IPL 2021: ಕನ್ನಡಿಗ ಕೆ.ಎಲ್.ರಾಹುಲ್ ಗೆ ಅದೃಷ್ಟ ಕೈಕೊಟ್ಟಾಗ..!

ಸುಲಭವಾಗಿ ಗೆಲುವು ಸಾಧಿಸುವ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರೋಚಿತ ಸೋಲು ಅನುಭವಿಸಿತು.

Written by - Puttaraj K Alur | Last Updated : Sep 22, 2021, 10:57 AM IST
  • ಪಂಜಾಬ್ ಪರ ಮೊದಲ ವಿಕೆಟ್ ಗೆ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 120 ರನ್ ಗಳ ಜೊತೆಯಾಟವಾಡಿದ್ದರು
  • ಕೊನೆಯ ಓವರ್ ನಲ್ಲಿ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 6 ಎಸೆತಗಳಲ್ಲಿ ಕೇವಲ 4 ರನ್ ಗಳ ಅವಶ್ಯಕತೆ ಇತ್ತು
  • ಅದ್ಭುತವಾಗಿ ಬೌಲಿಂಗ್ ಮಾಡಿದ ಕಾರ್ತಿಕ್ ತ್ಯಾಗಿ ಕೇವಲ 1 ರನ್ ನೀಡಿ 2 ವಿಕೆಟ್ ಪಡದು ಪಂದ್ಯದ ಹೀರೋ ಎನಿಸಿಕೊಂಡರು
IPL 2021: ಕನ್ನಡಿಗ ಕೆ.ಎಲ್.ರಾಹುಲ್ ಗೆ ಅದೃಷ್ಟ ಕೈಕೊಟ್ಟಾಗ..!

ನವದೆಹಲಿ: ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League)ಯ 32ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರೋಚಿತ ಸೋಲು ಅನುಭವಿಸಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ರಾಹುಲ್ ಪಡೆ ಅಷ್ಟೇ ಸುಲಭವಾಗಿ ಕೈಚೆಲ್ಲಿತು. ಇದು ತಂಡದ ಲಕ್ಷಾಂತರ ಅಭಿಮಾನಿಗಳಿಗೆ ಅಪಾರ ನೋವು ತಂದಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್(Rajasthan Royals) ನಿಗದಿತ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತ್ತು. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್(49), ಮಹಿಪಾಲ್ ಲೊಮರ್ (43), ಎವಿನ್ ಲೂಯಿಸ್(36) ಮತ್ತು ಲಿಯಾಮ್ ಲಿವಿಂಗ್ಸ್ಟೋನ್(25) ಭರ್ಜರಿ ಆಟವಾಡಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.

ಇದನ್ನೂ ಓದಿ: ICC World Cup ಆಟವಾಡಬೇಕಿರುವ ಈ ದೇಶದಲ್ಲಿ IPL ವೀಕ್ಷಣೆಯ ಮೇಲೆ ಬ್ಯಾನ್, ಕಾರಣ ಬೆಚ್ಚಿಬೀಳಿಸುವಂತಿದೆ

186 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್(Punjab Kings) ಸ್ಫೋಟಕ ಆರಂಭ ಒದಗಿಸಿತು. ನಾಯಕ ಕೆ.ಎಲ್.ರಾಹುಲ್(KL Rahul) ಮತ್ತು ಮಾಯಾಂಕ್ ಅಗರ್ವಾಲ್ ಮೊದಲ ವಿಕೆಟ್ ಗೆ 120 ರನ್ ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಆದರೆ ಕನ್ನಡಿಗ ರಾಹುಲ್ ಗೆ ಈ ಪಂದ್ಯ ಗೆಲ್ಲಲು ಅನೇಕ ಅವಕಾಶಗಳಿದ್ದವು. ತುಂಬಾ ಸುಲಭವಾಗಿ ಗೆಲ್ಲಬೇಕಾದ ಪಂದ್ಯದಲ್ಲಿ ರಾಹುಲ್ ಪಡೇ ವಿರೋಚಿತ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಬೇಕಾಯಿತು. ಅದೃಷ್ಟ ಕೈಕೊಟ್ಟರೇ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ನಿನ್ನೆಯ ಪಂದ್ಯವೇ ಸಾಕ್ಷಿ. ಈ ಪಂದ್ಯದಲ್ಲಿ ಸೋಲಬೇಕಾಗಿದ್ದ ರಾಜಸ್ಥಾನ್ ಗೆ ಅದೃಷ್ಟ ಕೈಹಿಡಿಯಿತು ಮತ್ತು ಗೆಲ್ಲಬೇಕಾದ ಪಂಜಾಗ್ ಗೆ ಅದೃಷ್ಟ ಕೈಕೊಟ್ಟಿತು.

ಕೆ.ಎಲ್. ರಾಹುಲ್(KL Rahul) ದುರಾದೃಷ್ಟ ಹೇಗಿತ್ತೆಂದರೆ ಸವಾಲಿನ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಬ್ಯಾಟ್ಸ್ ಮನ್ ಗಳ ಐದಾರು ಕ್ಯಾಚ್ ಗಳನ್ನು ರಾಜಸ್ಥಾನ್ ಆಟಗಾರರು ಕೈಚೆಲ್ಲಿದ್ದರು. ಒಂದು ವೇಳೆ ನಿನ್ನೆ ಪಂಜಾಬ್ ಗೆಲುವು ಸಾಧಿಸಿದ್ದರೆ ಹಲವಾರು ಕ್ಯಾಚ್ ಕೈಬಿಟ್ಟಿದ್ದರಿಂದಲೇ ರಾಜಸ್ಥಾನ್ ಗೆ ಸೋಲಾಯಿತು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದರು. ಬಳಿಕ ಮೊದಲ ವಿಕೆಟ್ ಗೆ ರಾಹುಲ್ ಮತ್ತು ಮಯಾಂಕ್ 120 ರನ್ ಗಳ ಭರ್ಜರಿ ಜೊತೆಯಾಟವಾಡಿದರೂ ಪ್ರಯೋಜನವಾಗಲಿಲ್ಲ. 3ನೇಯದ್ದು ಕೆ.ಎಲ್.ರಾಹುಲ್ ಅರ್ಧಶತಕ ವಂಚಿತನಾಗಿದ್ದು. 49 ರನ್ ಗಳಿಸಿದ್ದ ಅವರು ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: IPL 2021: ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ತುತ್ತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪಂದ್ಯದ ಪ್ರಮುಖ ಅಂಶವೆಂದರೆ ಪಂಜಾಬ್ 19ನೇ ಓವರ್ ನಲ್ಲಿ 182 ರನ್ ಗಳಿಸಿತ್ತು. ಕೊನೆಯ ಓವರ್ ನಲ್ಲಿ ರಾಹುಲ್ ಪಡೆ ಗೆಲುವಿಗೆ ಬೇಕಾಗಿದ್ದು ಕೇವಲ 6 ಎಸೆತಗಳಲ್ಲಿ 4 ರನ್. ಆದರೆ ಅದೃಷ್ಟ ಪಂಜಾಬ್ ತಂಡದ ಕೈಹಿಡಿಯಲಿಲ್ಲ. ಸುಲಭವಾಗಿ ಗೆಲುವು ಸಾಧಿಸಬೇಕಾಗಿದ್ದ ರಾಹುಲ್ ಪಡೆಗೆ ರಾಜಸ್ಥಾನ್ ಬೌಲರ್ ಕಾರ್ತಿಕ್ ತ್ಯಾಗಿ(Kartik Tyagi) ವಿಲನ್ ಆದರು. ಅದ್ಭುತವಾಗಿ ಬೌಲಿಂಗ್ ಮಾಡಿದ ಅವರು 2 ವಿಕೆಟ್ ಪಡೆದು ಕೇವಲ 1 ರನ್ ಮಾತ್ರ ನೀಡಿದರು. ಸೋಲಿನ ಅಂಚಿನಲ್ಲಿ ಸಿಲುಕಿದ್ದ ರಾಜಸ್ಥಾನ್ ರಾಯಲ್ಸ್ ಕೇವಲ 2 ರನ್ ಅಂತರದಲ್ಲಿ ಪಂಜಾಬ್ ಗೆ ಸೋಲುನಿಸಿತು. ಗೆಲುವಿನ ಅಂಚಿನಲ್ಲಿದ್ದ ರಾಹುಲ್ ಪಡೆ ಸೋತು ನಿರಾಸೆ ಅನುಭವಿಸಿತು.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News