ಶುಭ್ಮನ್ ಬಗ್ಗೆ ಅಸೂಯೆ, ಈ ಆಟಗಾರ ಸೂಪರ್ ಸ್ಟಾರ್ ಎಂದ Steve Smith! ಈ ಹೊಟ್ಟೆಕಿಚ್ಚಿಗೆ ಕಾರಣವೇನು?
Steve Smith Statement: ಎರಡು ಹೀನಾಯ ಸೋಲಿನ ನೋವು ಆಸ್ಟ್ರೇಲಿಯದ ಆಟಗಾರರಿಗೆ ಭರಿಸಲಾಗುತ್ತಿಲ್ಲ. ಹೀಗಾಗಿ ತಂಡದ ಆಟಗಾರರು ವ್ಯತಿರಿಕ್ತ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ. ಕ್ರಿಕ್ ಇನ್ ಫೋಗೆ ನೀಡಿದ ಸಂದರ್ಶನದಲ್ಲಿ, ಸ್ಟೀವ್ ಸ್ಮಿತ್‌ಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ಅದರಲ್ಲಿ ಅವರು ಶುಭಮನ್ ಗಿಲ್ ಬಗ್ಗೆ ಅಸೂಯೆಪಟ್ಟರು.
Steve Smith Statement: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ನಾಗ್ಪುರದಲ್ಲಿ ಮತ್ತು ನಂತರ ದೆಹಲಿಯಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ಇತರ ತಂಡಗಳಿಗೆ ಟೀಂ ಇಂಡಿಯಾದ ಪರಾಕ್ರಮ ಏನೂ ಅನ್ನೋದನ್ನು ತೋರಿಸುತ್ತದೆ.
ಇದನ್ನೂ ಓದಿ: IND vs AUS: ಟೀಂ ಇಂಡಿಯಾವನ್ನು ಸೋಲಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್! ಆಸೀಸ್ ಗೆ ಈ ಅನುಭವಿ ಕೋಚ್?
ಎರಡೂ ಪಂದ್ಯಗಳಲ್ಲಿ ಭಾರತ 3 ದಿನಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಹೀಗಿರುವಾಗ ಆಸ್ಟ್ರೇಲಿಯದ ಆಟಗಾರರು ತಬ್ಬಿಬ್ಬಾಗಿ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಇತ್ತೀಚೆಗೆ ಕಂಡು ಬಂದಿದೆ.
ಎರಡು ಹೀನಾಯ ಸೋಲಿನ ನೋವು ಆಸ್ಟ್ರೇಲಿಯದ ಆಟಗಾರರಿಗೆ ಭರಿಸಲಾಗುತ್ತಿಲ್ಲ. ಹೀಗಾಗಿ ತಂಡದ ಆಟಗಾರರು ವ್ಯತಿರಿಕ್ತ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ. ಕ್ರಿಕ್ ಇನ್ ಫೋಗೆ ನೀಡಿದ ಸಂದರ್ಶನದಲ್ಲಿ, ಸ್ಟೀವ್ ಸ್ಮಿತ್‌ಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ಅದರಲ್ಲಿ ಅವರು ಶುಭಮನ್ ಗಿಲ್ ಬಗ್ಗೆ ಅಸೂಯೆಪಟ್ಟರು. ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಹ್ಯಾರಿ ಬ್ರೂಕ್ ಮತ್ತು ಶುಭ್ಮನ್ ಗಿಲ್ ಅವರಲ್ಲಿ ಯಾರನ್ನು ನೀವು ಮುಂದಿನ ಸೂಪರ್‌ಸ್ಟಾರ್ ಆಟಗಾರ ಎಂದು ನೋಡುತ್ತೀರಿ ಎಂದು ಸ್ಮಿತ್‌ಗೆ ಕೇಳಲಾಯಿತು. ಪ್ರತಿಕ್ರಿಯೆಯಾಗಿ, ಸ್ಮಿತ್ ಹ್ಯಾರಿ ಬ್ರೂಕ್ ಹೆಸರನ್ನು ತೆಗೆದುಕೊಂಡರು. ಈ ಬಳಿಕ ಕೋಪಗೊಂಡ ಗಿಲ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಸ್ಮಿತ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ರನ್ ಗಳಿಸಲು ಸಾಧ್ಯವಾಗಿಲ್ಲ. ಸ್ಮಿತ್ ಮೊದಲ ಟೆಸ್ಟ್‌ನಲ್ಲಿ 37 ಮತ್ತು 25 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಆದರೆ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಭಾರತದ ಸ್ಪಿನ್ ಬೌಲಿಂಗ್ ಮುಂದೆ ಆಸ್ಟ್ರೇಲಿಯಾದ ಆಟಗಾರರಿಗೆ ನಿಲ್ಲಲೂ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Virat kohli lip kiss : ವಿರಾಟ್ ಕೊಹ್ಲಿಗೆ ಲಿಪ್ ಕಿಸ್ ಕೊಟ್ಟ ಯುವತಿ..! ವಿಡಿಯೋ ವೈರಲ್
ಭಾರತ 2-0 ಮುನ್ನಡೆ:
ಭಾರತ ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದೆ. ಅಶ್ವಿನ್ ಮತ್ತು ಜಡೇಜಾ ಅವರ ಅಬ್ಬರದ ಎಸೆತಗಳು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಮಣಿಯುವಂತೆ ಮಾಡಿದೆ. ಕಳೆದ ಪಂದ್ಯದಲ್ಲಿ 6 ಬ್ಯಾಟ್ಸ್‌ಮನ್‌ಗಳು ಸ್ವೀಪ್ ಆಡುವ ಮೂಲಕ ಔಟಾದರು. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1 ರಿಂದ ನಡೆಯಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.