ನವದೆಹಲಿ: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಕೆ.ಎಲ್.ರಾಹುಲ್ ಭಾರತದ ಇತರ ಬ್ಯಾಟ್ಸ್‌ಮನ್ ಗಳಿಗಿಂತ ಹೆಚ್ಚಿನ ಸಂಗ್ರಹವನ್ನು ಹೊಂದಿದ್ದಾರೆ ಎಂದು ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ದುಬೈನಲ್ಲಿ ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 42 ಎಸೆತಗಳಲ್ಲಿ ಅಜೇಯ  98 ರನ್ ಗಳಿಸಿದ್ದು ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿತ್ತು ಇದರಲ್ಲಿ ಅವರ ಭರ್ಜರಿ ಎಂಟು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಸಿಡಿಸಿದ್ದರು.


ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಅಜೇಯ್ ಜಡೇಜಾ ನೀಡಿದ ಶಾಕಿಂಗ್ ಹೇಳಿಕೆ ಏನು ಗೊತ್ತಾ?


ಈಗ ಕೆ.ಎಲ್.ರಾಹುಲ್ (KL Rahul) ಕುರಿತಾಗಿ ಮಾತನಾಡಿರುವ ಗಂಭೀರ್ ' ಅವರಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹೆಚ್ಚಿನ ಸಾಮರ್ಥ್ಯ ಇರಬಹುದು. ರಾಹುಲ್ ಅವರು ಈ ಐಪಿಎಲ್ ಅಭಿಯಾನದ ಉದ್ದಕ್ಕೂ ಗುರುವಾರದಂತೆ ಬ್ಯಾಟಿಂಗ್ ಮಾಡಿದ್ದಿದ್ದರೆ, ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿರುತ್ತಿತ್ತು ಎಂದು ಗಂಭೀರ್ ಹೇಳಿದರು.


ಇದನ್ನೂ ಓದಿ: IPL 2021: ಕನ್ನಡಿಗ ಕೆ.ಎಲ್.ರಾಹುಲ್ ಗೆ ಅದೃಷ್ಟ ಕೈಕೊಟ್ಟಾಗ..!


'ನೀವು ಈ ರೀತಿ ಬ್ಯಾಟ್ ಮಾಡಲು ಸಾಧ್ಯವಾದರೆ, ನೀವು ಯಾಕೆ ಈ ರೀತಿ ಬ್ಯಾಟ್ ಮಾಡಬಾರದು? ಮತ್ತು ಅವರು ಈ ರೀತಿ ಬ್ಯಾಟ್ ಮಾಡಲು ಸಾಧ್ಯವಾದರೆ, ಬಹುಶಃ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದಿದ್ದಾರೆ. ನಾನು ಕೆಎಲ್ ರಾಹುಲ್ ಅವರನ್ನು ನೋಡಿದ ಮಾತ್ರಕ್ಕೆ ನಾನು ಅದನ್ನು ಹೇಳುತ್ತಿಲ್ಲ ಇಂದು ಅದನ್ನು ಮಾಡುತ್ತಿದ್ದಾರೆ; ಅವರು ಅದನ್ನು ಹೊಂದಿದ್ದಾರೆ. ಅವರು ಭಾರತದಲ್ಲಿ ಬೇರೆಯವರಿಗಿಂತ ಹೆಚ್ಚಿನ ಹೊಡೆತಗಳನ್ನು ಹೊಂದಿದ್ದಾರೆ. ಮತ್ತು ಅವರು ಅದನ್ನು ಇಂದು ತೋರಿಸಿದ್ದಾರೆ "ಎಂದು ಗಂಭೀರ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ತಿಳಿಸಿದರು.


ಇದನ್ನೂ ಓದಿ: Kolkata vs Punjab: ಮಿಂಚಿದ ಕೆ.ಎಲ್.ರಾಹುಲ್,ಮಾಯಾಂಕ್, ಪಂಜಾಬ್ ಗೆ 5 ವಿಕೆಟ್ ಗಳ ಭರ್ಜರಿ ಗೆಲುವು


'ನೀವು ನಿಮ್ಮ ಆಟವಾಡಿ, ಭಾರತ ಮಾತ್ರವಲ್ಲ. ನಿಮ್ಮ ಸಾಮರ್ಥ್ಯವನ್ನು ಈ ಜಗತ್ತಿಗೆ ತೋರಿಸಿ. ಜನರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವಾಗ, ಬಹುಶಃ ಜನರು ನಿಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಯಾಕಂದರೆ ನೀವು ಎಲ್ಲರಿಗಿಂತಲೂ ಉತ್ತಮ ಹೊಡೆತಗಳನ್ನು ಹೊಂದಿದ್ದೀರಿ ಎಂದು ಗಂಭೀರ ಹೇಳಿದರು.


ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.