IPL 2024: ಒಂದೇ ಪಂದ್ಯದಲ್ಲಿ ಒಂದರ ಮೇಲೊಂದರಂತೆ 5 ದಾಖಲೆ ಬರೆದ Mahendra Singh Dhoni
IPL 2024 DC vs CSK: ಈ ಋತುವಿನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಗೆ ಇಳಿದ ಕ್ಯಾಪ್ಟನ್ ಕೂಲ್ ಒಂದೇ ಪಂದ್ಯದಲ್ಲಿ ಐದು ದಾಖಲೆಗಳನ್ನು ಮಾಡಿ ದೆಹಲಿ ಗೆಲುವುಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. (IPL 2024 News In Kannada)
DC vs CSK MS Dhoni Records: ಐಪಿಎಲ್ 2024ರ (Indian Premier League 2024) 13ನೇ ಪಂದ್ಯ ಭಾನುವಾರ ವಿಶಾಖಪಟ್ಟಣಂನಲ್ಲಿ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ತನ್ನ ಖಾತೆ ತೆರೆದಿದೆ. ಈ ಬಾರಿಯ ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಪಂದ್ಯದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಿದ್ದಾರೆ. ಆದರೆ ಅವರ ಈ ಒಂದು ಇನ್ನಿಂಗ್ಸ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗಿಂತ ಧೋನಿ ಬ್ಯಾಟಿಂಗ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಏಕೆಂದರೆ ಧೋನಿ ಒಂದೇ ಪಂದ್ಯದಲ್ಲಿ ಒಂದಲ್ಲ ಎರಡಲ್ಲ ಒಟ್ಟು ಐದು ದಾಖಲೆಗಳನ್ನು ಬರೆದಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ಯಾವ ಐದು ದಾಖಲೆಗಳನ್ನು ಧೋನಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ ತಿಳಿದುಕೊಳ್ಳೋಣ ಬನ್ನಿ, (IPL 2024 News In Kannada)
MS ಧೋನಿ IPL ನಲ್ಲಿ ಒಂದೇ ಪಂದ್ಯದಲ್ಲಿ ಐದು ದಾಖಲೆಗಳನ್ನು ಮಾಡಿದರು (Mahendra Singh Dhoni Made Five Records In Single Match Of IPL 2024)
7000 ರನ್ ಪೂರೈಸಿದ ಏಷ್ಯಾದ ಮೊದಲ ಬ್ಯಾಟ್ಸ್‌ಮನ್
ಈ ಪಂದ್ಯದಲ್ಲಿ ಎಂಎಸ್ ಧೋನಿ ಟಿ20ಯಲ್ಲಿ ವಿಕೆಟ್ ಕೀಪರ್ ಆಗಿ 7000 ರನ್ ಗಳಿಸಿದ ಏಷ್ಯಾದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನದಲ್ಲಿದ್ದರೆ (6962) ಮತ್ತು ಕಮ್ರಾನ್ ಅಕ್ಮಲ್ ಮೂರನೇ ಸ್ಥಾನದಲ್ಲಿ (6454) ಇದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ತಮ್ಮ ಹೆಸರಿನಲ್ಲಿದ್ದ 5 ದಾಖಲೆಗಳಲ್ಲಿ ಇದೂ ಒಂದಾಗಿದ್ದಾರೆ.
ಧೋನಿ 9 ಬಾರಿ ಓವರ್‌ನಲ್ಲಿ 20 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ
ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಐಪಿಎಲ್ ಇನ್ನಿಂಗ್ಸ್‌ನಲ್ಲಿ 9 ಬಾರಿ ಓವರ್‌ನಲ್ಲಿ 20 ರನ್ ಗಳಿಸಿದ್ದಾರೆ, ಎನ್ರಿಕ್ ನಾರ್ಕಿಯಾ ಅವರ ಕೊನೆಯ ಓವರ್‌ನಲ್ಲಿ ಅವರು 20 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ, ರಿಷಬ್ ಪಂತ್, ವೀರೇಂದ್ರ ಸೆಹ್ವಾಗ್, ಯೂಸುಫ್ ಪಠಾಣ್ ಮತ್ತು ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ. ರೋಹಿತ್ ಶರ್ಮಾ 8 ಬಾರಿ, ರಿಷಬ್ ಪಂತ್ 6 ಬಾರಿ, ವೀರೇಂದ್ರ ಸೆಹ್ವಾಗ್, ಯೂಸುಫ್ ಪಠಾಣ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 5 ಬಾರಿ 20 ರನ್ ಗಳಿಸಿದ್ದಾರೆ.
3. ಐಪಿಎಲ್‌ನಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ 5000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್
ಈ ಪಂದ್ಯದಲ್ಲಿ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ 5000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ 4233 ರನ್, ರಾಬಿನ್ ಉತ್ತಪ್ಪ 3011 ರನ್, ಕ್ವಿಂಟನ್ ಡಿ ಕಾಕ್ 2812 ರನ್ ಮತ್ತು ರಿಷಬ್ ಪಂತ್ 2737 ರನ್ ಗಳಿಸಿದ್ದಾರೆ.
ಇದನ್ನೂ ಓದಿ-CSK ವಿರುದ್ಧ Prithvi Shaw ಆಟ ಕಂಡು ಇನ್ಸ್ಟಾ ಸ್ಟೋರಿ ಹಂಚಿಕೊಂಡ ಗೆಳತಿ Nidhi Tapadia
19 ಮತ್ತು 20ನೇ ಓವರ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್
ಎಂಎಸ್ ಧೋನಿ ಐಪಿಎಲ್ ಇನ್ನಿಂಗ್ಸ್‌ನ 19ನೇ ಮತ್ತು 20ನೇ ಓವರ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕೀರಾನ್ ಪೊಲಾರ್ಡ್ 57, ಎಬಿ ಡಿವಿಲಿಯರ್ಸ್ 55, ಹಾರ್ದಿಕ್ ಪಾಂಡ್ಯ 55, ಆಂಡ್ರೆ ರಸೆಲ್ 51 ಮತ್ತು ರವೀಂದ್ರ ಜಡೇಜಾ 46 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ-Sunil Narine Love Story: ಮೊದಲು ಭಾರತೀಯ ಯುವತಿಯನ್ನು ವಿವಾಹವಾದ Sunil Narine ನಂತರ ಮತ್ತೆ ವರನಾಗಿದ್ದು ಹೇಗೆ?
300 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಮೊದಲ ವಿಕೆಟ್‌ಕೀಪರ್
ಈ ಪಂದ್ಯದಲ್ಲಿ ಎಂಎಸ್ ಧೋನಿ ಪೃಥ್ವಿ ಶಾ ಅವರ ಸುಲಭ ಕ್ಯಾಚ್ ಪಡೆಯುವ ಮೂಲಕ ಟಿ 20 ಕ್ರಿಕೆಟ್‌ನಲ್ಲಿ 300 ಬ್ಯಾಟ್ಸ್‌ಮನ್‌ಗಳನ್ನು (ಕ್ಯಾಚ್ ಮತ್ತು ಸ್ಟಂಪ್) ಔಟ್ ಮಾಡಿದ ಮೊದಲ ವಿಕೆಟ್‌ಕೀಪರ್ ಏನೆಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ದಿಗ್ಗಜ ದಿನೇಶ್ ಕಾರ್ತಿಕ್ ಮತ್ತು ಕ್ವಿಂಟನ್ ಡಿ ಕಾಕ್ ಅವರನ್ನು ಹಿಂದಿಕ್ಕಿ ಮಾಹೀ ಈ ಸಾಧನೆ ಮಾಡಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ