ಸಾಧನೆ ಮಾಡಬೇಕು ಅನ್ನೋ‌ ಛಲವಿದ್ರೇ ಏನ್ನನ್ನ‌‌‌ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ‌ ಈ‌ ಯುವಕನೇ‌ ಸಾಕ್ಷಿ..‌ಕಳೆದ 13 ವರ್ಷಗಳಿಂದ ಬಾಡಿ ಬಿಲ್ಡ್ ಮಾಡಿ ಈಗ ಮಿಸ್ಟರ್ ಯುನಿವರ್ಸ್ ಪಟ್ಟವನ್ನ ತನ್ನಾಗಿಸಿಕೊಂಡಿದ್ದಾನೆ ಈ ಮಂಡ್ಯದ ಹೈದಾ..!.


COMMERCIAL BREAK
SCROLL TO CONTINUE READING

ಹೌದು, ಹೀಗೆ ಕತ್ತಿನಲ್ಲಿ ಎರಡು ಪದಕ, ಕೈನಲ್ಲಿ ಎರಡು ಟ್ರೋಫಿ ಹಿಡಿದು ನಿಂತಿರೋ‌‌ ಯುವಕನ ಹೆಸರು ವಿಶ್ವಾಸ್. ಬೆಂಗಳೂರಿನ ನಂದಿನಿ‌ ಲೇಔಟ್ನಲ್ಲಿ ಕುಟುಂಬದೊಂದಿಗೆ ವಾಸವಾಗಿರೋ ವಿಶ್ವಾಸ್ ಕಳೆದ ವಾರ ಥೈಲಾಂಡ್ ‌ನಲ್ಲಿ‌ ನಡೆದ ಬಾಡಿ ಬಿಲ್ದಿಂಗ್ ಕಂಪೀಟೇಷನ್‌ ನಲ್ಲಿ ಭಾರತವನ್ನ ಪ್ರತಿನಿಧಿಸಿ ಸೀನಿಯರ್ ವಿಭಾಗದಲ್ಲಿ ಮಿಸ್ಟರ್ ಯುನಿವರ್ಸ್ ಪಟ್ಟವನ್ನ ಪಡೆದಿದ್ದಾರೆ.


ಇದನ್ನೂ ಓದಿ- ಪಾಕ್ ನಾಯಕ ಬಾಬರ್ ಅಜಮ್ ವಾಟ್ಸಾಪ್ ಚಾಟ್ ಲೀಕ್ ಪ್ರಕರಣ: ಬಾಬರ್ ಬೆಂಬಲಕ್ಕೆ ನಿಂತ ವಕಾರ್ ಯೂನಿಸ್


ಸೀನಿಯರ್ ವಿಭಾಗದಲ್ಲಿ ಮಿಸ್ಟರ್ ಯುನಿವರ್ಸ್ ಪಟ್ಟ!
ಮಂಡ್ಯದ ಹೈದಾ ವಿಶ್ವಾಸ್, 80ಕೆಜಿ ಸೀನಿಯರ್ ವಿಭಾಗದಲ್ಲಿ 40 ದೇಶದಿಂದ ಬಂದಿದ್ದ ದೇಹ ದೃಢ ಸರ್ಧಿಗಳನ್ನ ಹಿಮ್ಮೆಟ್ಟಿಸಿ ಚಿನ್ನದ ಪದಕವನ್ನ ಪಡೆದಿದ್ದಾರೆ. ಜೊತೆಗೆ ಕ್ಲಾಸಿಕಲ್ ಬಾಡಿ ಬಿಲ್ಡಿಂಗ್ ವಿಭಾಗದಲ್ಲೂ ಬೆಳ್ಳಿ ಪದಕ‌‌ ಪಡೆದು  ದೇಶದ ಕೀರ್ತಿಯನ್ನ ಕನ್ನಡ ನಾಡಿನ ಹೆಸರನ್ನು ಮಿಂಚಿಸಿದ್ದಾರೆ. 


ಇನ್ನೂ ತನ್ನ ಮಗನ ಸಾಧನೆಯನ್ನ ಕುಟುಂಬದವರು ಸಂತೋಷದಿಂದ ಆಚರಿಸಿದ್ದು, ಮಗ ಹೀಗೆ ಪ್ರಶಸ್ತಿ ಪಡೆದಿದ್ದು, ಭಾರತದ ರಾಷ್ಟಗೀತೆಯನ್ನ ವಿದೇಶದಲ್ಲಿ ಮೊಳಗುವಂತೆ ಮಾಡಿದ್ದು ತುಂಬಾ ಸಂತೋಷ ತಂದಿದೆ. ಇದು ಅವನ‌ ಕನಸು, ಸಾಕಷ್ಟು ಶ್ರಮಪಟ್ಟು  ಮಗ ಈ ಮಟ್ಟಕ್ಕೆ ಬಂದಿದ್ದಾನೆ. ಅವನ ಸಾಧನೆ ಇನ್ನೂ ಹೆಚ್ಚಾಗಲಿ ಎಂದು ವಿಶ್ವಾಸ್ ಅವರ ತಂದೆ-ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ- “ನಾವು ವಿಫಲರಾಗಿದ್ದೇವೆ…!” -ಟೀಂ ಇಂಡಿಯಾದ ಗೆಲುವಿನ ಬಳಿಕ ಅಸಮಾಧಾನ ಹೊರಹಾಕಿದ ನಾಯಕ ಹೇಳಿದ್ದೇನು?


ಒಟ್ಟಿನಲ್ಲಿ ಕನ್ನಡದ ಯುವಕ ಅದು ನಮ್ಮ ಮಂಡ್ಯದ ಯುವಕ ಈ ರೀತಿ ದೇಹ ದೃಢ ‌ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನದ ಪದಕ‌ ಪಡೆದಿರೋದು ಹೆಮ್ಮೆಯ ವಿಚಾರವೇ ಸರಿ. ಪ್ರಸ್ತುತ, ಮುಂದೆ ಇದೇ ವರ್ಷದ ಅಂತ್ಯದಲ್ಲಿ‌‌ ನಡೆಯುವ ಮಿಸ್ಟರ್ ವರ್ಲ್ಡ್ ನಲ್ಲಿ ಭಾಗಿಯಾಗಿ ಭಾರತಕ್ಕೆ ಮತ್ತೊಂದು ಕೀರ್ತಿ ತರೋದಕ್ಕಾಗಿ ವರ್ಕ್ ಔಟ್ ಮಾಡ್ತಿದ್ದಾರೆ ವಿಶ್ವಾಸ್. ಅವರಿಗೆ ನಮ್ಮ ಕಡೆಯಿಂದಲೂ ಆಲ್‌ ದ ಬೆಸ್ಟ್..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.