IPL2023: ಕ್ರೀಕೆಟ್ ಪ್ರಿಯರಿಗೆ ಜಿಯೋ ಸಿನಿಮಾದಿಂದ ಗುಡ್‌ ನ್ಯೂಸ್‌ !

IPL 2023: ಅಭಿಮಾನಿ ವರ್ಗವನ್ನು ವಿಸ್ತರಿಸಲು ರಾಷ್ಟ್ರವ್ಯಾಪಿಯಾಗಿ ಎಲ್ಲ ಪ್ರೀಮಿಯಂ ಕ್ರೀಡಾ ಗುಣಲಕ್ಷಣಗಳಿಗಾಗಿ ಅವರು ಜಿಯೋಸಿನಿಮಾದ 'ಮೊದಲು ಡಿಜಿಟಲ್' ಎಂಬ ಅಭಿಯಾನವನ್ನು ಪ್ರಚಾರ ಮಾಡಲಿದ್ದಾರೆ. 

Written by - Zee Kannada News Desk | Last Updated : Apr 21, 2023, 07:43 PM IST
  • ರೋಹಿತ್ ಶರ್ಮ ಅವರನ್ನು ಜಿಯೋಸಿನಿಮಾದ ಪ್ರಚಾರ ರಾಯಭಾರಿ
  • ಜಿಯೋಸಿನಿಮಾದಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಬಾರಿ ದಾಖಲೆ
IPL2023: ಕ್ರೀಕೆಟ್ ಪ್ರಿಯರಿಗೆ ಜಿಯೋ ಸಿನಿಮಾದಿಂದ ಗುಡ್‌ ನ್ಯೂಸ್‌ ! title=

ದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಜಿಯೋಸಿನಿಮಾದ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗಿದೆ.  ಶ್ರೇಷ್ಠ  ಹಿಟ್ಮ್ಯಾನ್ ರೋಹಿತ್ ಶರ್ಮ ಅವರು ನಾಯಕ ಮತ್ತು ಆಟಗಾರರಾಗಿ ಹಲವಾರು ವಿಶ್ವದಾಖಲೆಗಳನ್ನು ಹೊಂದಿದ್ದಾರೆ. ಕ್ರೀಡಾ ವೀಕ್ಷಣೆಯನ್ನು ಡಿಜಿಟಲ್ ವೇದಿಕೆಯಲ್ಲಿ ವ್ಯಾಪಕವಾಗಿ ಬೆಳೆಸುವ ಜಿಯೋಸಿನಿಮಾದ ಧ್ಯೇಯಕ್ಕೆ ಹೆಚ್ಚಿನ ಬಲ ತುಂಬಲು ಅವರು ಈಗ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 

'ಭಾರತದಲ್ಲಿ ಮೊಬೈಲ್ ಫೋನ್ಗಳು ಮತ್ತು ಸಂಪರ್ಕಿತ ಟಿವಿಯ ಮೂಲಕ ಕ್ರೀಡೆಯನ್ನು ಹೇಗೆ ಆನಂದಿಸಬಹುದಾಗಿದೆ ಎಂಬುದಕ್ಕೆ ಜಿಯೋಸಿನಿಮಾ ಹೊಸ ದಿಕ್ಕನ್ನು ತೋರಿಸುತ್ತಿದೆ. ಇದು ಡಿಜಿಟಲ್ ಫ್ಲಾಟ್ಫಾರ್ಮ್ಗೆ ಶಿಫ್ಟ್ ಆಗಲು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ನಮ್ಯತೆ, ಪ್ರವೇಶಿಸುವಿಕೆ, ಸಂವಾದಾತ್ಮಕತೆ ಮತ್ತು ವೈಯಕ್ತೀಕರಣವನ್ನು ಒದಗಿಸುತ್ತದೆ' ಎಂದು ರೋಹಿತ್ ಶರ್ಮ ಹೇಳಿದ್ದಾರೆ.

ಜಿಯೋಸಿನಿಮಾದ ಜತೆ ಕೈಜೋಡಿಸಲು ಮತ್ತು ಈ ಪ್ರಯಾಣದ ಭಾಗವಾಗಲು  ತುಂಬಾ ಸಂತೋಷವಾಗುತ್ತಿದೆ ಎಂದಿದ್ದಾರೆ. ಅಭಿಮಾನಿ ವರ್ಗವನ್ನು ವಿಸ್ತರಿಸಲು ರಾಷ್ಟ್ರವ್ಯಾಪಿಯಾಗಿ ಎಲ್ಲ ಪ್ರೀಮಿಯಂ ಕ್ರೀಡಾ ಗುಣಲಕ್ಷಣಗಳಿಗಾಗಿ ಅವರು ಜಿಯೋಸಿನಿಮಾದ 'ಮೊದಲು ಡಿಜಿಟಲ್' ಎಂಬ ಅಭಿಯಾನವನ್ನು ಪ್ರಚಾರ ಮಾಡಲಿದ್ದಾರೆ. 

ಇದನ್ನೂ ಓದಿ: eam India: ಯುಜ್ವೇಂದ್ರ ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕು? ರಾಶಿ ರಾಶಿ ಪ್ರಶ್ನೆ ಹುಟ್ಟುಹಾಕಿತು ಆ ‘ಪೋಸ್ಟ್’

'ರೋಹಿತ್ ಶರ್ಮ ಅವರು ಕ್ರೀಡಾ ಮನೋಭಾವ ಮತ್ತು ಸಾಟಿಯಿಲ್ಲದ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಆಟಗಾರರು ಸಮಾನವಾಗಿ ಹೊಂದುವ ಮೌಲ್ಯಗಳನ್ನು ಅವರು ಪ್ರತಿನಿಧಿಸುತ್ತಾರೆ. ನಮ್ಮ ಕ್ರೀಡೆಗಳ ಪ್ರಸ್ತುತಿ ಮತ್ತು ಹಾಲಿ ಟಾಟಾ ಐಪಿಎಲ್ ಟೂರ್ನಿಯು ರೋಹಿತ್ ಶರ್ಮ ಅವರ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯದಲ್ಲಿ ಸಿನರ್ಜಿಯನ್ನು ಹೊಂದಿದೆ ಮತ್ತು ಈ ಪಾಲುದಾರಿಕೆಯು ಕಾತುರದ ಭವಿಷ್ಯದ ಹಾದಿಯತ್ತ ಭಾರತವನ್ನು ಮುನ್ನಡೆಸುವ ನಮ್ಮ ಅನ್ವೇಷಣೆಗೆ ಸಹಜವಾದ ವಿಸ್ತರಣೆಯಾಗಿದೆ' ಎಂದು ವಯಾಕಾಮ್18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ. 

ಭಾರತದಲ್ಲಿನ ಎಲ್ಲ ವೀಕ್ಷಕರಿಗೆ 'ಟಾಟಾ ಐಪಿಎಲ್-2023' ಅನ್ನು ಜಿಯೋಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್ ಮಾಡುತ್ತಿದೆ. ಇದರ ಪರಿಣಾಮವಾಗಿ ಮೊದಲ ಎರಡು ವಾರಗಳಲ್ಲಿ 550 ಕೋಟಿಗೂ ಅಧಿಕ ಸಂಖ್ಯೆಯ ವೀಕ್ಷಕರೊಂದಿಗೆ ಹೊಸ ದಾಖಲೆ ನಿರ್ಮಾಣವಾಗಿದೆ. ಈ ಪೈಕಿ ಏಕಕಾಲದಲ್ಲಿ 2.4 ಕೋಟಿ ವೀಕ್ಷಣೆಯ ಗರಿಷ್ಠ ಸಂಖ್ಯೆಯ ದಾಖಲೆಯೂ ದಾಖಲಾಗಿದೆ. ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಟಾಟಾ ಐಪಿಎಲ್ ಪಂದ್ಯದ ವೇಳೆ ಏಕಕಾಲದಲ್ಲಿ ಗರಿಷ್ಠ 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಹಾಜರಿದ್ದರು. ಮೊದಲಿಗೆ 2.2 ಕೋಟಿ ವೀಕ್ಷಕರ ಸಂಖ್ಯೆ ದಾಖಲಾಗಿತ್ತು.

ಜಿಯೋಸಿನಿಮಾದಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಬಾರಿ ದಾಖಲೆಯನ್ನು ಮುರಿಯಲಾಯಿತು. ಏಪ್ರಿಲ್ 12ರಂದು ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಪಂದ್ಯದ ವೇಳೆ 2.2 ಕೋಟಿ ವೀಕ್ಷಕರ ದಾಖಲೆ ನಿರ್ಮಾಣವಾಗಿತ್ತು. 
ಜಿಯೋ ಸಿನಿಮಾ ತನ್ನ ಟಾಟಾ ಐಪಿಎಲ್-2023ರ ಸ್ಟ್ರೀಮಿಂಗ್ಗಾಗಿ ಒಟ್ಟು 23 ಪ್ರಾಯೋಜಕರನ್ನು ಘೋಷಿಸಿದೆ. ಈ ಆವೃತ್ತಿಯಲ್ಲಿ ಜಿಯೋಸಿನಿಮಾದೊಂದಿಗೆ ಒಪ್ಪಂದ ಮಾಡಿಕೊಂಡ ಪ್ರಾಯೋಜಕರು ಮತ್ತು ಜಾಹೀರಾತುದಾರರ ಸಂಖ್ಯೆಯು, ಭಾರತದಲ್ಲಿನ ಯಾವುದೇ ಡಿಜಿಟಲ್ ಸ್ಟ್ರೀಮಿಂಗ್ನಲ್ಲಿ ಯಾವುದೇ ಈವೆಂಟ್ಗೆ ಗರಿಷ್ಠವೆನಿಸಿದೆ.

ಇದನ್ನೂ ಓದಿ: IPLನಲ್ಲಿ ವಿಫಲವಾದ್ರೂ ಟಿ20ಯಲ್ಲಿ ‘ಸೂರ್ಯ’ನೇ ಕಿಂಗ್: ಅಗ್ರಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾದ ಮಿ.360

ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News