RCB vs RR Playing XI:  IPL-2023 ಪಂದ್ಯವು ಮಾಜಿ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಂದರೆ ಭಾನುವಾರದಂದು ನಡೆಯುತ್ತಿದೆ. ಪ್ರಸಕ್ತ ಋತುವಿನ 32ನೇ ಪಂದ್ಯ ಇದಾಗಿದ್ದು, ಆರ್‌’ಸಿಬಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನ ಪಡೆದಿದೆ. ಆರ್‌ಸಿಬಿ ತಂಡದ ನಾಯಕತ್ವವನ್ನು ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಿಭಾಯಿಸುತ್ತಿದ್ದಾರೆ. ಇನ್ನೊಂದೆಡೆ ಸಂಜು ಸ್ಯಾಮ್ಸನ್ ರಾಜಸ್ಥಾನವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಈ ಪಂದ್ಯದಲ್ಲಿ ಪ್ಲೇಯಿಂಗ್-11 ರಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: ಆ ಒಬ್ಬ ಆಟಗಾರನಿಗೆ ಅವಕಾಶ ಕೊಡಲು ವಿಶ್ವಕಪ್’ನಿಂದ ಹೊರಗಿಡಲ್ಪಟ್ಟ ಶುಭ್ಮನ್! ರಾಶಿ ರಾಶಿ ದಾಖಲೆ ವ್ಯರ್ಥವೇ?


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದರು. ಈ ಸಂದರ್ಭದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.


ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯಕ್ಕಾಗಿ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದ್ದಾರೆ. ಡೇವಿಡ್ ವಿಲ್ಲಿಗೆ ಅವಕಾಶ ನೀಡಿದ ಅವರು, ವೇಯ್ನ್ ಪಾರ್ನೆಲ್’ಗೆ ಗೇಟ್ ಪಾಸ್ ನೀಡಿದ್ದಾರೆ. ಕುತೂಹಲ ಎಂದರೆ, ರೀಸ್ ಟೋಪ್ಲೆ ಬದಲಿಗೆ ಪಾರ್ನೆಲ್‌’ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಸೀಮಿತ ಓವರ್‌’ಗಳ ಸ್ಪೆಷಲಿಸ್ಟ್ ಎಡಗೈ ವೇಗಿ ವೇಯ್ನ್ ಪಾರ್ನೆಲ್’ರನ್ನು ಹರಾಜಿ ಸಂದರ್ಭದಲ್ಲಿ ಯಾರೂ ಖರೀದಿಸಿರಲಿಲ್ಲ.


ವೇಯ್ನ್ ಪಾರ್ನೆಲ್ ಯಾರು?


ವೇಯ್ನ್ ಪಾರ್ನೆಲ್ ಅವರು 26 ನೇ ವಯಸ್ಸಿನಲ್ಲಿ ಕ್ರಿಕೆಟ್‌’ನಿಂದ ನಿವೃತ್ತರಾದರು. ಆದರೆ 2021 ರಲ್ಲಿ ತಮ್ಮ ಮತ್ತೆ ಮೈದಾನಕ್ಕೆ ಆಗಮಿಸಿದರು, ಅಷ್ಟೇ ಅಲ್ಲದೆ, 22 ನೇ ವಯಸ್ಸಿನಲ್ಲಿ, ಪಾರ್ನೆಲ್ ಅವರ ಜನ್ಮದಿನದ ಸಂದರ್ಭದಲ್ಲಿ ಧರ್ಮವನ್ನು ಬದಲಾಯಿಸಿದರು. ಪಾರ್ನೆಲ್ ತನ್ನ T20 ವೃತ್ತಿಜೀವನದಲ್ಲಿ ಒಟ್ಟಾರೆ 261 ಪಂದ್ಯಗಳನ್ನು ಆಡಿದ್ದಾರೆ. ಈ ಸ್ವರೂಪದಲ್ಲಿ ಅವರು ಒಟ್ಟು 265 ವಿಕೆಟ್ಗಳನ್ನು ಕಬಳಿಸಿದ್ದಾರೆ.


ಡೇವಿಡ್ ವೈಲಿ ಯಾರು?


ಡೇವಿಡ್ ವೈಲಿ ಬಗ್ಗೆ ಮಾತನಾಡುವುದಾದರೆ, ಈ ಇಂಗ್ಲೆಂಡ್ ಬೌಲಿಂಗ್-ಆಲ್ ರೌಂಡರ್ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇಲ್ಲಿಯವರೆಗೆ 64 ODI ಮತ್ತು 43 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ ಟಿ20 ವೃತ್ತಿಜೀವನದಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಟಿ20 ಮಾದರಿಯ ಒಟ್ಟು 246 ಪಂದ್ಯಗಳಲ್ಲಿ 244 ವಿಕೆಟ್ ಕಬಳಿಸಿದ್ದು, 3392 ರನ್ ಗಳಿಸಿದ್ದಾರೆ.


ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್-11): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಮತ್ತು ಯುಜುವೇಂದ್ರ ಚಾಹಲ್


ಇದನ್ನೂ ಓದಿ: IPL2023: ಕ್ರೀಕೆಟ್ ಪ್ರಿಯರಿಗೆ ಜಿಯೋ ಸಿನಿಮಾದಿಂದ ಗುಡ್‌ ನ್ಯೂಸ್‌ !


ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್-11): ವಿರಾಟ್ ಕೊಹ್ಲಿ (ನಾಯಕ), ಫಾಫ್ ಡುಪ್ಲೆಸಿ, ಮಹಿಪಾಲ್ ಲೊಮೊರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್ ಮತ್ತು ವಿಜಯಕುಮಾರ ವೈಶಾಕ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ