MI vs PBKS, IPL 2022: 5 ಬಾರಿಯ ಚಾಂಪಿಯನ್ ಮುಂಬೈಗೆ ಸತತ 5 ಹೀನಾಯ ಸೋಲು

ಗೆಲುವಿನ ಖಾತೆ ತೆರೆಯಲು ಮುಂಬೈ ಕೊನೆ ಓವರ್‍ವರೆಗೂ ಹೋರಾಟ ನಡೆಸಿ ವಿರೋಚಿತ ಸೋಲು ಕಂಡಿತು.

Written by - Zee Kannada News Desk | Last Updated : Apr 14, 2022, 12:15 AM IST
  • ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಹೀನಾಯ ಸೋಲು
  • ಸತತ 5 ಸೋಲು ಕಂಡು ಮುಖಭಂಗ ಅನುಭವಿಸಿದ ರೋಹಿತ್ ಶರ್ಮಾ ಪಡೆ
  • ಕೊನೆ ಓವರ್ ವರೆಗೂ ಗೆಲುವಿಗಾಗಿ ಹೋರಾಟ ನಡೆಸಿ ಸೋಲು ಕಂಡ ಮುಂಬೈ
MI vs PBKS, IPL 2022: 5 ಬಾರಿಯ ಚಾಂಪಿಯನ್ ಮುಂಬೈಗೆ ಸತತ 5 ಹೀನಾಯ ಸೋಲು title=
ಮುಂಬೈಗೆ ಮತ್ತೊಂದು ಹೀನಾಯ ಸೋಲು

ಮುಂಬೈ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಂದು ಹೀನಾಯ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ಎದುರು ರೋಹಿತ್ ಶರ್ಮಾ ಪಡೆ ಮಂಡಿಯೂರಿತು. ಈ ಮೂಲಕ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಸತತ 5 ಸೋಲು ಕಾಣುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.

ಟಾಸ್ ಗೆದ್ದ ಮುಂಬೈ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ದೊಡ್ಡ ಮೊತ್ತದ ಗುರಿ ಬೆನ್ನತ್ತಿದ ಮುಂಬೈ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲುವಿನ ಖಾತೆ ತೆರೆಯಲು ಮುಂಬೈ ಕೊನೆ ಓವರ್ ವರೆಗೂ ಹೋರಾಟ ನಡೆಸಿ ವಿರೋಚಿತ ಸೋಲು ಕಂಡಿತು. ಸತತ 5 ಹೀನಾಯ ಸೋಲುಗಳಿಂದ ರೋಹಿತ್ ಶರ್ಮಾ ಪಡೆ ಕಂಗೆಟ್ಟು ಹೋಗಿದೆ.  

ಇದನ್ನೂ ಓದಿ: CSK vs RCB : ಉತ್ತಪ್ಪ ಸಿಕ್ಸರ್‌ ಬಿರುಗಾಳಿಗೆ ಬೆಚ್ಚಿಬಿದ್ದ ಆರ್‌ಸಿಬಿ! ದಾಖಲೆ ಬರೆದ ಬ್ಯಾಟ್ಸ್‌ಮನ್

ಧವನ್-ಮಯಾಂಕ್ ಅಬ್ಬರ!

ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್(70) ಮತ್ತು ನಾಯಕ ಮಯಾಂಕ್ ಅಗರ್ವಾಲ್(52) ಅಬ್ಬರ ಬ್ಯಾಟಿಂಗ್ ನಡೆಸಿದರು. ಮುಂಬೈ ಬೌಲರ್‍ಗಳಿಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 97 ರನ್‍ಗಳ ಉತ್ತಮ ಜೊತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟಿತು. ಇನ್ನುಳಿದಂತೆ ಜಿತೇಶ್ ಶರ್ಮಾ(30), ಶಾರೂಖ್ ಖಾನ್(15) ಜಾನಿ ಬೈರ್​ಸ್ಟೋವ್(12)  ರನ್ ಗಳಿಸಿದರು. ಮುಂಬೈ ಪರ ಬಿಸಿಲ್ ಥಾಂಪಿ 2, ಉನದ್ಕತ್, ಬುಮ್ರಾ, ಎಂ.ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.

ಕೊನೆವರೆಗೂ ಹೋರಾಟ ನಡೆಸಿದ ಮುಂಬೈ

ಪ್ರಸಕ್ತ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈಗೆ ಕೊನೆವರೆಗೂ ಹೋರಾಟ ನಡೆಸಿದರೂ ವಿಜಯಲಕ್ಷ್ಮಿ ಒಲಿಯಲಿಲ್ಲ. ಮುಂಬೈ ಪರ ಡೆವಾಲ್ಡ್ ಬ್ರೆವಿಸ್(49), ಸೂರ್ಯಕುಮಾರ್ ಯಾದವ್(43), ತಿಲಕ್ ವರ್ಮಾ(36), ನಾಯಕ ರೋಹಿತ್ ಶರ್ಮಾ(28), ಜಯದೇವ್ ಉನದ್ಕತ್(12) ಮತ್ತು ಕಿರನ್ ಪೋಲಾರ್ಡ್(10) ರನ್ ಗಳಿಸಿದರು. ಪಂಜಾಬ್ ಪರ ಒಡೀನ್ ಸ್ಮಿತ್ 4 ವಿಕೆಟ್ ಕಬಳಿಸಿದರೆ, ಕಗಿಸೊ ರಬಾಡ 2 ಹಾಗೂ ವೈಭವ್ ಅರೋರಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Rohit Sharma : ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ರೋಹಿತ್ : ಈ ದಾಖಲೆಯ ಮೇಲೆ 'ಹಿಟ್‌ಮ್ಯಾನ್' ಕಣ್ಣು

ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿರುವ ಪಂಜಾಬ್ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆಡಿರುವ 5 ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಸದ್ಯ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ತನ್ನ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News