ಮುಂಬೈ: ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಕೇವಲ 56 ಎಸೆತಗಳಲ್ಲಿ ಮೂರನೇ ಐಪಿಎಲ್ ಶತಕವನ್ನು ಗಳಿಸಿದರು.ಟೈಮಲ್ ಮಿಲ್ಸ್ ಅವರ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಶತಕವನ್ನು ಗಳಿಸಿದರು.ಅವರ ಈ ಭರ್ಜರಿ ಇನಿಂಗ್ಸ್ ನಲ್ಲಿ ಬರೋಬ್ಬರಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ಗಳನ್ನು ಸಿಡಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಪಿಎಲ್ 2022 ಗೆ ಇರುವ ವಿಮಾ ಪಾಲಿಸಿ ಎಷ್ಟು ಗೊತ್ತಾ?


ಈಗ ಅವರ ಈ ಭರ್ಜರಿ ಇನಿಂಗ್ಸ್ ನಿಂದ ಹೊಸ ದಾಖಲೆಯನ್ನು ಕೆ.ಎಲ್ ರಾಹುಲ್ ನಿರ್ಮಿಸಿದ್ದಾರೆ.ವಿರಾಟ್ ಕೊಹ್ಲಿ ನಂತರ ಐಪಿಎಲ್‌ನಲ್ಲಿ ನಾಯಕನಾಗಿ ಬಹು ಶತಕಗಳನ್ನು ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಇದುವರೆಗೆ ವಿರಾಟ್ ಕೊಹ್ಲಿ ಅವರು ಐದು ಶತಕಗಳನ್ನು ಗಳಿಸಿದ್ದಾರೆ.


. KKR : ಟೀಂ ಇಂಡಿಯಾದ ಅಲ್ಲದೆ ಐಪಿಎಲ್ ನಿಂದಲು ಈ ಆಟಗಾರ ಔಟ್ : ಅಪಾಯದಲ್ಲಿ ವೃತ್ತಿಜೀವನ


ಇದೀಗ ನಾಯಕನಾಗಿ ರಾಹುಲ್ ಎರಡು ಶತಕಗಳಿಸುವ ಮೂಲಕ ಆಡಮ್ ಗಿಲ್‌ಕ್ರಿಸ್ಟ್, ಸಂಜು ಸ್ಯಾಮ್ಸನ್, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಆಟಗಾರರೆಲ್ಲಾ ತಲಾ ಒಂದು ಶತಕವನ್ನು ಗಳಿಸಿದ್ದಾರೆ.ಇನ್ನೊಂದು ವಿಶೇಷವೆಂದರೆ ಕೆ.ಎಲ್ ರಾಹುಲ್ ತಮ್ಮ 100 ನೇ ಐಪಿಎಲ್ ಪಂದ್ಯದಲ್ಲಿ ಶತಕವನ್ನು ಗಳಿಸಿದ್ದಾರೆ.ಆ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.