ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ 45 ನೇಯ ಪಂದ್ಯದಲ್ಲಿ ಪಂಜಾಬ್ ತಂಡವು ಕೋಲ್ಕತ್ತಾ ವಿರುದ್ಧ ಐದು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ತಂಡವು ಕೋಲ್ಕತ್ತಾ ತಂಡವನ್ನು 20 ಓವರ್ ಗಳಲ್ಲಿ ಏಳು ವಿಕೆಟ್ ಕಬಳಿಸುವ ಮೂಲಕ 165 ರನ್ ಗಳಿಗೆ ಕಟ್ಟಿ ಹಾಕಿತು. ಕೋಲ್ಕತ್ತಾ ತಂಡದ ಪರವಾಗಿ ವೆಂಕಟೇಶ್ ಅಯ್ಯರ್ 67, ತ್ರಿಪಾಠಿ 34, ನಿತೇಶ್ ರಾಣಾ 31, ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಪಂಜಾಬ್ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಆರ್ಶೀಪ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಕೋಲ್ಕತ್ತಾ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಇದನ್ನೂ ಓದಿ- Cricketers : ಈ ಸ್ಟಾರ್ ಕ್ರಿಕೆಟಿಗರು ತಮ್ಮ ಪತ್ನಿಯರಿಗೆ 'ಪ್ರಪೋಸ್' ಮಾಡಿದ್ದು ಹೇಗೆ? ಇಲ್ಲಿದೆ ಇಂಟರಸ್ಟಿಂಗ್ ಸ್ಟೋರಿಗಳು!
ಇನ್ನೊಂದೆಡೆ 166 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡವು ಉತ್ತಮ ಆರಂಭವನ್ನೇ ಕಂಡಿತು.ಕನ್ನಡಿಗರಾದ ಕೆ.ಎಲ್ ರಾಹುಲ್ (KL Rahul) ಮತ್ತು ಮಾಯಾಂಕ್ ಆಗರ್ವಾಲ್ ಮೊದಲನೇ ವಿಕೆಟ್ ಗೆ 70 ರನ್ ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.
KL Rahul is adjudged Man of the Match for his match-winning knock of 67 as #PBKS win by 5 wickets.
Scorecard - https://t.co/lUTQhNQURm #VIVOIPL pic.twitter.com/3aE9zd78xg
— IndianPremierLeague (@IPL) October 1, 2021
ಇದನ್ನೂ ಓದಿ- PR Sreejesh: ಗೋಲ್‌ಕೀಪರ್ ಶ್ರೀಜೇಶ್‌ಗೆ 2 ಕೋಟಿ ರೂ., ಜೊತೆಗೆ ಬಡ್ತಿಯನ್ನೂ ಘೋಷಿಸಿದ ಕೇರಳ ಸರ್ಕಾರ
ಕೆ.ಎಲ್ ರಾಹುಲ್ ಅವರು ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ ಕೇವಲ 55 ಎಸೆತಗಳಲ್ಲಿ 67 ರನ್ ಗಳಿಸಿದರೆ,ಮಾಯಾಂಕ್ ಅಗರವಾಲ್ ಕೇವಲ 27 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಮೂರು ಭರ್ಜರಿ ಬೌಂಡರಿಗಳ ಮೂಲಕ 40 ರನ್ ಗಳಿಸಿದರು.ಆ ಮೂಲಕ ಪಂಜಾಬ್ ತಂಡವು 19.3 ಓವರ್ ಗಳಲ್ಲಿ 168 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.