IND vs ENG: ಅಕ್ಟೋಬರ್ 29ರಂದು ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್’ಗಳಿಂದ ಆಂಗ್ಲ ತಂಡವನ್ನು ಸೋಲಿಸಿತು. ಸೋಲಿನ ಬಳಿಕ ತಂಡದ ನಾಯಕ ಜೋಸ್ ಬಟ್ಲರ್ ಹೇಳಿಕೆ ನೀಡಿದ್ದು, ಈ ಸೋಲಿಗೆ ಕಾರಣವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಲೈವ್ ಟಿವಿಯಲ್ಲೇ ಪಾಕ್ ನಾಯಕ ಬಾಬರ್ ಅಜಂ ವಾಟ್ಸಪ್ ಚಾಟ್ ಲೀಕ್ ಮಾಡಿದ ಪಿಸಿಬಿ ಅಧ್ಯಕ್ಷ!
ಈ ವಿಶ್ವಕಪ್’ನಲ್ಲಿ ಇಂಗ್ಲೆಂಡ್ 6 ಪಂದ್ಯಗಳನ್ನು ಆಡಿದ್ದು, ಐದು ಬಾರಿ ಸೋಲಿನ ರುಚಿಯನ್ನು ಅನುಭವಿಸಿದೆ. ಅಂದಹಾಗೆ ಭಾರತವು ಇಂಗ್ಲೆಂಡ್’ಗೆ 230 ರನ್’ಗಳ ಗುರಿಯನ್ನು ನೀಡಿತ್ತು, ಆದರೆ ಇಂಗ್ಲೆಂಡ್ ಕೇವಲ 129 ರನ್’ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 20 ವರ್ಷಗಳ ಬಳಿಕ ಟೀಂ ಇಂಡಿಯಾದ ಎದುರು ಮಂಡಿಯೂರಿತು.
ಜೋಸ್ ಬಟ್ಲರ್ ಹೇಳಿದ್ದೇನು?
ಭಾರತವನ್ನು ಕಡಿಮೆ ರನ್’ಗಳಿಗೆ ಕಟ್ಟಿಹಾಕಿದ್ದರೂ ಸಹ, ಗೆಲುವು ಸಾಧಿಸಲು ಇಂಗ್ಲೆಂಡ್’ಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಜೋಸ್ ಬಟ್ಲರ್, “230 ರನ್’ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಮೈದಾನ ಒದ್ದೆಯಾಯಿತು, ನಮ್ಮನ್ನೇ ನಂಬಿದ್ದೆವು. ಆದರೆ ಮತ್ತೆ ಹಳೆಯ ಕಥೆ ಪುನರಾವರ್ತನೆಯಾಯಿತು” ಎಂದಿದ್ದಾರೆ.
“ಬೌಲರ್’ಗಳು ಉತ್ತಮ ಆರಂಭ ನೀಡಿದರೂ ಸಹ ಬ್ಯಾಟ್ಸ್‌ಮನ್’ಗಳು ನಿರಾಸೆ ಮೂಡಿಸಿದರು. ಬೌಲರ್’ಗಳು ಪವರ್‌ಪ್ಲೇನಲ್ಲಿ ಉತ್ತಮ ಆರಂಭವನ್ನು ಮಾಡಿದರು. ಫೀಲ್ಡಿಂಗ್ ಉತ್ತಮವಾಗಿತ್ತು, ಆದರೆ ನಾವು ಬ್ಯಾಟಿಂಗ್ ಮಾಡಿದ ರೀತಿ ನಿರಾಶಾದಾಯಕವಾಗಿತ್ತು. ನಮ್ಮ ಆಟಗಾರರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ, ನಾವು ವಿಫಲರಾಗಿದ್ದೇವೆ. ನಮ್ಮ ಮೇಲೆ ಸ್ಕೋರ್ ಬೋರ್ಡ್’ನ ಒತ್ತಡ ಇರಲಿಲ್ಲ, ಆದರೆ ಭಾರತದ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರ. ನಾವು ನಿರಾಶಾದಾಯಕ ಪ್ರದರ್ಶನ ನೀಡಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಾಸಾದ್ರೆ ಹೊರಗುಳಿಯೋದು ಶಮಿ ಅಲ್ಲ… ಈ ಸ್ಟಾರ್ ಬ್ಯಾಟ್ಸ್’ಮನ್!
ಸದ್ಯ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎಲ್ಲಾ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಆ ಬಳಿಕ ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಇವುಗಳ ಹೊರತಾಗಿ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದ್ದು, ತಂಡ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.