Sunil Narine Love Story: ಮೊದಲು ಭಾರತೀಯ ಯುವತಿಯನ್ನು ವಿವಾಹವಾದ Sunil Narine ನಂತರ ಮತ್ತೆ ವರನಾಗಿದ್ದು ಹೇಗೆ?

Sunil Narine Love Triangle: ಈ ಬಾರಿಯ ಐಪಿಎಲ್ ನಲ್ಲಿ(IPL 2024) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರ ಸುನಿಲ್ ನರೈನ್ ಟಿ20 ವೃತ್ತಿ ಜೀವನದಲ್ಲಿ ತಮ್ಮ 500 ಪಂದಗಳನ್ನು ಪೂರ್ಣಗೊಳಿಸಿ ವಿಶ್ವದ ಕೆಲವೇ ಕೆಲ ಬ್ಯಾಟ್ಸ್ ಮನ್ ಗಳ ಪಟ್ಟಿ ಸೇರಿದ್ದಾರೆ.  (IPL 2024 News In Kannada)

Sunil Narine Love Triangle: ಈ ಬಾರಿಯ ಐಪಿಎಲ್ ನಲ್ಲಿ(IPL 2024) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರ ಸುನಿಲ್ ನರೈನ್ ಟಿ20 ವೃತ್ತಿ ಜೀವನದಲ್ಲಿ ತಮ್ಮ 500 ಪಂದಗಳನ್ನು ಪೂರ್ಣಗೊಳಿಸಿ ವಿಶ್ವದ ಕೆಲವೇ ಕೆಲ ಬ್ಯಾಟ್ಸ್ ಮನ್ ಗಳ ಪಟ್ಟಿ ಸೇರಿದ್ದಾರೆ.  ಬ್ಯಾಟ್ಸ್‌ಮನ್‌ಗಳಿಗೆ ಮಿಸ್ಟರಿ ಬಾಲ್‌ಗಳನ್ನು ಎಸೆಯುವಲ್ಲಿ ಸುನಿಲ್ ನರೈನ್ ನಿಷ್ಣಾತರಾಗಿದ್ದಾರೆ, ಅದರಂತೆಯೇ ಅವರ ಪ್ರೇಮಕತೆಯೂ ಕೂಡ ಸಾಕಷ್ಟು ರಹಸ್ಯಗಳಿಂದ ಕೂಡಿದೆ. ಹೌದು, ಸುನೀಲ್ ಲವ್ ಸ್ಟೋರಿ ಒಂದು ಲವ್ ಟ್ರ್ಯಾಂಗಲ್ ಎಂದರೆ ತಪ್ಪಾಗಲಾರದು. (IPL 2024 News In Kannada)

 

ಇದನ್ನೂ  ಓದಿ -Virat Kohli-Gautam Gambhir ದೋಸ್ತಿ ಕುರಿತಾದ ಈ ದೆಹಲಿ ಪೊಲೀಸ್ ಪೋಸ್ಟ್ ವೈರಲ್ ಆಗುತ್ತಿದೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

1. ಐಪಿಎಲ್ 2024 ರ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು ಸುನಿಲ್ ನರೈನ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರು 213.64 ಸ್ಟ್ರೈಕ್ ರೇಟ್‌ನಲ್ಲಿ 1 ವಿಕೆಟ್ ಮತ್ತು 47 ರನ್ ಗಳಿಸಿದ್ದಾರೆ.  

2 /6

2. ನರೇನ್ ತನ್ನ ಮಿಸ್ಟರಿ ಎಸೆತಗಳಿಂದ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳುಸ್ವಂತೆ, ಅವರ  ಪ್ರೇಮಕಥೆಯು ಕೂಡ ತುಂಬಾ ರೋಚಕವಾಗಿದೆ. ವಾಸ್ತವದಲ್ಲಿ  ನರೈನ್ ಲವ್ ಸ್ಟೋರಿ ಒಂದು ತ್ರಿಕೋನ ಪ್ರೇಮ ಕತೆಯಾಗಿದೆ.   

3 /6

3. ಈ ಹಿಂದೆ ಸುನಿಲ್ ನರೈನ್ ಭಾರತೀಯ ಮೂಲದ ಮಹಿಳೆಯನ್ನು ಮದುವೆಯಾಗಿದ್ದರು, ಆದರೆ ನಂತರ ಅವರು ಮತ್ತೊಮ್ಮೆ ಹಸೆಮಣೆ ಏರಿದ್ದಾರೆ. ನರೈನ್ ಅವರ ಪ್ರೇಮ ಜೀವನವು ಸಾಕಷ್ಟು ವೈಯಕ್ತಿಕವಾಗಿದ್ದರೂ, ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ನರೈನ್ 2013 ರಲ್ಲಿ ಭಾರತೀಯ ಮೂಲದ ನಂದಿತಾ ಅವರನ್ನು ವಿವಾಹವಾಗಿದ್ದರು. ನಂದಿತಾ ಅವರ ಪೂರ್ವಜರು ಟ್ರಿನಿಡಾಡ್‌ನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರು.  

4 /6

4. ನಂದಿತಾ ಮತ್ತು ನರೇನ್ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿತ್ತು. ಆದರೆ ನಂದಿತಾ ಅವರಿಂದ ನರೈನ್ ಯಾವಾಗ ವಿಚ್ಛೇದನ ಪಡೆದರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಾದ ನಂತರ ಅಂಜೆಲಿಯಾ ಅವರ ಜೀವನಕ್ಕೆ ಕಾಲಿಟ್ಟರು. ಆದರೆ, ಇವರಿಬ್ಬರು ಹೇಗೆ, ಯಾವಾಗ ಮತ್ತು ಎಲ್ಲಿ ಭೇಟಿಯಾದರು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ.  

5 /6

5. ನರೇನ್ 2020 ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಆಂಜೆಲಿಯಾ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಆದರೆ, ನರೇನ್ ಮತ್ತು ಆಂಜೆಲಿಯಾ ಮದುವೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ನಿಗೂಢವಾಗಿದೆ. ಇಬ್ಬರೂ ಮಗುವಿನ ಪೋಷಕರು ಕೂಡ ಆಗಿದ್ದಾರೆ. .  

6 /6

6. ಆಂಜೆಲಿಯಾ ಟ್ರಿನಿಡಾಡ್‌ನಲ್ಲಿ 'ದಿ ಫ್ಯಾಶನ್ ಅಟೆಲಿಯರ್' ಎಂಬ ಬಟ್ಟೆ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ. ನರೇನ್ ಆಗಾಗ ಆಂಜೆಲಿಯಾ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.