World Cup 2023: ಶ್ರೀಲಂಕಾ ಸೋಲಿನಿಂದ ಅಧಿಕೃತವಾಗಿ ಸೆಮೀಸ್ ಪ್ರವೇಶಿಸಿದ ಭಾರತ! ಹೇಗೆ ಗೊತ್ತಾ?

Team India Enters Semi Final, Cricket News in Kannada: ಈಗಾಗಲೇ ಅಗ್ರಸ್ಥಾನದಲ್ಲಿರುವ ಭಾರತ 12 ಅಂಕಗಳನ್ನು ಪಡೆದುಕೊಂಡಿದೆ. ಆದರೆ ಕೇವಲ 4 ಅಂಕಗಳನ್ನು ಪಡೆದುಕೊಂಡಿರುವ ಶ್ರೀಲಂಕಾ ಅಫ್ಘನ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡು ಪಾಯಿಂಟ್ ಪಡೆದುಕೊಳ್ಳುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ.

Written by - Bhavishya Shetty | Last Updated : Oct 30, 2023, 09:51 PM IST
    • ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಹಾದಿಯ ಸಮೀಪದಲ್ಲಿದೆ
    • ನವೆಂಬರ್ 2ರಂದು ಟೀಂ ಇಂಡಿಯಾ ಜೊತೆ ಶ್ರೀಲಂಕಾ ಮುಖಾಮುಖಿಯಾಗಲಿದೆ
    • ಭಾರತ ತನ್ನ ಅಜೇಯ ಪ್ರದರ್ಶನದಿಂದ ಸೆಮಿಫೈನಲ್ ರೇಸ್’ನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿದೆ
World Cup 2023: ಶ್ರೀಲಂಕಾ ಸೋಲಿನಿಂದ ಅಧಿಕೃತವಾಗಿ ಸೆಮೀಸ್ ಪ್ರವೇಶಿಸಿದ ಭಾರತ! ಹೇಗೆ ಗೊತ್ತಾ? title=
Team India

Team India Enters Semi Final: ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಹಾದಿಯ ಸಮೀಪದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಸಾಕು ವಿಶ್ವಕಪ್ ಸೆಮೀಸ್ ತಲುಪೋದು ಕನ್ಫರ್ಮ್. ಆದರೆ ಅದಕ್ಕೂ ಮುನ್ನವೇ ಅಧಿಕೃತವಾಗಿ ಭಾರತ ಸೆಮೀಸ್ ಪ್ರವೇಶಿಸಿದೆ. ಇದಕ್ಕೆ ಕಾರಣವಾಗಿದ್ದು ಶ್ರೀಲಂಕಾದ ಸೋಲು. ಈ ಲೆಕ್ಕಾಚಾರ ಹೇಗೆ ಗೊತ್ತಾ? ಮುಂದೆ ತಿಳಿಯೋಣ.

ಇದನ್ನೂ ಓದಿ: “ಇದೇ ಕಾರಣಕ್ಕೆ ಟೀಂ ಇಂಡಿಯಾ ಅಂದ್ರೆ ಇಷ್ಟ..”-ಸತತ ಗೆಲುವು ಕಂಡ ಭಾರತದ ಬಗ್ಗೆ ಪಾಕ್ ಆಟಗಾರನ ಹೇಳಿಕೆ ವೈರಲ್

ಇಂದು ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಸೋಲು ಕಂಡಿದೆ. ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದ್ದು, ಈ ಪಂದ್ಯದಲ್ಲಿ ಶ್ರೀಲಂಕಾ ಸೋಲುಂಡು, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ತಾನು ಆಡಬೇಕಿದ್ದ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆದ್ದಿದ್ದರೆ, 8 ಅಂಕ ಪಡೆದುಕೊಂಡು ಸೆಮೀಸ್ ರೇಸ್’ನಲ್ಲಿ ಇರುತ್ತಿತ್ತು. ಆದರೆ ಇಂದು ಅಫ್ಘನ್ನರ ವಿರುದ್ಧ ಸೋತು ಆ ಅವಕಾಶವನ್ನು ಕಳೆದುಕೊಂಡಿದೆ.

ಇನ್ನು ನವೆಂಬರ್ 2ರಂದು ಟೀಂ ಇಂಡಿಯಾ ಜೊತೆ ಶ್ರೀಲಂಕಾ ಮುಖಾಮುಖಿಯಾಗಲಿದೆ. ಈಗಾಗಲೇ ಅಗ್ರಸ್ಥಾನದಲ್ಲಿರುವ ಭಾರತ 12 ಅಂಕಗಳನ್ನು ಪಡೆದುಕೊಂಡಿದೆ. ಆದರೆ ಕೇವಲ 4 ಅಂಕಗಳನ್ನು ಪಡೆದುಕೊಂಡಿರುವ ಶ್ರೀಲಂಕಾ ಅಫ್ಘನ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡು ಪಾಯಿಂಟ್ ಪಡೆದುಕೊಳ್ಳುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ. ಜೊತೆಗೆ ಭಾರತ ತನ್ನ ಅಜೇಯ ಪ್ರದರ್ಶನದಿಂದ ಸೆಮಿಫೈನಲ್ ರೇಸ್’ನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿದೆ.

ಅಲ್ಲದೆ, ಆರು ಪಂದ್ಯದಲ್ಲಿ ಮೂರು ಪಂದ್ಯ ಗೆದ್ದು ಮೂರನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ 12 ಅಂಕ ಪಡೆಯುವ ಸಾಧ್ಯತೆಯಿದೆ. ಆದರೆ ಅಫ್ಘಾನಿಸ್ತಾನದ ರನ್ ರೇಟ್ ಮೈನಸ್’ನಲ್ಲಿರುವ ಕಾರಣ ಮುಂಬರುವ ಮೂರು ಪಂದ್ಯ ಗೆದ್ದರೂ ಭಾರತಕ್ಕಿಂತ ಉತ್ತಮ ರನ್ ರೇಟ್ ಹೊಂದಲು ಸಾಧ್ಯವಿಲ್ಲ. ಹಾಗಾಗಿ ಭಾರತ ಕೇವಲ 12 ಅಂಕಗಳಿದ್ದರು ಸುಲಭವಾಗಿ ಸೆಮಿಫೈನಲ್ಸ್ ಪ್ರವೇಶಸಲಿದೆ.

ಅಂದಹಾಗೆ ಉಳಿದ ಮೂರು ತಂಡಗಳಿಗೆ ಅಂದರೆ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗೆ ಮಾತ್ರ ಪಾಯಿಂಟ್ಸ್ ಟೇಬಲ್’ನಲ್ಲಿ 12 ಅಂಕ ಪಡೆಯಲು ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿದೆ. ಉಳಿದ ಯಾವ ತಂಡ ಕೂಡ ಈ ಸಾಧನೆ ಮಾಡಲು ಸಾಧ್ಯವಿಲ್ಲದ ಕಾರಣ ಭಾರತ ನಿರಾಯಾಸವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ: World Cup : ಟಾಪ್ 4 ರಲ್ಲಿ ಈ ತಂಡಗಳು ! ಪಾಯಿಂಟ್ ಟೇಬಲ್ ಸ್ಪಷ್ಟ ಚಿತ್ರಣ ಇಲ್ಲಿದೆ

ಆದರೆ ಟೀಂ ಇಂಡಿಯಾಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು, ಯಾವ ಸ್ಥಾನ ಪಡೆದು ಸೆಮಿಸ್ ಪ್ರವೇಶಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News