಎಲ್ 2023 ರ ಮೊದಲ ಓವರ್‌ನಲ್ಲಿ ಅದ್ಭುತ ಬೌಂಡರಿಗಳನ್ನು ಬಾರಿಸುವ ಮೂಲಕ ಹೆಚ್ಚಿನ ರನ್ ಗಳಿಸಿದರು. ಒಟ್ಟಾರೆ 25 ಎಸೆತಗಳಲ್ಲಿ 50 ರನ್ ಕಲೆ ಹಾಕಿದ್ದಾರೆ. ಆದರೆ 31 ಎಸೆತಗಳಲ್ಲಿ 60 ರನ್ ಗಳಿಸಿದ ಅವರು ಬಳಿಕ ಪೆವಿಲಿಯನ್ ಸೇರಿದರು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರಿಲೀ ರೋಸ್ಸೌ, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್ ನಾರ್ಕಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಮುಖೇಶ್ ಕುಮಾರ್
ಇದನ್ನೂ ಓದಿ: Allu Arjun: ಸ್ಟೈಲಿಶ್ ಸ್ಟಾರ್ ಅಲ್ಲುಅರ್ಜುನ್ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಹಿಂದಿರುವ ರಹಸ್ಯವೇನು ಗೊತ್ತಾ...?
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಮತ್ತು ಯುಜ್ವೇಂದ್ರ ಚಾಹಲ್.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.