Indian Cricket Team: ಟೀಂ ಇಂಡಿಯಾದ 37 ವರ್ಷದ ಆಟಗಾರ ಮತ್ತೊಮ್ಮೆ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಆಟಗಾರ ಕೊನೆಯ ಬಾರಿಗೆ 2022 ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ಈ ಟೂರ್ನಿಯ ಬಳಿಕ ಒಮ್ಮೆಯೂ ಸಹ ತಂಡದ ಭಾಗವಾಗಲು ಸಾಧ್ಯವಾಗಿಲ್ಲ. ಈ ಆಟಗಾರ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ನೊಂದಿಗೆ ಮರಳಲು ಮುಂದಾಗಿದ್ದಾರೆ.
ಇದನ್ನೂ ಓದಿ: IND vs AUS: ಟೀಂ ಇಂಡಿಯಾವನ್ನು ಸೋಲಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್! ಆಸೀಸ್ ಗೆ ಈ ಅನುಭವಿ ಕೋಚ್?
37ರ ಹರೆಯದಲ್ಲೂ ವೇಗದ ಬ್ಯಾಟಿಂಗ್:
37 ವರ್ಷದ ದಿನೇಶ್ ಕಾರ್ತಿಕ್ 2022ರ ಟಿ-20 ವಿಶ್ವಕಪ್‌ನಿಂದ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ದಿನೇಶ್ ಕಾರ್ತಿಕ್ ಇದೀಗ ಡಿವೈ ಪಾಟೀಲ್ ಟೂರ್ನಿಯಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪಂದ್ಯಾವಳಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿರುವ ಕಾರ್ತಿಕ್ 38 ಎಸೆತಗಳಲ್ಲಿ 75 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
T20 ವಿಶ್ವಕಪ್ 2022 ರಲ್ಲಿ ಫ್ಲಾಪ್:
2022ರ ಟಿ20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ 2022 ರ ಟಿ-20 ವಿಶ್ವಕಪ್‌ನ 3 ಇನ್ನಿಂಗ್ಸ್‌ಗಳಲ್ಲಿ 4.66 ಸರಾಸರಿಯಲ್ಲಿ ಕೇವಲ 14 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಅವರ ಈ ಕೆಟ್ಟ ಆಟದ ನಂತರ, ಟೀಮ್ ಇಂಡಿಯಾದ ಪ್ಲೇಯಿಂಗ್ 11 ರಿಂದ ಅವರನ್ನು ಕೈಬಿಡಲಾಯಿತು. ಸೆಮಿಫೈನಲ್ ಪಂದ್ಯದಲ್ಲೂ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Virat kohli lip kiss : ವಿರಾಟ್ ಕೊಹ್ಲಿಗೆ ಲಿಪ್ ಕಿಸ್ ಕೊಟ್ಟ ಯುವತಿ..! ವಿಡಿಯೋ ವೈರಲ್
ದಿನೇಶ್ ಕಾರ್ತಿಕ್ ಏಷ್ಯಾ ಕಪ್ 2022 ರಲ್ಲಿ ಟೀಮ್ ಇಂಡಿಯಾದ ಭಾಗವಾಗುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯಾವಳಿಯಲ್ಲಿ, ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾದ ಮೊದಲ ಆಯ್ಕೆಯಾಗಿದ್ದರು, ಆದರೆ ಈ ಪಂದ್ಯಾವಳಿಯಲ್ಲಿಯೂ ಅವರಿಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಭಾರತಕ್ಕಾಗಿ ಇದುವರೆಗೆ 60 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 26.38 ಸರಾಸರಿಯಲ್ಲಿ 686 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ 26 ಟೆಸ್ಟ್ ಹಾಗೂ 94 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.